ಹಸಿರು ಲೆಹೆಂಗಾದಲ್ಲಿ ಚೆಂದದ ಬೊಂಬೆಯಂತೆ ಕಾಣಿಸಿಕೊಂಡ ಪೂಜಾ ಹೆಗ್ಡೆ

First Published | Feb 14, 2024, 12:54 PM IST

ಜನಪ್ರಿಯ ನಟಿ ಪೂಜಾ ಹೆಗ್ಡೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಜನರಂತೂ ಈ ಸುಂದರಿಯ ಸೌಂದರ್ಯಕ್ಕೆ ಸೋತು ಹೋಗಿದ್ದಾರೆ.

ದಕ್ಷಿಣ ಭಾರತದಲ್ಲಿ ಹಿಟ್ ಚಿತ್ರಗಳನ್ನು ನೀಡಿ, ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಮಂಗಳೂರಿನ ಬೆಡಗಿ ಪೂಜಾ ಹೆಗ್ಡೆ (Pooja Hegde) ಎಥ್ನಿಕ್ ಲುಕ್ ನಲ್ಲಿ ಸಖತ್ತಾಗಿ ಪೋಸ್ ಕೊಟ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 

ಸೋಶಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ನಟಿ ಪೂಜಾ ಹೆಗ್ಡೆ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಸಿರು ಲೆಹೆಂಗಾ ಧರಿಸಿರುವ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದು, ಸೋಲ್ ಫುಲ್ ಆಫ್ ಸನ್ ಶೈನ್ ಎಂದು ಬರೆದುಕೊಂಡಿದ್ದಾರೆ. 

Tap to resize

ಹಸಿರು ಬಣ್ಣದ ಲೆಹೆಂಗಾದ ಮೇಲೆ ಝರಿ, ಕೆಂಪು, ಕೇಸರಿ, ಗುಲಾಬಿ ಬಣ್ಣದ ಥ್ರೆಡ್ ವರ್ಕ್ ಇದೆ. ಇದರ ಜೊತೆ ಡೀಪ್ ನೆಕ್ ಹೊಂದಿರುವ ಮ್ಯಾಂಚಿಂಗ್ ಬ್ಲೌಸ್ ಹಾಕಿದ್ದು, ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಅಭಿಮಾನಿಗಳು ವಾವ್ ಕ್ಯಾ ಮಾಲ್ ಹೇ ಎಂದು ಕಾಮೆಂಟ್ ಮಾಡಿದ್ದಾರೆ. 

ಪೂಜಾ ಹೆಗ್ಡೆ ಧರಿಸಿರುವ ಈ ಸುಂದರವಾಗಿ ಕಸೂತಿ ವರ್ಕ್ ಮಾಡಿರುವ ಲೆಹೆಂಗಾವನ್ನು ಮೃಣಾಲಿ ರಾವ್ ಅವರು ಡಿಸೈನ್ ಮಾಡಿದ್ದು, ಇದರ ಬೆಲೆ ಬರೋಬ್ಬರಿ 4.14 ಲಕ್ಷ ರೂಪಾಯಿಯಂತೆ. 

ತೆಲುಗು ಸಿನಿಮಾ ರಂಗದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ, ಸದ್ಯ ಬಾಲಿವುಡ್ ನ(Bollywood) ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ಕಿಸೀ ಕಾ ಭಾಯ್, ಕಿಸೀ ಕಾ ಜಾನ್ ಸಿನಿಮಾದಲ್ಲಿ ಈ ಹಿಂದೆ ನಟಿಸಿದ್ದರು. 
 

ಇದೀಗ ಹೊಸ ಹಿಂದಿ ಸಿನಿಮಾ ಒಂದರಲ್ಲಿ ಪೂಜಾ ನಟಿಸುತ್ತಿದ್ದು, ರೋಶನ್ ಆಂಡ್ರ್ಯೂ ನಿರ್ದೇಶನದ ದೇವಾ ಸಿನಿಮಾದಲ್ಲಿ ಶಾಹೀದ್ ಕಪೂರ್ ಗೆ (Shaheed Kapoor) ನಾಯಕಿಯಾಗಿ ಪೂಜಾ ನಟಿಸುತ್ತಿದ್ದಾರೆ. 

ತಮ್ಮ ಬ್ಯುಸಿ ಕರಿಯರ್ ಮಧ್ಯ ಬಿಡುವು ಮಾಡಿಕೊಂಡು ಇತ್ತೀಚೆಗೆ ಪೂಜಾ ಮಂಗಳೂರಿಗೆ ಆಗಮಿಸಿದ್ದು, ತಮ್ಮ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗಿಯಾಗಿ, ಮಂಗಳೂರಿನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. 
 

Latest Videos

click me!