ಬೆಂಗಳೂರಿನಲ್ಲಿ ನಟ ಪೃಥ್ವಿರಾಜ್; ಶಿವಣ್ಣ-ಯಶ್ ಈ ಸಿನಿಮಾ ಮಾಡಬೇಕು ಎಂದ ಮಲಯಾಳಂ ಸ್ಟಾರ್

Published : Jun 25, 2022, 10:41 AM IST

ಮಲಯಾಳಂ ಸ್ಟಾರ್ ಪೃಥ್ವಿರಾಜ್ ನಟನೆಯ ಕಡುವ ಸಿನಿಮಾದ ಪ್ರಮೋಷನ್‌ಗೆ ಬೆಂಗಳೂರಿಗೆ ಆಗಮಿಸಿದ್ದರು. ಕಡುವ ಸಿನಿಮಾ ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಕಡುವ ಪ್ರಮೋಷನ್‌ ವೇಳೆ ಪೃಥ್ವಿರಾಜ್ ಅನೇಕ ಇಂಟ್ರಸ್ಟಿಂಗ್ ವಿಚಾರವನ್ನು ಶೇರ್ ಮಾಡಿದ್ದಾರೆ. 

PREV
17
ಬೆಂಗಳೂರಿನಲ್ಲಿ ನಟ ಪೃಥ್ವಿರಾಜ್; ಶಿವಣ್ಣ-ಯಶ್ ಈ ಸಿನಿಮಾ ಮಾಡಬೇಕು ಎಂದ ಮಲಯಾಳಂ ಸ್ಟಾರ್

ಮಲಯಾಳಂನ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್  ಜೂನ್ 24ರಂದು ಬೆಂಗಳೂರಿಗೆ ಆಮಿಸಿದ್ದರು. ಕನ್ನಡನಾಡಲ್ಲಿ ಮಲಯಾಳಂ ಸ್ಟಾರ್ ನೋಡಿ ಕನ್ನಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಅಂದಹಾಗೆ ಪೃಥ್ವಿರಾಜ್ ದಿಢೀರ್ ಅಂತ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳಲು ಕಾರಣ ಸಿನಿಮಾ ಪ್ರಮೋಷನ್.

27

ಪೃಥ್ವಿರಾಜ್ ನಟನೆಯ ಕಡುವ ಸಿನಿಮಾದ ಪ್ರಮೋಷನ್‌ಗೆ ಬೆಂಗಳೂರಿಗೆ ಆಗಮಿಸಿದ್ದರು. ಕಡುವ ಸಿನಿಮಾ ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಕಡುವ ಪ್ರಮೋಷನ್‌ ವೇಳೆ ಪೃಥ್ವಿರಾಜ್ ಅನೇಕ ಇಂಟ್ರಸ್ಟಿಂಗ್ ವಿಚಾರವನ್ನು ಶೇರ್ ಮಾಡಿದ್ದಾರೆ. 

37

ನಾನು ಕೇರಳ ಇಂಡಸ್ಟ್ರಿಯಲ್ಲಿ ಕನ್ನಡ ಸಿನಿಮಾಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೀನಿ ಎಂದು ಹೇಳಿದರು. ಅಂದಹಾಗೆ ಪೃಥ್ವಿರಾಜ್ ಕನ್ನಡದ ಅನೇಕ ಸಿನಿಮಾಗಳನ್ನು ಮಲಯಾಳಂನಲ್ಲಿ ರಿಲೀಸ್ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿ ಕೆಜಿಎಫ್ 2 ಹಾಗೂ 777 ಚಾರ್ಲಿ ಸಿನಿಮಾ ಮಲಯಾಳಂನಲ್ಲಿ ಸಕ್ಸಸ್ ಆಗಿದೆ ಎಂದರು.

47

ಕೆಜಿಎಫ್-2 ಮತ್ತು 777 ಚಾರ್ಲಿ ಸಿನಿಮಾ ನನಗೆ ಒಳ್ಳೆ ದುಡ್ಡು ಮಾಡಿಕೊಟ್ಟಿದೆ ಹಾಗಾಗಿ ನಾನು ಕನ್ನಡಿಗರಿಗೆ ಧನ್ಯವಾದ ಹೇಳಬೇಕು ಎಂದು ಪೃಥ್ವಿರಾಜ್ ಹೇಳಿದರು. 

57

ಮಲಯಾಳಂನ ಸೂಪರ್ ಸಕ್ಸಸ್ ಅಯ್ಯಪ್ಪನುಮ್ ಕೋಶಿಯುಮ್ ಸಿನಿಮಾ ಕನ್ನಡದಲ್ಲಿ ರಿಮೇಕ್ ಮಾಡುವ ಬಗ್ಗೆ ಹೇಳಿದರು. ಈ ಸಿನಿಮಾದಲ್ಲಿ ಪೃಥ್ವಿರಾಜ್ ಮತ್ತು ಬಿಜು ಮೆನನ್ ನಟಿಸಿದ್ದರು. ಈ ಸಿನಿಮಾ ಕನ್ನಡದಲ್ಲಿ ರಿಮೇಕ್ ಮಾಡಿದರೆ ಶಿವರಾಜ್ ಕುಮಾರ್ ಮತ್ತು ಯಶ್ ನಟಿಸಬೇಕು ಎಂದು ಹೇಳಿದರು.

67

ಪೃಥ್ವಿರಾಜ್, ಕಿಚ್ಚ ಸುದೀಪ್ ಅವರ ಅಭಿನಯಕ್ಕೆ ಅಭಿಮಾನಿ ಎಂದರು.   ವಿಕ್ರಾಂತ್ ರೋಣ ಟ್ರೇಲರ್ ನೋಡಿದ್ದೆನೆ, ಒಳ್ಳೆ ವಿಷ್ಯೂಲ್ಸ್ ಟ್ರೀಟ್ ಎಂದ ಪೃಥ್ವಿರಾಜ್ ಹಾಡಿಹೊಗಳಿದರು. 

77

ಹೊಂಬಾಳೆ ಫಿಲ್ಮ್ಸ್‌ನಲ್ಲಿ ಪೃಥ್ವಿರಾಜ್ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾ ಅನೌನ್ಸ್ ಆಗಿದೆ. ಈ ಬಗ್ಗೆ ಮಾತನಾಡಿ, ಲೂಸಿಫರ್ ಸಿನಿಮಾ ನೋಡಿ ಹೊಂಬಾಳೆ ಫಿಲ್ಮ್ಸ್ ನನಗೆ ಅವರ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಅವಕಾಸ ಕೊಟ್ಟಿದೆ ಎಂದು ಹೇಳಿದರು.  
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories