ಇತ್ತೀಚಿಗಷ್ಟೆ ಪೂಜಾ ರಾಕಿಂಗ್ ಸ್ಟಾಪ್ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಯಶ್ ಲೆಜೆಂಡ್ ಎಂದು ಹೇಳಿದ್ದ ಪೂಜಾ ಅವರ ಜೊತೆ ನಟಿಸುವ ಆಸೆ ಇದೆ ಎಂದು ಹೇಳಿದ್ದರು. 'ನಾನು ಅವರೊಂದಿಗೆ ಹೆಚ್ಚು ಮಾತನಾಡಿಲ್ಲ. ಆದರೆ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ನಾನು ಅವರ ಜೊತೆ ಶೀಘ್ರದಲ್ಲೇ ಕೆಲಸ ಮಾಡುತ್ತೇನೆ ಎಂದು ಭಾವಿಸುತ್ತೇನೆ' ಎಂದು ಪೂಜೆ ಹೇಳಿದ್ದರು.