14 ವಯಸ್ಸಿಗೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್‌ ಅನುಭವಿಸಿದ ಮುದ್ದಾದ ನಟಿಯ ಬಿಗ್‌ಬಾಸ್‌ ಸಂಭಾವನೆ 2.5 ಕೋಟಿ!

First Published Feb 13, 2024, 7:14 PM IST

ಕಷ್ಟಪಟ್ಟು ಕೆಲಸ ಮಾಡುವವರು ಮತ್ತು ಪ್ರಯತ್ನ ಪಡುವವರು ಯಾವಾಗಲೂ ಕೆಲವೊಂದು ಪರಿಸ್ಥಿತಿಗಳಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಆದರೆ ಈ ನಟಿ ಚಿತ್ರರಂಗದಲ್ಲಿ ಇನ್ನೇನು ಬೆಳೆಯುತ್ತಿರುವಾಗಲೇ 14ನೇ ವಯಸ್ಸಿಗೆ ಕಾಸ್ಟಿಂಗ್ ಕೌಚ್‌ ಗೆ ಒಳಗಾದರು.  ಈಗ ಈ ನಟಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ಮಾತ್ರವಲ್ಲ ಶ್ರೀಂತ ನಟಿಯಾಗಿದ್ಧಾರೆ.

ಆ ನಟಿ ಬೇರೆ ಯಾರೂ ಅಲ್ಲ, ಫೆಬ್ರವರಿ 1986 ರಲ್ಲಿ ಅಸ್ಸಾಂನಲ್ಲಿ ಜನಿಸಿದ ಭೋಜ್‌ಪುರಿ ಚಿತ್ರರಂಗದ ಫೇಮಸ್‌ ನಟಿ ರಶ್ಮಿ ದೇಸಾಯಿ. ರಶ್ಮಿ ದೇಸಾಯಿ ಭಾರತೀಯ ದೂರದರ್ಶನದಲ್ಲಿ ಜನಪ್ರಿಯ ಹೆಸರು ಮತ್ತು ಟಿವಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ರಶ್ಮಿ ದೇಸಾಯಿ ಈಗ ಯಶಸ್ವಿಯಾಗಿದ್ದರೂ, ಆಕೆಯ ಸಾಧನೆಯ ಹಾದಿ ಮುಳ್ಳಿನ ಹೊದಿಕೆಯಾಗಿತ್ತು. 

ರಶ್ಮಿ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡಲು ಪ್ರಾರಂಭಿಸಿದಳು.   2002 ರಲ್ಲಿ ಅಸ್ಸಾಮಿ ಚಲನಚಿತ್ರದೊಂದಿಗೆ ತಮ್ಮ  ಬಣ್ಣದ ಬದುಕು ಪ್ರಾರಂಭಿಸಿದರು. ಆದರೆ, ಚಿತ್ರದಲ್ಲಿನ ಚಿಕ್ಕ ಪಾತ್ರದಿಂದಾಗಿ  ಅಷ್ಟೊಂದು ಗುರುತಿಸುವಿಕೆ ಸಿಗಲಿಲ್ಲ.  2006 ರಲ್ಲಿ 'ರಾವಣ' ಕಾರ್ಯಕ್ರಮದ ಮೂಲಕ ರಶ್ಮಿ ದೇಸಾಯಿ ಟಿವಿಗೆ ಪಾದಾರ್ಪಣೆ ಮಾಡಿದರು. 

Latest Videos


ಟಿವಿ ಮತ್ತು ಚಲನಚಿತ್ರಗಳಲ್ಲದೆ, ರಶ್ಮಿ ಅನೇಕ ಭೋಜ್‌ಪುರಿ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ದೀರ್ಘಕಾಲದವರೆಗೆ ಬಿ ದರ್ಜೆಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ರಶ್ಮಿ ದೇಸಾಯಿ ಟಿವಿ ಧಾರಾವಾಹಿ 'ಉತ್ತರನ್' ನಿಂದ ಹೆಚ್ಚು ಜನಪ್ರಿಯತೆ ಪಡೆದರು. ಈ ಧಾರಾವಾಹಿಯಲ್ಲಿ ಅವರು ತಪಸ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಇದರ ನಂತರ, ಅವರು 'ದಿಲ್ ಸೆ ದಿಲ್ ತಕ್' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. 

ರಶ್ಮಿಯ ಬಾಲ್ಯವೂ ತುಂಬಾ ಕಷ್ಟಕರವಾಗಿತ್ತು.  ತನ್ನ ಹೋರಾಟದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ರಶ್ಮಿ ಸ್ವತಃ ತನ್ನನ್ನು ಕಾಡಿದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಹಿರಂಗಪಡಿಸಿದ್ದರು.  ನನ್ನ ತಾಯಿ ಸಿಂಗಲ್ ಮದರ್‌  ಆಗಿದ್ದರು. ನಮ್ಮ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಅಮ್ಮ ದುಡಿದಿದ್ದರಲ್ಲೇ ನಮ್ಮ ಮನೆ ನಡೆಯುತ್ತಿತ್ತು. ಎರಡು ಹೊತ್ತಿನ ಊಟಕ್ಕೂ ನಮ್ಮ ಬಳಿ ಹಣವಿರುತ್ತಿರಲಿಲ್ಲ. ಹೀಗಾಗಿ ನಾನು ಸಂಪಾದಿಸಲು ಪ್ರಾರಂಭಿಸಿದೆ. 16 ನೇ ವಯಸ್ಸಿನಲ್ಲಿ ನಾನು ಮಗುವಾಗಿದ್ದಾಗ ಜನರು ತಾಯಿಯನ್ನು ದರಿದ್ರ ಎಂದು ಕರೆಯುತ್ತಿದ್ದರು ಆಕೆ ಒಮ್ಮೆ ವಿಷ ಸೇವಿಸಿದ್ದಳು, ಆದರೆ ತಾಯಿ ಆಕೆಯ ಮೌಲ್ಯವನ್ನು ತಿಳಿದಿರದ ಕಾರಣ ತನ್ನ ತಪ್ಪು ಎಂದು ಒಪ್ಪಿಕೊಂಡಳು ಎಂದು ಹೇಳಿದ್ದರು.

ಹಲವು ನಟಿಯರಂತೆ ರಶ್ಮಿ ಕೂಡ ಕಾಸ್ಟಿಂಗ್ ಕೌಚ್‌ ಅನುಭವಿಸಿದ್ದಾರೆ. ತಾನು ಆಡಿಷನ್‌ಗೆ ಹೋಗಿದ್ದಾಗ ಅಲ್ಲಿದ್ದ ವ್ಯಕ್ತಿ ತನ್ನ ಪಾನೀಯದಲ್ಲಿ ಅಮಲು ಪದಾರ್ಥ ಬೆರೆಸಿ ಕುಡಿಸಿ ಬಲತ್ಕಾರಕ್ಕೆ ಯತ್ನಿಸಿದ್ದ. ಮರುದಿನ ಆಕೆಯ ತಾಯಿ ಆತನಿಗೆ ತೀವ್ರವಾಗಿ ಥಳಿಸಿದರು ಎಂದು ತಮ್ಮ ಆದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಆ ಸಮಯದಲ್ಲಿ, ರಶ್ಮಿಗೆ ಕೇವಲ 14 ವರ್ಷ ವಯಸ್ಸಾಗಿತ್ತು. ಆ ಸಮಯದಲ್ಲಿ ಆಕೆಗೆ ಚಲನಚಿತ್ರಗಳ ಬಗ್ಗೆ ಸ್ವಲ್ಪವೇ ತಿಳಿದಿತ್ತು. 

ತನ್ನ ಲಾಭ ಪಡೆದು ಕಿರುಕುಳ ನೀಡಲು ಯತ್ನಿಸಿದ ವ್ಯಕ್ತಿಗಳ ಬಹಳ ಮಂದಿ ಇದ್ದಾರೆ. ಓರ್ವ ವ್ಯಕ್ತಿ ಆಕೆಯನ್ನು ಆಡಿಷನ್‌ಗೆ ಕರೆದಿದ್ದನು ಆಕೆ ಅಲ್ಲಿಗೆ ತಲುಪಿದ ನಂತರ ಅಲ್ಲಿ ಯಾರೂ ಇರಲಿಲ್ಲ. ಕ್ಯಾಮೆರಾ ಕೂಡ ಇರಲಿಲ್ಲ.  ಪಾನೀಯದಲ್ಲಿ ಸ್ವಲ್ಪ ಅಮಲು ಬೆರೆಸಿ ಆಕೆಯನ್ನು ಪ್ರಜ್ಞಾಹೀನಗೊಳಿಸಲು ಪ್ರಯತ್ನ ಮಾಡಿದನು ಆದರೆ ಆತನ ಕೆಟ್ಟ ಯೋಚನೆಯ  ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. 

ರಶ್ಮಿ ದೇಸಾಯಿ ಟಿವಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. 'ಬಿಗ್ ಬಾಸ್ 13' ನಲ್ಲಿ ಭಾಗವಹಿಸಲು ಬರೊಬ್ಬರಿ 2.5 ಕೋಟಿ ರೂ.ಗೂ ಹೆಚ್ಚು ಶುಲ್ಕವನ್ನು ವಿಧಿಸಿದ್ದರು. ಇದಲ್ಲದೆ, ಅವರು 'ಖತ್ರೋನ್ ಕೆ ಕಿಲಾಡಿ 6' ನ ಭಾಗವಾಗಿದ್ದರು. ಕಳೆದ 14 ವರ್ಷಗಳಿಂದ ಉದ್ಯಮದಲ್ಲಿ ಸಕ್ರಿಯರಾಗಿರುವ ರಶ್ಮಿ ದೇಸಾಯಿ ಅವರು 5 ಅಪಾರ್ಟ್‌ಮೆಂಟ್‌ಗಳು ಮತ್ತು ಅನೇಕ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ರಶ್ಮಿ ದೇಸಾಯಿ ಅವರ ನಿವ್ವಳ ಮೌಲ್ಯ 10.12 ಕೋಟಿ ರೂ. 

click me!