ಪ್ರಭಾಸ್ ಅಭಿಮಾನಿಗಳಿಗೆ ಶಾಕ್‌, ಮತ್ತೆ 'ಸಲಾರ್' ಸಿನಿಮಾ ರಿಲೀಸ್ ಡೇಟ್‌​ ಚೇಂಜ್‌

First Published Sep 2, 2023, 6:06 PM IST

ಸಲಾರ್ ರಿಲೀಸ್ ಆಗುವುದನ್ನೇ ಕಾತುರದಿಂದ ಎದುರು ನೋಡ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಯಾಕಂದ್ರೆ ಈ ಹಿಂದೆ ನಿಗದಿಪಡಿಸಿದ ದಿನಾಂಕಕ್ಕೆ 'ಸಲಾರ್' ಮೂವಿ ರಿಲೀಸ್ ಆಗುವುದಿಲ್ಲ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಹೀಗಾಗಿ ಚಿತ್ರದ ರಿಲೀಸ್ ಲೇಟ್ ಆಗಲಿದೆ ಎಂದು ತಿಳಿದುಬಂದಿದೆ.

'ಕೆಜಿಎಫ್‌' ನಿರ್ದೇಶಕ ಪ್ರಶಾಂತ್‌ ನೀಲ್‌ ಮತ್ತು 'ಬಾಹುಬಲಿ' ಪ್ರಭಾಸ್ ಕಾಂಬಿನೇಷನ್‌ನ 'ಸಲಾರ್‌' ಸಿನಿಮಾದ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ಆದ್ರೆ ಸದ್ಯ ಸಲಾರ್ ರಿಲೀಸ್ ಆಗುವುದನ್ನೇ ಕಾತುರದಿಂದ ಎದುರು ನೋಡ್ತಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಯಾಕಂದ್ರೆ ಈ ಹಿಂದೆ ನಿಗದಿಪಡಿಸಿದ ದಿನಾಂಕಕ್ಕೆ 'ಸಲಾರ್' ಮೂವಿ ರಿಲೀಸ್ ಆಗುವುದಿಲ್ಲ. 

ಪ್ರಭಾಸ್ ಅಭಿನಯದ ಆ್ಯಕ್ಷನ್ ಡ್ರಾಮಾ ಚಿತ್ರ 'ಸಲಾರ್‌' ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಚಿತ್ರತಂಡ ಘೋಷಿಸಿತ್ತು. ಭಾರೀ ನಿರೀಕ್ಷೆಗಳ ನಡುವೆ ತೆರೆ ಮೇಲೆ ಬರುತ್ತಿರುವ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಇದೆಲ್ಲದರ ಮಧ್ಯೆ ಸಲಾರ್‌​ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಾಕ್ ಆಗಿದೆ. 

Latest Videos


ಯಾಕೆಂದರೆ ಸಲಾರ್ ರಿಲೀಸ್ ಸೆಪ್ಟೆಂಬರ್ 28ಕ್ಕೆ ಬರೋದು ಡೌಟ್. ಈ ಬಗ್ಗೆ ಸ್ವತಃ ಟ್ವೀಟ್ ಮೂಲಕ ಮಾಹಿತಿ ನೀಡಲಾಗಿದೆ.  ತರುಣ್ ಸುಧೀರ್ ಈ ಬಗ್ಗೆ ಟ್ವೀಟ್ ಮಾಡಿ, 'ಸಲಾರ್' ಸಿನಿಮಾದ ಸಿಜಿ ವರ್ಕ್ ಇನ್ನೂ ಕೂಡ ಅಪೂರ್ಣವಾಗಿದೆ. ಸಿಜಿ ಕರ್ಕ್ಷೇನ್ ಆಗಬೇಕಿರೋ ಕಾರಣ. ಡಿಸೆಂಬರ್ 22 ತಪ್ಪಿದ್ರೆ ಡಿಸೆಂಬರ್ 28ಕ್ಕೆ ಸಲಾರ್ ರಿಲೀಸ್ ಸಾಧ್ಯತೆ ಎಂದು ಹೇಳಲಾಗ್ತಿದೆ. ಇನ್ನೆರಡು ದಿನಗಳಲ್ಲಿ ಮೂವಿ ರಿಲೀಸ್ ಡೇಟ್‌ನ್ನು ಅಧಿಕೃತ ಘೋಷಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಆದರೆ ಸಿನಿಮಾ ರಿಲೀಸ್ ಡೇಟ್ ಮುಂದೂಡುವ ಸಾಧ್ಯತೆ ಇದೆಯಂತೆ. ಚಿತ್ರದ ಗ್ರಾಫಿಕ್ಸ್ ಪೂರ್ಣಗೊಂಡಿಲ್ಲ ಎನ್ನಲಾಗ್ತಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಈ ಚಿತ್ರವು ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಅನೇಕ ಅಂತರರಾಷ್ಟ್ರೀಯ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಸಲಾರ್​  ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡುತ್ತಿರುವ ಈ ಚಿತ್ರದಲ್ಲಿ ಜಗಪತಿ ಬಾಬು, ಶ್ರೀಯಾ ರೆಡ್ಡಿ, ಪೃಥ್ವಿರಾಜ್ ಸುಕುಮಾರನ್ ಮತ್ತು ಈಶ್ವರ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಹೀಗಾಗಿಯೇ ಪ್ರೇಕ್ಷಕರು ಹೆಚ್ಚು ಎಕ್ಸೈಟ್ ಆಗಿದ್ದು, ದಯವಿಟ್ಟು ರಿಲೀಸ್ ಡೇಟ್ ಬದಲಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಮುಗಿಯದ ಹಿನ್ನೆಲೆಯಲ್ಲಿ ಚಿತ್ರತಂಡ ರಿಲೀಸ್ ಡೇಟ್ ಮುಂದೂಡಲು ತೀರ್ಮಾನಿಸಿದೆಯಂತೆ. ಪ್ರಶಾಂತ್‌ ನೀಲ್,. ಗ್ರಾಫಿಕ್ಸ್ ಇಷ್ಟವಾಗದ ಕಾರಣ ಮತ್ತೆ ರೀವರ್ಕ್‌ ಮಾಡಲು ಸೂಚಿಸಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಅನಿವಾರ್ಯವಾಗಿ ರಿಲೀಸ್ ಡೇಟ್ ಮುಂದೂಡುಲಾಗ್ತಿದೆ ಎಂಬ ಗುಸುಗುಸು ಹರಿದಾಡ್ತಿದೆ.

ಕೆಲ ದಿನಗಳ ಹಿಂದೆಯಷ್ಟೇ ಶೀಘ್ರದಲ್ಲೇ 'ಸಲಾರ್' ಟ್ರೈಲರ್ ರಿಲೀಸ್ ಮಾಡುವುದಾಗಿ ಹೊಂಬಾಳೆ ಸಂಸ್ಥೆ ಹೇಳಿತ್ತು. ಹಾಗಿರುವಾಗ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗಲ್ಲ ಅನ್ನೋ ಮಾತು ಅಭಿಮಾನಿಗಳಿಗೆ ಬೇಸರ ತರಿಸಿದೆ.

ಈ ಹಿಂದೆ 'ಸಲಾರ್' 2 ಬಾರಿ ರಿಲೀಸ್ ಡೇಟ್ ಬದಲಿಸಿಕೊಂಡಿತ್ತು. ಸೆಪ್ಟೆಂಬರ್ 28ರಂದು ಲಾಂಗ್ ವೀಕೆಂಡ್ ಪ್ಲ್ಯಾನ್ ಮಾಡಿ ರಿಲೀಸ್‌ ಡೇಟ್ ಫಿಕ್ಸ್ ಮಾಡಿದ್ದರು. ಆದರೆ ಈಗ ಮತ್ತೆ ರಿಲೀಸ್ ಡೇಟ್ ಬದಲಾಯಿಸಲಾಗುತ್ತಿದೆ.  ಅಮೇರಿಕಾದಲ್ಲಿ ತಿಂಗಳಿಗೂ ಮೊದಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗ್ತಿದೆ. ಹಾಗಿರುವಾಗ ಸಿನಿಮಾ ರಿಲೀಸ್ ಮುಂದೂಡಲು ಸಾಧ್ಯವೇ ಇಲ್ಲ ಎನ್ನುವ ವಾದವೂ ಇದೆ. ಆದರೆ ಟಿಕೆಟ್ ಬುಕ್ಕಿಂಗ್ ಹಣವನ್ನು ರೀಫಂಡ್ ಮಾಡುತ್ತಾರೆ ಎನ್ನುವ ಚರ್ಚೆ ಕೂಡ ನಡೀತಿದೆ.

click me!