ಮಹೇಶ್ ಬಾಬು ಮತ್ತು ಪ್ರಕಾಶ್ ರೈ ಆಪ್ತರಾಗಿದ್ದು, ಮಹೇಶ್ ಬಾಬು ನಟನೆಯ ಬಹುತೇಕ ಸಿನಿಮಾಗಳಲ್ಲಿ ಪ್ರಕಾಶ ರೈ ಕೂಡ ಕಾಣಿಸಿಕೊಳ್ಳುತ್ತಾರೆ. ಇದೀಗ ಪ್ರಕಾಶ್ ರೈ ಅವರು ಮಹೇಶ್ ಬಾಬು ವೃತ್ತಿ ಜೀವನದ ಬಹುದೊಡ್ಡ ಸಿನಿಮಾದ ಭಾಗವಾಗಿದ್ದಾರೆ.
ಎಸ್.ಎಸ್. ರಾಜಮೌಳಿ ನಿರ್ದೇಶನದ ಹಾಗೂ ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ‘ವಾರಣಾಸಿ’ ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದಾರೆ. ಮಹೇಶ್ ಬಾಬು ಅವರ ತಂದೆ ಪಾತ್ರದಲ್ಲಿ ಪ್ರಕಾಶ್ ರೈ ನಟಿಸುತ್ತಿದ್ದು, ಈಗಾಗಲೇ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.
25
ಪ್ರಕಾಶ್ ರೈ ಎಂಟ್ರಿ
ಈ ಚಿತ್ರದಲ್ಲಿ ನಾಯಕನ ತಂದೆ ಪಾತ್ರಕ್ಕೆ ಈ ಮೊದಲು ಇಬ್ಬರು ಬಹುಭಾಷಾ ಕಲಾವಿದರ ಸ್ಕ್ರೀನ್ ಟೆಸ್ಟ್ ಮಾಡಿದ್ದರು. ಆದರೆ, ಕೊನೆಗೆ ಆ ಜಾಗಕ್ಕೆ ಪ್ರಕಾಶ್ ರೈ ಎಂಟ್ರಿ ಆಗಿದ್ದಾರೆ.
35
ಪ್ರಧಾನ ಪಾತ್ರದಲ್ಲಿ ಪ್ರಕಾಶ್ ರೈ
ಈ ಮೂಲಕ ಪ್ರಕಾಶ್ ರೈ ಅವರು ಎಸ್.ಎಸ್. ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಮೊದಲು ಅವರು ‘ವಿಕ್ರಮಾರ್ಕುಡು’ ಚಿತ್ರದಲ್ಲಿ ಪುಟ್ಟ ಪಾತ್ರವೊಂದರಲ್ಲಿ ನಟಿಸಿದ್ದರು.
ಮಹೇಶ್ ಬಾಬು ಮತ್ತು ಪ್ರಕಾಶ್ ರೈ ಆಪ್ತರಾಗಿದ್ದು, ಮಹೇಶ್ ಬಾಬು ನಟನೆಯ ಬಹುತೇಕ ಸಿನಿಮಾಗಳಲ್ಲಿ ಪ್ರಕಾಶ ರೈ ಕೂಡ ಕಾಣಿಸಿಕೊಳ್ಳುತ್ತಾರೆ. ಇದೀಗ ಪ್ರಕಾಶ್ ರೈ ಅವರು ಮಹೇಶ್ ಬಾಬು ವೃತ್ತಿ ಜೀವನದ ಬಹುದೊಡ್ಡ ಸಿನಿಮಾದ ಭಾಗವಾಗಿದ್ದಾರೆ.
55
ಪೃಥ್ವಿರಾಜ್ ಸುಕುಮಾರನ್ ವಿಲನ್
ಎಸ್.ಎಸ್ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಶನ್‌ನ ಹೊಸ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಕುಂಭ ಎಂಬ ಪಾತ್ರದಲ್ಲಿನ ಅವರ ಲುಕ್ ಬಿಡುಗಡೆಯಾಗಿದೆ.