ಅರ್ಬಾಜ್ ಖಾನ್ನಿಂದ ವಿಚ್ಛೇದನ ಪಡೆದ ಬಳಿಕ ಮಲೈಕಾ ಮತ್ತು ನಿರ್ಮಾಪಕ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಯಾವುದೇ ಪಾರ್ಟಿಗೂ ಹೋದರು ಇಬ್ಬರೂ ಜೊತೆಯಲ್ಲೇ ಇರುತ್ತಾರೆ.
ಅರ್ಜುನ್ ಕಪೂರ್ ಗೆ ಈಗ 37 ವರ್ಷ, ನಟಿ ಮಲೈಕಾ ಅರೋರಾಗೆ 49 ವರ್ಷ ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ಇದೇ ವಿಚಾರಕ್ಕೆ ಹಲವು ಬಾರಿ ಈ ಜೋಡಿ ಟೀಕೆಗೂ ಗುರಿಯಾಗಿತ್ತು.
ಇನ್ನು ಹೆಚ್ಚಾಗಿ ಮಲೈಕಾಗೆ ಅರ್ಬಾಜ್ ಖಾನ್ ನಿಂದ ಪಡೆದ ಅರ್ಹಾನ್ ಎಂಬ 16 ವರ್ಷದ ಮಗನಿದ್ದಾನೆ. ಅರ್ಜುನ್ ಇನ್ನೂ ಅವಿವಾಹಿತ.
ಮಲೈಕಾ ಅರೋರಾ ಜೊತೆ ಬ್ರೇಕ್ ಅಪ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಅರ್ಜುನ್ ಜೊತೆಗೆ ಕುಶಾ ಕಪಿಲಾ ಹೆಸರು ತಳುಕು ಹಾಕಿಕೊಂಡಿತ್ತು.
ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಮಹಿಳೆ, ನಟಿ ಕುಶಾ ಕಪಿಲಾ ಅವರು ರಿಲೇಟಬಲ್ ಕಂಟೆಂಟ್‌ನಲ್ಲಿ ರೀಲ್‌ಗಳನ್ನು ಮಾಡುವ ಮೂಲಕ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಜೊತೆಗೆ ಈಕೆ ಹಾಸ್ಯನಟಿ, ಯೂಟ್ಯೂಬರ್ ಕೂಡ ಹೌದು.
ಅರ್ಜುನ್ ಕಪೂರ್ ಅವರ ಜೊತೆಗೆ ಕುಶಾ ಕಪಿಲಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಆದರೆ ಈ ವಿಚಾರವನ್ನು ಕುಶಾ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಸ್ವತಃ ಸಾಮಾಜಿಕ ಜಾಲತಾಣದದ ಪೇಜ್‌ನಲ್ಲಿ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಇದರ ಜೊತೆಗೆ ಅರ್ಜುನ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಲೈಕಾ ಜೊತೆಗಿನ ಸೆಲ್ಫಿಯನ್ನು ಹಂಚಿಕೊಳ್ಳುವ ಮೂಲಕ ಬ್ರೇಕ್-ಅಪ್ ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
33 ವರ್ಷದ ಕುಶಾ ಕಸ್ಟಮ್ ರಾಹುಲ್ ಮಿಶ್ರಾ ಅವರ ಡಿಸೈನ್‌ನಲ್ಲಿ ಮೂಡಿಬಂದ ಬಟ್ಟೆಯಲ್ಲಿ 2023 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತನ್ನ ರೆಡ್ ಕಾರ್ಪೆಟ್ ಪಾದಾರ್ಪಣೆ ಮಾಡಿದರು.
ಕುಶಾ ಕಪಿಲಾ 2017 ರಲ್ಲಿ ಡಿಯಾಜಿಯೊದಲ್ಲಿ ಮಾಜಿ ಉದ್ಯೋಗಿ ಜೋರಾವರ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿವಾಹವಾದರು. 26 ಜೂನ್ 2023 ರಂದು ಅವರಿಂದ ವಿಚ್ಚೇಧನ ಪಡೆದಿದ್ದಾರೆ.
kusha kapila
ಕುಶಾ ಕಪಿಲಾ ಭಾರತೀಯ ಫ್ಯಾಷನ್ ಸಂಪಾದಕಿ, ನಟಿ , ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧ ವ್ಯಕ್ತಿ, ಯೂಟ್ಯೂಬರ್ ಮಾತ್ರವಲ್ಲ ಈಕೆ ಫ್ಯಾಶನ್ ಲೋಕದಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
kusha kapila
ಫ್ಯಾಶನ್ ವಿನ್ಯಾಸದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ. ಯೂಟ್ಯೂಬ್‌ನಲ್ಲಿ 1 ಮಿಲಿಯನ್ ಗೂ ಹೆಚ್ಚು ಅನುವಾದಕರಿದ್ದಾರೆ.