ಫಸ್ಟ್ ಕಿಸ್ಸಿಂಗ್‌ ಸೀನ್: ಮಗಳು ಪೂಜಾಭಟ್‌ಗೆ ಮಹೇಶ್‌ ಭಟ್‌ ಕೊಟ್ಟಿದ್ರು ಸಲಹೆ

Suvarna News   | Asianet News
Published : Mar 10, 2021, 04:14 PM IST

ಬಾಲಿವುಡ್‌ ಚಲನಚಿತ್ರ ನಿರ್ಮಾಪಕ ಮತ್ತು ನಟಿ ಪೂಜಾ ಭಟ್ ಬಾಂಬೆ ಬೇಗಮ್ಸ್ ಎಂಬ ವೆಬ್ ಶೋ ಮೂಲಕ ಒಟಿಟಿ ವೇದಿಕಿಗೆ ಪಾದಾರ್ಪಣೆ ಮಾಡಿದ್ದಾರೆ. ಮಾರ್ಚ್ 8ರಂದು ಬಿಡುಗಡೆಯಾದ ಈ ಸೀರಿಸ್‌ನ ಪ್ರಚಾರದ ಸಮಯದ ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ ನಟಿ. ತಂದೆ ಮತ್ತು ನಿರ್ದೇಶಕ ಮಹೇಶ್ ಭಟ್ ನಿರ್ಮಿಸಿದ ಡ್ಯಾಡಿ ಚಿತ್ರದ ಮೂಲಕ ಪೂಜಾ ತಮ್ಮ 17ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಸಂದರ್ಶನದಲ್ಲಿ  ತಮ್ಮ ಫಸ್ಟ್ ಕಿಸ್ಸಿಂಗ್‌ ಸೀನ್‌ಗೆ ತಂದೆ ಹೇಳಿ ಕೊಟ್ಟ ಪಾಠವೇನೆಂದು ರಿವೀಲ್ ಮಾಡಿದ್ದಾರೆ.

PREV
18
ಫಸ್ಟ್ ಕಿಸ್ಸಿಂಗ್‌ ಸೀನ್: ಮಗಳು ಪೂಜಾಭಟ್‌ಗೆ ಮಹೇಶ್‌ ಭಟ್‌ ಕೊಟ್ಟಿದ್ರು ಸಲಹೆ

ಪೂಜಾ ಭಟ್‌ ವೃತ್ತಿ ಜೀವನದ ಮೂರನೇ ಚಿತ್ರ ಸಡಕ್‌ನಲ್ಲಿ ಸಂಜಯ್ ದತ್ ಜೊತೆ ಮೊದಲ ಕಿಸ್ಸಿಂಗ್‌ ಸೀನ್‌ ಮಾಡಿದ್ದಾರೆ. ಈ ಸಿನಿಮಾವನ್ನು ಮಹೇಶ್ ಭಟ್ ನಿರ್ದೇಶಿಸಿದ್ದಾರೆ.

28

'ನಾನು ಸಂಜಯ್ ದತ್ ಜೊತೆ ಕಿಸ್ಸಿಂಗ್‌ ಸೀನ್‌ ಮಾಡಬೇಕಾದಾಗ ನನಗೆ 18 ವರ್ಷ. ನನ್ನ ರೂಮಲ್ಲಿ ಪೋಸ್ಟರ್ ಹಾಕಿ ಕೊಂಡ ವ್ಯಕ್ತಿಗೆ ನಾನು ಚುಂಬಿಸಬೇಕಾಗಿತ್ತು,' ಎಂದು ವೆಬ್‌ ಸೀರಿಸ್‌ ಪ್ರಚಾರದ ಸಮಯದಲ್ಲಿ ಪೂಜಾ ಹೇಳಿದರು.

38

'ಇದು ಅಶ್ಲೀಲ ಎಂದು ನೀನು ಭಾವಿಸಿದರೆ ಅದು ಅಶ್ಲೀಲವಾಗುತ್ತದೆ. ಆದ್ದರಿಂದ ನೀನು ಕಿಸ್ಸಿಂಗ್ ಮತ್ತು ಲವ್ ಮೇಕಿಂಗ್ ದೃಶ್ಯಗಳನ್ನು ಸಾಕಷ್ಟು ಮುಗ್ಧತೆ, ಗ್ರೇಸ್‌ ಮತ್ತು ಘನತೆಯಿಂದ ನಟಿಸಬೇಕು. ಇಂಥ ದೃಶ್ಯವು ಬೇರೆಯವರಿಗೆ ತಲುಪುವಂತೆ ಮಾಡಬೇಕಾಗಿದೆ,ಎಂದು ನಾನು ಸದಾ ನೆನೆಪಲ್ಲಿ ಇಟ್ಟುಕೊಳ್ಳಬೇಕಾದ ಮಾತನ್ನು ಪಪ್ಪಾ ನನ್ನನ್ನು ಪಕ್ಕಕ್ಕೆ ಕರೆದೊಯ್ದು ಹೇಳಿದರು,' ಎಂದು ತಂದೆ ಮಹೇಶ್‌ ಭಟ್‌ ಮಾತನ್ನು ನೆನಪಿಸಿಕೊಂಡಿದ್ದಾರೆ ಮಗಳು ಪೂಜಾ.

48

ಪೂಜಾ ಸಂಜಯ್ ದತ್ ಅವರ ದೊಡ್ಡ ಅಭಿಮಾನಿ ಮತ್ತು ಅವರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದಿದ್ದು ಕನಸು ನಿಜವಾದ ಹಾಗೆ. ಸಂಜಯ್ ದತ್ ಫೋಟೋಗಳನ್ನು ತಮ್ಮ ಕೋಣೆಯಲ್ಲಿ ಇಟ್ಟುಕೊಂಡಿದ್ದೆ.  ಚುಂಬನ ದೃಶ್ಯದ ಚಿತ್ರೀಕರಣಕ್ಕೆ ಬಂದಾಗ ನಾನು ತುಂಬಾ ಹೆದರುತ್ತಿದ್ದೆ,' ಎಂದಿದ್ದಾರೆ.

58

ಈ ಸಮಯದಲ್ಲಿ ಒಟಿಟಿ ನಿಯಮಗಳ ಬಗ್ಗೆ ಸಹ ಮಾತನಾಡಿದರು. ಭಾರತದಲ್ಲಿ ನಿಯಮಗಳು ಮತ್ತು ಕಾಯಿದೆಗಳು ಹೊಸ ವಿಷಯಗಳಲ್ಲ. ಚಲನಚಿತ್ರ ನಿರ್ಮಾಪಕರು ಅವುಗಳ ಜೊತೆ ಬಹಳ ಸಮಯದಿಂದ ಹೋರಾಡುತ್ತಿದ್ದಾರೆ. ಚಲನಚಿತ್ರ ನಿರ್ಮಾಪಕನು ತಮ್ಮ ಚಲನಚಿತ್ರ ಅಥವಾ ಸೀರಿಸ್‌ ಮೂಲಕ ತಮ್ಮ ಸಂದೇಶವನ್ನು ತಿಳಿಸಲು ಬಯಸುತ್ತಾನೆ. ಸರ್ಕಾರದ ಉದ್ದೇಶವೂ ಕೇವಲ ನಿಯಮಗಳನ್ನು ಜಾರಿಗೊಳಿಸುವುದಲ್ಲ, ಆದರೆ ಚಲನಚಿತ್ರ ನಿರ್ಮಾಪಕರು ತಮ್ಮ ಕಥೆಯನ್ನು ತಮ್ಮದೇ ರೀತಿಯಲ್ಲಿ ಹೇಳುವುದನ್ನು ತಡೆಯುವುದು ಎಂದು ಪೂಜಾ ಅನುಮಾನ ವ್ಯಕ್ತಪಡಿಸಿದ್ದಾರೆ.

68

ಮಾರ್ಚ್ 8ರಂದು ಬಾಂಬೆ ಬೇಗಮ್ಸ್ ಸರಣಿ ಬಿಡುಗಡೆಯಾಗಿದೆ. ಇದು ಐದು ವಿಭಿನ್ನ ಮಹಿಳೆಯರ ಕಥೆ ಹೊಂದಿದೆ.

78

ಇದರಲ್ಲಿ ಸುಹಾನಾ ಗೋಸ್ವಾಮಿ, ಅಮೃತ ಸುಭಾಷ್, ಪ್ಲಾಬಿಟಾ ಬೋರ್-ಠಾಕೂರ್, ಅಧ್ಯಾ ಆನಂದ್ ಮತ್ತು ಪೂಜಾ ಭಟ್ ಐದು ವಿಭಿನ್ನ ಮಹಿಳಾ ಪಾತ್ರಗಳಿಗೆ ಜೀವ ತುಂಬಿದ್ದಾರೆ.

88

ಈ ಸೀರಿಸ್‌ನ ಡೈರೆಕ್ಟರ್‌ ಅಲಂಕೃತ ಶ್ರೀವಾಸ್ತವ, ಈ ಹಿಂದೆ ಮಹಿಳಾ ಆಧಾರಿತ ಚಿತ್ರಗಳಾದ ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ ಮತ್ತು ಡೋಲಿ ಕಿಟ್ಟಿ ಮತ್ತು ಶೀ ಶೈನಿಂಗ್ ಸ್ಟಾರ್ಸ್ ನಿರ್ದೇಶಿಸಿದ್ದಾರೆ.

click me!

Recommended Stories