ಟ್ವಿಟರ್ ನಲ್ಲಿ ಕಪಿಲ್ ಶರ್ಮಾ ಅವರನ್ನು ಟ್ರೋಲ್ ಮಾಡಲಾಗಿದೆ.
ಮುಂಬೈ ಬಾಂದ್ರಾದ ಅಪಾರ್ಟ್ ಮೆಂಟ್ ನಲ್ಲಿ ಸುಶಾಂತ್ ಜೂನ್ 14 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ತನ್ನನ್ನು ಟ್ರೋಲ್ ಮಾಡಿದವರಿಗೆ ಶರ್ಮಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ ಎಂದು ಕಪಿಲ್ ಎಚ್ಚರಿಕೆ ನೀಡಿದ್ದಾರೆ.
ಮಾತನಾಡಲು ಸಾಧ್ಯವಾಗದ ಭಾಷೆ ಬಳಸಿದ್ದ ಜಾಲತಾಣಿಗನಿಗೆ ಅವರದ್ದೇ ಆದ ಭಾಷೆಯಲ್ಲಿ ಕಪಿಲ್ ಉತ್ತರ ನೀಡಿದ್ದಾರೆ.
ಕಪಿಲ್ ಶರ್ಮಾ ಸಹ ಒಂದು ಸಮಯ ಡಿಪ್ರೆಶನ್ ಗೆ ಒಳಗಾಗಿದ್ದರು.
ತನ್ನ ಸಹನಟ ಸುನೀಲ್ ಗ್ರೋವರ್ ಜತೆಗೆ ಹಳಸಿದ ಬಾಂಧವ್ಯ, ಶೋ ನಿಂತಿದ್ದು ಅವರನ್ನು ಡಿಪ್ರೆಶನ್ ಗೆ ದೂಡಿತ್ತು.
ನಾನು ಮದ್ಯದ ದಾಸನಾದಾಗ ಅನೇಕ ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು, ಭಯ, ಆತಂಕ ಸದಾ ನನ್ನ ಕಾಡುತ್ತಿತ್ತು ಎಂದು ಶರ್ಮಾ ಹೇಳಿಕೊಂಡಿದ್ದರು.
ಕಪಿಲ್ ಕುಟುಂಬ ಸಹ ಅವರು ವಾಪಸ್ ಮೊದಲಿನ ಜೀವನಕ್ಕೆ ಬರುತ್ತಾರೆ ಎಂಬ ನಂಬಿಕೆಯನ್ನು ಕಳೆದುಕೊಂಡಿತ್ತು.
ಸುಶಾಂತ್ ಸಿಂಹಗ್ ಜೀವನಕ್ಕೆ ಸಂಬಂಧಿಸಿದ ಹತ್ತಿರದ 28 ಜನರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.