ಕಣ್ಣು ತೆರೆ ಅಪ್ಪ, ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್, ಮಗಳ ಆಕ್ರಂದನ

Published : Jan 11, 2026, 04:20 PM IST

ಕಣ್ಣು ತೆರೆ ಅಪ್ಪ, ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಬಿಡುವಿನ ವೇಳೆಯಲ್ಲಿ ಮಗಳ ಜೊತೆ ಮಗುವಾಗಿ ಆಟವಾಡುತ್ತಿದ್ದ ಪ್ರಶಾಂತ್ ತಮಂಗ್ ನಿಧನ ಪುಟ್ಟ ಅರಿಯಾಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

PREV
16
ಗಾಯಕ ಪ್ರಶಾಂತ್ ತಮಂಗ್ ಸಾವಿಗೆ ಆಘಾತ

ಇಂಡಿಯನ್ ಐಡೋಲ್ 3ರ ವಿನ್ನರ್, ಹಲವು ವೆಬ್ ಸೀರಿಸ್‌ಗಳಲ್ಲಿ ನಟನಾಗಿ ಮಿಂಚಿದ ಗಾಯಕ ಪ್ರಶಾಂತ್ ತಮಂಗ್ ಸಾವು ಸಂಗೀತ ಲೋಕವನ್ನೇ ದಿಗ್ಬ್ರಮೆಗೊಳಿಸಿದೆ. ಉತ್ತಮ ಆರೋಗ್ಯ ಕಾಪಾಡಿಕೊಂಡಿಕೊಂಡಿದ್ದ ಪ್ರಶಾಂತ್ ತಮಂಗ್ ಸಾವು ಹಲವರಿಗೆ ಆಘಾತ ನೀಡಿದೆ. ಇಂದು (ಜ.11) ದೆಹಲಿಯ ಮನಯೆಲ್ಲಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದ ಪ್ರಶಾಂತ್ ತಮಾಂಗ್ ನಿಧನರಾಗಿದ್ದಾರೆ.

26
ಪ್ರೀತಿಯ ಅಪ್ಪನ ಮುಂದೆ ಮಗಳ ಕಣ್ಣೀರು

ಪ್ರಶಾಂತ್ ತಮಂಗ್ ಲೈವ್ ಮ್ಯೂಸಿಕ್ ಕಾನ್ಸರ್ಟ್ ಮೂಲಕ ಹೆಚ್ಚು ಬ್ಯೂಸಿಯಾಗಿದ್ದರು. ದೇಶ ವಿದೇಶಗಳಲ್ಲಿ ಮ್ಯೂಸಿಕ್ ಕಾರ್ಯಕ್ರಮ ನೀಡುತ್ತಾ ರಂಜಿಸುತ್ತಿದ್ದರು. ಆದರೆ ಬಿಡುವ ಸಿಕ್ಕಾಗ ಮಗಳ ಜೊತೆ ಸಮಯ ಕಳೆಯುತ್ತದ್ದರು. ಪತ್ನಿ ಹಾಗೂ ಮಗಳ ಲೋಕದಲ್ಲಿ ಹೆಚ್ಚು ಖುಷಿಯಿಂದ ಸಮಯ ಕಳೆಯುತ್ತಿದ್ದರು. ಇದೀಗ ಪ್ರೀತಿಯ ಅಪ್ಪನ ಸಾವು ಮಗಳಿಗೆ ತೀವ್ರ ಆಘಾತ ನೀಡಿದೆ. ಪುಟ್ಟ ಮಗಳು ಅಪ್ಪ ಕಣ್ಣು ತೆರೆಯಲು ಕಾಯುತ್ತಿದ್ದಾರೆ.

36
ಅಪ್ಪನ ಜೊತೆಯಲ್ಲೇ ಆಟವಾಡುತ್ತಿದ್ದ ಆರಿಯಾ

ಪ್ರಶಾಂತ್ ತಮಾಂಗ್ ಬಿಡುವಿನ ವೇಳೆಯಲ್ಲಿ ಮಗಳಿಗಾಗಿ ಮಗುವಾಗುತ್ತಿದ್ದರು. ಮಗುಳು ಹೇಳಿದ ಹಾಗೇ ಕುಣಿಯುತ್ತಿದ್ದರು. ಮ್ಯೂಸಿಕ್ ಕಾನ್ಸರ್ಟ್ ಮುಗಿಸಿ ಮನೆಗೆ ಮರಳುವಾಗ ಅಕ್ಕರೆಯಿಂದ ಮಗಳಿಗಾಗಿ ಏನಾದರು ತರುತ್ತಿದ್ದರು. ಇದೀಗ ಅಪ್ಪ ಬರಲಾರದ ಲೋಕಕ್ಕೆ ತೆರಳಿದ್ದಾರೆ ಅನ್ನೋ ಸ್ಪಷ್ಟ ಕಲ್ಪನೆ ಆ ಪುಟ್ಟ ಮಗುವಿನಲ್ಲಿ ಇಲ್ಲ. ಆದರೆ ತಾಯಿ ಅಳು, ಕುಟುಂಬಸ್ಥರ ಶೋಕದ ಮುಂದೆ ಅಪ್ಪ ನಿರ್ಜೀವವಾಗಿ ಮಲಗಿರುವುದು ಮಗಳನ್ನು ಹೆಚ್ಚು ಆಘಾತಗೊಳಿಸಿದೆ.

46
2011ರಲ್ಲಿ ಮುದುವೆಯಾದ್ದ ಪ್ರಶಾಂತ್

2007ರಲ್ಲಿ ಇಂಡಿಯನ್ ಐಡೋಲ್ ಗೆದ್ದ ಪ್ರಶಾಂತ್ ತಮಂಗ್ ಬಳಿಕ ಹಲವು ಕಾರ್ಯಕ್ರಮಗಳ ಮೂಲಕ ಸಕ್ರಿಯರಾಗಿದ್ದರು. ರಿಯಾಲಿಟಿ ಶೋ, ವೆಬ್ ಸೀರಿಸ್ ಸೇರಿದಂತೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು. 2011ರಲ್ಲಿ ಪ್ರಸಾಂತ್ ತಮಂಗ್ ನಾಗಾಲ್ಯಾಂಡ್‌ನಲ್ಲಿ ಗೀತಾ ಥಾಪಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

56
ಪ್ರಶಾಂತ್ ತಮಂಗ್ ಮೂಲತಃ ಡಾರ್ಜಲಿಂಗ್

ಪ್ರಶಾಂತ್ ತಮಂಗ್ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಮೂಲದವರಾಗಿದ್ದರು. ಗೂರ್ಖಾ ಸಮುದಾಯಕ್ಕೆ ಸೇರಿದ್ದ ಪ್ರಶಾಂತ್ ತಮಂಗ್‌ಗೆ ಎಲ್ಲರೂ ಪ್ರೈಡ್ ಆಫ್ ಗೂರ್ಖಾ ಎಂದೇ ಕರೆಯತ್ತಿದ್ದರು. ಬಾಲ್ಯದಿಂದಲೇ ಬಡತನದಿಂದ ಬೆಳೆದು ಬಂದ ಪ್ರಶಾಂತ್ ತಮಂಗ್, ಎಲ್ಲವನ್ನೂ ತಮ್ಮ ಸ್ವಂತ ಶಕ್ತಿಯಿದ ಗಳಿಸಿದ್ದರು.

66
ಬಾಲ್ಯದಲ್ಲೇ ಅಪ್ಪನ ಕಳೆದುಕೊಂಡದ್ದ ಪ್ರಶಾಂತ್

ಪ್ರಶಾಂತ್ ತಮಂಗ್ ತಮ್ಮ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ಹೀಗಾಗಿ ಜೀವನ ನಿರ್ವಹಣೆ ಕಷ್ಟವಾಗಿತ್ತು. ಕೋಲ್ಕತ್ತಾದಲ್ಲಿ ಪೊಲೀಸ್ ಪೇದೆಯಾಗಿ ಸೇವೆ ಆರಂಭಿಸಿದ ಪ್ರಶಾಂತ್ ತಮಂಗ್, ಮ್ಯೂಸಿಕ್ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದರು. ಪೊಲೀಸ್ ಜೊತೆಗೆ ಮ್ಯೂಸಿಕ್ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುತ್ತಿದ್ದರು. 2007ರಲ್ಲಿ ಇಂಡಿಯನ್ ಐಡೋಲ್ ಗೆದ್ದು ಹೊಸ ದಾಖಲೆ ಸೃಷ್ಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories