ಮಹೇಶ್ ಬಾಬುನ ಪತ್ನಿ ನಮ್ರತಾ ಮುದ್ದಾಗಿ ಕರಿಯೋದು ಹೀಗಂತೆ!

First Published | Oct 6, 2024, 11:10 AM IST

ಟಾಲಿವುಡ್ ಪ್ರಿನ್ಸ್‌ ಮಹೇಶ್‌ ಬಾಬು ಹಾಗೂ ನಟಿ ನಮ್ರತಾ ಶಿರೋಡ್ಕರ್‌ ಪ್ರೀತಿಸಿ ಮದುವೆ ಆಗಿದ್ರು. ಇಬ್ಬರಿಗೂ ಮುದ್ದಿನ ಹೆಸರುಗಳಿವೆ. ಆದ್ರೆ ಮಹೇಶ್‌ನ ತಾನು ಮನೇಲಿ ಮುದ್ದಾಗಿ ಏನಂತಾ ಕರೀತೀನಿ ಅಂತ ನಮ್ರತಾ ಹೇಳಿದ್ದಾರೆ. 
 

ಸೂಪರ್‌ ಸ್ಟಾರ್‌ ಮಹೇಶ್ ಒಂದು ಕಾಲದಲ್ಲಿ ತುಂಬಾ ಸೈಲೆಂಟ್‌ ಆಗಿರ್ತಿದ್ರಂತೆ, ಹುಡುಗೀರ ಜೊತೆ ಜಾಸ್ತಿ ಮಾತಾಡ್ತಿರಲಿಲ್ವಂತೆ ಹಾಗೆಯೇ, ಹೀರೋಯಿನ್‌ಗಳ ಜೊತೆನೂ ಹಾಗೆಯೇ ಇರ್ತಿದ್ರೂ ಮಾತಾಡಲ್ಲ ಅಂತ ಕಂಪ್ಲೇಂಟ್‌ ಇತ್ತಂತೆ. ಇದನ್ನ ಅವರ ಪತ್ನಿ ನಮ್ರತಾನೇ ಅನೇಕ ಬಾರಿ ಹೇಳಿದ್ದಾರೆ. ಮೊದಲು ಅವರನ್ನ ನೋಡಿ ವಾವ್ ಇವರು ಹೀಗಿದ್ದಾರಲ್ಲ ಅಂತ ಅಂದು ಕೊಂಡಿದ್ದೆ. ಆದರೆ ಕ್ರಮೇಣ ಅವರನ್ನೇ ಬದಲಾಯಿಸಿಬಿಟ್ಟೆ ಅಂತಿದ್ದಾರೆ. ಒಂದು ಕಾಲದಲ್ಲಿ ಸ್ವಲ್ಪವೂ ಮಾತಾಡದ ಅವರೀಗ ನನಗಿಂತಲೂ ಜಾಸ್ತಿ ಮಾತಾಡ್ತಾರೆ ಅಂತ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ನಮ್ರತಾ ಅಷ್ಟೇ ಅಲ್ಲ, ಈ ಜೋಡಿಯ ಮಧ್ಯೆ ಇರೋ ಅನುಬಂಧಕ್ಕೆ ಸಂಬಂಧಿಸಿದ ಇನ್ನೊಂದು ವಿಷಯ ಈಗ ಬಯಲಾಗಿದೆ.

ನಮ್ರತಾ ಮನೇಲಿ ಮಹೇಶ್‌ ಬಾಬುನ ಏನ್ ಅಂತ ಕರೀತಾರೆ ಅನ್ನೋದು ಈಗ ಲೀಕ್‌ ಆಗಿದೆ. ಸಾಮಾನ್ಯವಾಗಿ ಮನೇಲಿ ಪತಿ ಪತ್ನಿ ಮಧ್ಯೆ ಮುದ್ದಿನ ಹೆಸರು ತುಂಬಾ ಇರುತ್ತೆ. ತುಂಬಾ ರೊಮ್ಯಾಂಟಿಕ್‌ ಆಗಿಯೂ ಇರುತ್ತೆ. ಹಾಗೆಯೇ ಮಹೇಶ್‌ ಬಾಬುಗೂ ನಮ್ರತಾ ಅಂಥದ್ದೇ ರೊಮ್ಯಾಂಟಿಕ್‌ ಹೆಸರನ್ನೇ ಇಟ್ಟಿದ್ದಾರೆ. ಮನೇಲಿ ಆ ಹೆಸರಿನಿಂದಲೇ ಕರೀತಾರಂತೆ. ಆದ್ರೆ ಈ ವಿಷ್ಯನ ಬಾಯಿ ಬಿಡಬೇಡ ಅಂತ ಮಹೇಶ್‌ ಬಾಬು ಎಷ್ಟೇ ಹೇಳಿದ್ರೂ ಕೇಳದ, ನಮ್ರತಾ ಈ ವಿಷ್ಯ ಲೀಕ್‌ ಮಾಡಿಬಿಟ್ರು. ಹಾಗಿದ್ರೆ ಮಹೇಶ್‌ನ ನಮ್ರತಾ ಏನ್ ಅಂತ ಕರೀತಾರೆ? ಅವರಿಗೆ ಇರೋ ಮುದ್ದಿನ ಹೆಸರು ಏನು ಮುಂದೆ ಓದಿ..
 

Tap to resize

ಮಹೇಶ್‌ನ ಮನೇಲಿ ಎಲ್ಲರೂ ನಾನಿ ಅಂತ ಕರೀತಾರಂತೆ. ಇದು ಬಹುತೇಕ ಎಲ್ಲರಿಗೂ ಗೊತ್ತಿರೋ ವಿಷಯನೇ. ಒಂದು ಸಿನಿಮಾ ಕಾರ್ಯಕ್ರಮದಲ್ಲಿ ಮಹೇಶ್‌ ಬಾಬು ಅವರೇ ಈ ವಿಷ್ಯನ ಬಾಯಿ ಹೇಳಿದ್ರು. ಒಂದು ಸಿನಿಮಾ ಕಾರ್ಯಕ್ರಮದಲ್ಲಿ ನಿರ್ದೇಶಕ ಪುರಿ ಜಗನ್ನಾಥ್‌ ಮಹೇಶ್ ಬಾಬು ಸಂದರ್ಶನ ಮಾಡಿದ್ರು. ನೇರವಾಗಿ ಹಲವು ಪ್ರಶ್ನೆಗಳನ್ನ ಕೇಳಿದ್ರು. ಅದ್ರಲ್ಲಿ ನಿಮ್ಮನ್ನ ಮನೇಲಿ ಏನ್ ಅಂತ ಕರೀತಾರೆ ಅಂತ ಕೇಳಿದ್ದಕ್ಕೆ ಮಹೇಶ್‌ `ನಾನಿ` ಅಂತ ಹೇಳಿದ್ರು. ಇದು ಎಲ್ಲರಿಗೂ ಗೊತ್ತು ಅಂತ ಹೇಳಿದ ಪುರಿ, ಆಮೇಲೆ ನಮ್ರತಾ ಮುದ್ದಾಗಿ ಏನ್ ಅಂತ ಕರೀತಾರೆ ಅಂತ ಕೇಳಿದ್ರು. ಈ ಪ್ರಶ್ನೆಗೆ ಮಹೇಶ್‌ ಕ್ರೇಜಿ ಉತ್ತರ ಕೊಟ್ರು. ಈ ತರಹದ ಪ್ರಶ್ನೆಗಳಿಗೆ ಉತ್ತರ ಕೊಡೋಕೆ ಆಗಲ್ಲ, ಇದೆಲ್ಲಾ ಪರ್ಸನಲ್‌ ಅಂತ ಹೇಳಿದ್ರು. ಆದ್ರೂ ಪುರಿ ಕೇಳ್ಲಿಲ್ಲ. ಫೋರ್ಸ್‌ ಮಾಡಿದ್ರು. ಮಹೇಶ್‌ ಕೂಡ ಹೇಳಲ್ಲ ಅಂತ ಹೇಳಿದ್ರು. 
 

ಇದ್ರಿಂದ ಏನೂ ಪ್ರಯೋಜನ ಇಲ್ಲ ಅಂತ ಭಾವಿಸಿದ ಪುರಿ. ನೇರವಾಗಿ ನಮ್ರತಾ ಅವರನ್ನೇ ಕೇಳಿಬಿಟ್ರು. ಮಹೇಶ್‌ನ ಮನೇಲಿ ಏನ್ ಅಂತ ಕರೀತೀರಾ ಅಂತ ಕೇಳಿದ್ರು. ಅವರು ಮೊದಲು ಯೋಚಿಸಿದ್ರು. ಮಹೇಶ್‌ ಕಡೆ ನೋಡಿದ್ರು. ಹೇಳ್ಬೇಡ ಅಂತ ಮಹೇಶ್ ಸನ್ನೆ ಮಾಡಿದ್ರು. ಆದ್ರೆ ನಮ್ರತಾ ಹೇಳೇಬಿಟ್ರು. ಮನೇಲಿ ಮಹೇಶ್‌ನ ಮುದ್ದಾಗಿ `ಬೇಬಿ` ಅಂತ ಕರೀತೀನಿ ಅಂತ ಹೇಳಿದ್ರು. ಇದನ್ನ ಕೇಳಿದ ತಕ್ಷಣ ಪೂರಿ ಜೊತೆಗೆ ಕಾರ್ಯಕ್ರಮದಲ್ಲಿ ಇದ್ದ ಅಭಿಮಾನಿಗಳು ಎಲ್ಲರೂ ಜೋರಾಗಿ ಕೂಗೋಕೆ ಶುರು ಮಾಡ್ಬಿಟ್ರು. ಇದು ಆ ಕಾರ್ಯಕ್ರಮದಲ್ಲೇ ಹೈಲೈಟ್‌ ಆಗಿಬಿಡ್ತು. ಮಹೇಶ್‌ಬಾಬು ಜೊತೆ ಪುರಿ ಜಗನ್ನಾಥ್‌ `ಪೋಕಿರಿ`, `ಬ್ಯುಸಿನೆಸ್‌ ಮ್ಯಾನ್‌` ಸಿನಿಮಾಗಳನ್ನ ಮಾಡಿದ್ದಾರೆ. ಮಹೇಶ್‌ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಬ್ಲಾಕ್‌ ಬಸ್ಟರ್‌ `ಪೋಕಿರಿ` ಅನ್ನೋದು ವಿಶೇಷ. ಈ ಸಿನಿಮಾದಿಂದಲೇ ಅವರು ಸೂಪರ್‌ ಸ್ಟಾರ್‌ ಇಮೇಜ್‌ನ ಪಡೆದುಕೊಂಡ್ರು. ಈ ಸಿನಿಮಾ ಆಗಿನ ಕಾಲದ ಕಲೆಕ್ಷನ್‌ಗಳ ಎಲ್ಲಾ ದಾಖಲೆಗಳನ್ನ ಮುರಿದು ಹಾಕಿತ್ತು. ಟಾಲಿವುಡ್‌ಗೆ ಕಲೆಕ್ಷನ್‌ಗಳ ರುಚಿ ತೋರಿಸಿತ್ತು. ಆಮೇಲೆ ಮತ್ತೆ ಈ ನಟ ನಿರ್ದೇಶಕ ಜೋಡಿ ಒಂದಾಗಿಲ್ಲ. ಪುರಿ ಎಷ್ಟೇ ಪ್ರಯತ್ನ ಮಾಡಿದ್ರೂ ಮಹೇಶ್‌ ಒಪ್ಪಿಕೊಳ್ಳುತ್ತಿಲ್ಲ. 

ಇನ್ನು ನಮ್ರತಾ, ಮಹೇಶ್‌ ಬಾಬು ಪ್ರೀತಿಸಿ ಮದುವೆ ಆದ ವಿಷಯ ಎಲ್ಲರಿಗೂ ಗೊತ್ತು. `ವಂಶಿ` ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ರು. ಈ ಸಿನಿಮಾ ಶೂಟಿಂಗ್‌ ಸಮಯದಲ್ಲಿ ಇಬ್ಬರ ಮಧ್ಯೆ ಸ್ನೇಹ ಶುರುವಾಯಿತು. ಆ ಸ್ನೇಹ ಪ್ರೇಮಕ್ಕೆ ತಿರುಗಿತು. ಕೆಲವು ದಿನ ಡೇಟಿಂಗ್‌ ಮಾಡಿದ ಈ ಜೋಡಿ ಮದುವೆ ಆಗೋಕೆ ನಿರ್ಧಾರ ಮಾಡ್ತಾರೆ. ಆದ್ರೆ ಮೊದಲಿಗೆ ಈ ಮದುವೆಗೆ ಮನೆಯಿಂದ ಗ್ರೀನ್‌ ಸಿಗ್ನಲ್‌ ಸಿಕ್ಕಿರಲಿಲ್ಲ. ಮಹೇಶ್‌ ಅಕ್ಕ ಮಂಜುಳಾ ತಂದೆ ಸೂಪರ್‌ ಸ್ಟಾರ್‌ ಕೃಷ್ಣ ಅವರ ಜೊತೆ ಈ ಬಗ್ಗೆ ಮಾತಾಡಿದ್ರಂತೆ. ಮೊದಲು ಒಪ್ಪಿಕೊಳ್ಳದ ಅವರು ಆಮೇಲೆ ಗ್ರೀನ್‌ ಸಿಗ್ನಲ್‌ ಕೊಟ್ರಂತೆ. ಹೀಗೆ ಸೈಲೆಂಟ್‌ ಆಗಿ ಮುಂಬೈನಲ್ಲಿ ಈ ಜೋಡಿ ಮದುವೆ ಮಾಡಿಕೊಂಡ್ರು. ಈ ಜೋಡಿಗೆ ಗೌತಮ್‌, ಸಿತಾರ ಅಂತ ಇಬ್ಬರು ಮಕ್ಕಳಿದ್ದಾರೆ. ಗೌತಮ್‌ ಓದಿನಲ್ಲಿ ಬ್ಯುಸಿ ಇದ್ದಾರೆ. ಸಿತಾರ ಓದಿನ ಜೊತೆಗೆ ಜಾಹೀರಾತು, ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನ ಮಾಡ್ತಿದ್ದಾರೆ. ಸಿನಿಮಾದ ಕಡೆಗೂ ಗಮನ ಹರಿಸಿದ್ದಾರೆ. ಮುಂದೊಂದು ದಿನ ಸಿನಿಮಾದಲ್ಲಿ ನಟಿಸೋ ಆಲೋಚನೆ ಇದೆ ಅಂತ ಹೇಳಿದ್ದಾರೆ. ಅದಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತೆ. 

ಮಹೇಶ್‌ ಬಾಬು ಈಗ ರಾಜಮೌಳಿ ನಿರ್ದೇಶನದ ಸಿನಿಮಾ ಮಾಡೋಕೆ ಹೊರಟಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈಗ ಪ್ರೀ ಪ್ರೊಡಕ್ಷನ್‌ ಕೆಲಸಗಳು ನಡೀತಿದೆ. ಆಫ್ರಿಕಾದ ಕಾಡಿನ ಹಿನ್ನೆಲೆಯಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಇದಕ್ಕಾಗಿ ಹೊಸ ಲುಕ್‌ನಲ್ಲಿ ಮಹೇಶ್‌ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಅವರು ಹೊಸ ಲುಕ್‌ನಲ್ಲಿ ಕಾಣಿಸಿಕೊಂಡು ಶಾಕ್‌ ಕೊಟ್ಟಿದ್ರು. ಇದು ರಾಜಮೌಳಿ ಸಿನಿಮಾಗಾಗಿ ಅನ್ನೋದು ಗೊತ್ತಾಗಿದೆ. ಈ ಸಿನಿಮಾ ಶೀಘ್ರದಲ್ಲೇ ಶುರುವಾಗಲಿದೆ ಅನ್ನೋ ಮಾಹಿತಿ ಇದೆ. 
 

Latest Videos

click me!