ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಇಫ್ತಾರ್ ಕೂಟಕ್ಕೆ ಹೋದ ಪೂಜಾ; ಇದೇನು ಡಾನ್ಸ್ ಪಾರ್ಟಿನಾ ಎಂದು ಹಿಗ್ಗಾಮುಗ್ಗಾ ಟ್ರೋಲ್

First Published Apr 17, 2023, 1:08 PM IST

ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಇಫ್ತಾರ್ ಕೂಟಕ್ಕೆ ಹೋದ ನಟಿ ಪೂಜಾ ಹೆಗ್ಡೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇದೇನು ಡಾನ್ಸ್ ಪಾರ್ಟಿನಾ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಬಹುಭಾಷಾ ನಟಿ ಪೂಜಾ ಹೆಗ್ಡೆ ಸದ್ಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಪೂಜಾ ಮತ್ತು ಸಲ್ಮಾನ್ ಇಬ್ಬರೂ ಒಟ್ಟಿಗೆ ನಟಿಸಿದ್ದಾರೆ. 
 

ಸಲ್ಮಾನ್ ಜೊತೆ ಸಿನಿಮಾ ಒಪ್ಪಿಕೊಂಡಾಗಿನಿಂದ ಸಿಕ್ಕಾಪಟ್ಟೆ ಸದ್ದು ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆ ಪೂಜಾ ಡೇಟಿಂಗ್ ವದಂತಿ ಕೂಡ ವೈರಲ್ ಆಗಿತ್ತು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ , ಒಟ್ಟಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.  

Latest Videos


ಆದರೆ ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ವದಂತಿಗೆ ಪುಲ್‌ಸ್ಟಾಪ್ ಇಟ್ಟಿದ್ದರು. ಇದೆಲ್ಲಾ ಸುಳ್ಳು ಸುದ್ದಿ ಎಂದು ಡೇಟಿಂಗ್ ವದಂತಿ ತಳ್ಳಿ ಹಾಕಿದ್ದರು. ಇದೀಗ ಮತ್ತೆ ಪೂಜಾ ಸುದ್ದಿಯಾಗಿದ್ದಾರೆ. ಇಪ್ತಾರ್ ಕೂಡದಲ್ಲಿ ಭಾಗಿಯಾಗಿ ಟ್ರೋಲ್ ಆಗುತ್ತಿದ್ದಾರೆ. 

ಇತ್ತೀಚೆಗೆ ಮುಂಬೈನಲ್ಲಿ ನಡೆದ ಬಾಬಾ ಸಿದ್ದಿಕ್ ಅವರ ಇಪ್ತಾರ್ ಕೂಟದಲ್ಲಿ ಪೂಜಾ ಹೆಗ್ಡೆ ಭಾಗಿಯಾಗಿದ್ದರು. ಪೂಜಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಕಪ್ಪು ಸೀರೆ ಧರಿಸಿದ್ದ ಪೂಜಾ ಬ್ಯಾಕ್‌ಲೆಸ್ ಬ್ಲೌಸ್ ಹಾಕಿದ್ದರು. ಪೂಜಾ ಹಾಟ್ ಅವತಾರ ಕಂಡು ಫ್ಯಾನ್ಸ್ ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. 

ಇಫ್ತಾರ್‌ಗೆ ಸಾಧಾರಣ ಉಡುಗೆ ತೊಡಬೇಕು ಆದರೆ ಹೀಗಾ ಬರೋದು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ, ‘ಇದು ಇಫ್ತಾರ್ ಪಾರ್ಟಿ, ಡ್ಯಾನ್ಸ್ ಪಾರ್ಟಿ ಅಲ್ಲ. ಇದೆಂತ ಡ್ರೆಸ್' ಎಂದು ಹೇಳಿದ್ದಾರೆ. 

ಇಫ್ತಾರ್ ಕೂಟದಲ್ಲಿ ಪೂಜಾ ಹೆಗ್ಡೆ ಜೊತೆ ಸಲ್ಮಾನ್ ಖಾನ್ ಕೂಡ ಭಾಗಿಯಾಗಿದ್ದರು. ಅನೇಕ ಬಾಲಿವುಡ್ ಸ್ಟಾರ್ಸ್ ಇಫ್ತಾರ್ ಪಾರ್ಟಿಯಲ್ಲಿ ಹಾಜರಾಗಿದ್ದರು. 

ಪೂಜಾ ಹೆಗ್ಡೆ ಬಗ್ಗೆ ಹೇಳುವುದಾದರೆ ಸಾಲು ಸಾಲು ಸಿನಿಮಾಗಳ ಸೋಲಿನ ಸುಳಿಯಲ್ಲಿರುವ ನಟಿ ದೊಡ್ಡ ಹಿಟ್ ಗಾಗಿ ಕಾಯುತ್ತಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಜೊತೆ  ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ಮೂಲಕ ತೆರೆಮೇಲೆ ಬರ್ತಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್‌ಗಾಗಿ ಪೂಜಾ ಹೆಗ್ಡೆ ಎದುರು ನೋಡುತ್ತಿದ್ದಾರೆ. 

ಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು ಉತ್ತಮ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಮತ್ತು ಪೂಜಾ ಜೊತೆ ಸೌತ್ ಸ್ಟಾರ್ ವೆಕಂಟೇಶ್ ಕೂಡ ನಟಿಸಿದ್ದಾರೆ. ಜಗಪತಿ ಬಾಬು, ಶೆಹನಾಜ್ ಗಿಲ್, ಪಾಲಕ್ ತಿವಾರಿ  ಸೇರಿದಂತೆ ಅನೇಕರು ನಟಿಸಿದ್ದಾರೆ. 
 

click me!