ಕೆಲಸದಲ್ಲಿ ಫುಲ್‌ ಬ್ಯುಸಿ ಪ್ರೆಗ್ನೆಂಟ್‌ ಅನುಷ್ಕಾ- ನೆಟ್ಟಿಗರಿಂದ ಟ್ರೋಲ್‌!

First Published | Nov 28, 2020, 4:19 PM IST

ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ  ಈ ದಿನಗಳಲ್ಲಿ ತನ್ನ ಪ್ರೆಗ್ನೆಂಸಿಯ ಸಮಯವನ್ನು ಎಂಜಾಯ್‌ ಮಾಡುತ್ತಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ  ಅಂದರೆ ಜನವರಿಯಲ್ಲಿ ಮಗುವಿನ ಆಗಮನಕ್ಕೂ ಮುಂಚೆ ತನ್ನ ಎಲ್ಲಾ ಪ್ರಾಜೆಕ್ಟ್‌ಗಳನ್ನು ಮುಗಿಸುವಲ್ಲಿ ಬ್ಯುಸಿಯಾಗಿದ್ದಾರೆ ನಟಿ.  ಪ್ರೆಗ್ನೆಂಸಿಯ 8ನೇ   ತಿಂಗಳಲ್ಲಿರುವ  ನಡೆಯುತ್ತಿದೆ. ವರದಿಗಳ ಪ್ರಕಾರ, ಅನುಷ್ಕಾ ಕಮರ್ಷಿಯಲ್ ಚಿತ್ರೀಕರಣದಲ್ಲಿದ್ದಾರೆ. ಇತ್ತೀಚೆಗೆ ಅವರ ಶೂಟಿಂಗ್‌ನ  ಕೆಲವು ಫೋಟೋಗಳು  ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.  ಎಲ್ಲೋ ಶಾರ್ಟ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಟು ಬಿ ಮದರ್‌ ಅನುಷ್ಕಾರ ಮುಖದಲ್ಲಿ ಖುಷಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಅದೇ ಸಮಯದಲ್ಲಿ ನೆಟ್ಟಿಗರಿಂದ ಸಖತ್‌ ಟ್ರೋಲ್‌ಗೆ ಗುರಿಯಾಗುತ್ತಿದ್ದಾರೆ ನಟಿ. 

ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ದುಬೈನಲ್ಲಿ ದೀರ್ಘಕಾಲ ಕಳೆದ ನಂತರ ಮುಂಬೈಗೆ ಮರಳಿದ ನಂತರ, ಕೆಲಸ ಮಾಡಲು ಪ್ರಾರಂಭಿಸಿದ್ದಾರೆ ನಟಿ ಅನುಷ್ಕಾ ಶರ್ಮ.
ಜಾಹೀರಾತಿನ ಶೂಟಿಂಗ್‌ ವೇಳೆಯಲ್ಲಿನ ಫೋಟೋಗಳಲ್ಲಿ ಅನುಷ್ಕಾರ ಬೇಬಿ ಬಂಪ್ ಸ್ಪಷ್ಟವಾಗಿ ಗೋಚರಿಸುತ್ತದೆ.
Tap to resize

ಪ್ರೆಗ್ನೆಂಸಿಯ ಎಂಟನೇ ತಿಂಗಳಲ್ಲಿ ಸಹ,ನಟಿ ಸಖತ್‌ ಆಕ್ಟೀವ್‌ ಆಗಿದ್ದು ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಅನುಷ್ಕಾ ಫೋಟೋಗಳಿಗೆ ಕೆಲವರು ಹೊಗಳುತ್ತಿದ್ದರೆ, ಇನ್ನೂ ಕೆಲವರು ಅವಳನ್ನು ಬೇಜಾವಬ್ದಾರಿತನ ಎಂದು ಕರೆಯುತ್ತಿದ್ದಾರೆ.
ಹಣಕ್ಕಾಗಿ ಮಗುವಿನ ಜೀವವನ್ನು ಅಪಾಯಕ್ಕೆ ದೂಡುತ್ತಿದ್ದಾರೆ, ಎಷ್ಟು ಹಣದ ಹಸಿವಿದೆ, ಇಡೀ ಜೀವನವಿದೆ ಸಂಪಾದನೆ ಮಾಡಲು' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
'ಕೆಲಸ ಮಾಡುವುದು ಒಳ್ಳೆಯದು ಆದರೆ ಈ ವಾತಾವರಣದಲ್ಲಿ ಅಷ್ಟು ಅಸಡ್ಡೆ ಮಾಡುವುದು ಸರಿಯಲ್ಲ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು 'ಮಗುವಿನ ಬಗ್ಗೆ ಗಮನ ವಹಿಸಿ, ಕನಿಷ್ಠ ಮಾಸ್ಕ್‌ ಆದರೂ ಧರಿಸಿ' ಎಂದಿದ್ದಾರೆ.
ಡೆಲವರಿಯ ನಂತರ ಅನುಷ್ಕಾ ಮೇ 2021 ರಲ್ಲಿ ಕೆಲಸಕ್ಕೆ ಮರಳಲಿದ್ದು, ಸಿನಿಮಾದ ಶೂಟಿಂಗ್‌ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರೆಗ್ನೆಂಸಿಯ ಕಾರಣ ನಟಿಯ ತೂಕ ಹೆಚ್ಚಿರುವುದು ಹಾಗೂ ಮುಖದಲ್ಲಿನ ಗ್ಲೋ ಫೋಟೋಗಳಲ್ಲಿ ನೋಡಬಹುದು.
ಜನವರಿಯಲ್ಲಿ ಅನುಷ್ಕಾ ಮಗುವಿಗೆ ಜನ್ಮ ನೀಡಲಿದ್ದು ಆ ಸಮಯದಲ್ಲಿ ವಿರಾಟ್ ಸಹ ತಮ್ಮ ಕ್ರಿಕೆಟ್ ಟೂರ್‌ನಿಂದ ರಜೆ ತೆಗೆದು ಕೊಳ್ಳಲಿದ್ದಾರೆ.
ಈ ಸಮಯದಲ್ಲಿ ನಟಿ ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಪತಿ ವಿರಾಟ್ ಕೊಹ್ಲಿ ಸಹ ಹೆಂಡತಿ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಖೇರ್‌ ತೆಗೆದುಕೊಳ್ಳುತ್ತಿದ್ದಾರೆ.
ಕೆಲವು ಸಮಯದ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಜ್ಯೋತಿಷಿಯೊಬ್ಬರು ಕಪಲ್‌ಗೆ ಯಾವ ಮಗು ಜನಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಜ್ಯೋತಿಷಿ ಲೆಕ್ಕಾಚಾರದ ಪ್ರಕಾರ ಮಗಳನ್ನು ಹೊಂದುವ ಸಾಧ್ಯತೆಗಳು ಹೆಚ್ಚು ಎಂದು ಹೇಳಿದ್ದಾರೆ.
ಅನುಷ್ಕಾ ಪ್ರಸ್ತುತ ಚಿತ್ರಗಳಿಂದ ದೂರವಾಗಿದ್ದು ಅವರು ಕೊನೆಯ ಬಾರಿಗೆ ಶಾರುಖ್ ಖಾನ್ ಎದುರು ಜೀರೋ ಚಿತ್ರದಲ್ಲಿ ಕಾಣಿಸಿಕೊಂಡರು.
ಅಂದಹಾಗೆ, ಪ್ರಸ್ತುತ ಅನುಷ್ಕಾ ವೆಬ್ ಸರಣಿ ನಿರ್ಮಾಪಕರಾಗಿದ್ದಾರೆ ಹಾಗೂ ಅವುಗಳಿಗೆ ಉತ್ತಮ ಪ್ರತಿಕ್ರಿಯೆ ಸಹ ಸಿಗುತ್ತಿದೆ.

Latest Videos

click me!