ಧುರಂಧರ್ 2 ಸಿನಿಮಾ ತೆರೆ ಮೇಲೆ ಮೋದಿ ಮೋಡಿ, ಬಾಲಿವುಡ್‌ನಲ್ಲಿ ಪ್ರಧಾನಿ ಸಂಚಲನ ಮೂಡಿಸಿದ್ದಾರೆ. ಧುರಂಧರ್ 2 ಸಿನಿಮಾದಲ್ಲಿ ಮೋದಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳ ಸಂಭ್ರಮ ಜೋರಾಗಿದೆ.
ಧುರಂಧರ್ 2 ಸಿನಿಮಾಗೆ ಭರ್ಜರಿ ಪ್ರತ್ರಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹಲವು ದಾಖಲೆ ಮುರಿದಿದೆ. ಅದಿತ್ಯ ಧಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ನಟನೆಗೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.ಧುರಂಧರ್ ಸಿನಿಮಾಗೆ ಅಭಿಮಾನಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷ ಅಂದರೆ ಧುರಂಧರ್ 2 ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
26
ಎರಡು ಸೀನ್‌ನಲ್ಲಿ ಮೋದಿ ಎಂಟ್ರಿ
ಬಾಲಿವುಡ್‌ನ ಧುರಂಧರ್ ಸಿನಿಮಾದ ಎರಡು ಸೀನ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಧುರಂಧರ್ 2 ಸಿನಿಮಾ ತೆರೆ ಮೇಲೆ ಮೋದಿ ಕಾಣಿಸಿಕೊಂಡಿದ್ದೇ ತಡ ಅಭಿಮಾನಿಗಳಲ್ಲಿ ಸಂಚಲನ ಮೂಡಿದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭ ಹಾಗೂ 2016ರ ನೋಟು ಅಮಾನ್ಯೀಕರಣ ಸಂದರ್ಭದ ಎರಡು ಭಾಷಣದ ತುಣುಕುಗಳನ್ನು ಧುರಂಧರ್ 2 ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.
36
ಮೋದಿ ತೇರೆ ಮೇಲೆಕಾಣಿಸಿಕೊಳ್ಳುತ್ತಂದೆ ಥಿಯೇಟರ್‌ನಲ್ಲಿ ಕುಣಿದು ಕುಪ್ಪಳಿದ ಜನ
ಪ್ರಧಾನಿ ನರೇಂದ್ರ ಮೋದಿಯ ಭಾಷಣದ ಎರಡು ತುಣುಕುಗಳನ್ನು ಯಥವಾತ್ತಾಗಿ ಧುರಂಧರ್ 2 ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ಈ ಸೀನ್ ಬಂದಾಗ ಥಿಯೇಟರ್‌ನಲ್ಲಿ ಜನರು ಶಿಳ್ಳೆ, ಚಪ್ಪಾಳೆ ಮೂಲಕ ಕುಣಿದು ಕುಪ್ಪಳಿಸಿದ್ದಾರೆ. ಪ್ರಧಾನಿ ಮೋದಿ ಸೀನ್ ಇದೀಗ ಭಾರಿ ಚರ್ಚೆಯಾಗುತ್ತಿದೆ.
ಧುರಂಧರ್ ಸಿನಿಮಾ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧುರಂಧರ್ 1 ಸಿನಿಮಾದಲ್ಲಿ ಅಕ್ಷಯ್ ಖನ್ನ ಎಲ್ಲರ ಗಮನಸೆಳೆದಿದ್ದರು, ಧುರಂಧರ್ 2 ಸಿನಿಮಾದಲ್ಲಿ ಪ್ರಧಾನಿ ಮೋದಿ ಎಲ್ಲರ ಗಮನಸೆಳೆದಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ.
56
ಧರುಂಧರ್ 2 ಸಿನಿಮಾಗೆ ಕೆಲವರ ವಿರೋಧ
ಧುರಧರ್ 2 ಸಿನಿಮಾ ಕುರಿತು ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಎಐಎಂಐಎಂ ನಾಯಕ ವಾರಿಸ್ ಪಠಾಣ್ ಸೇರಿದಂತೆ ಹಲವು ನಾಯಕರು ಇದು ಪ್ರಪೋಗಾಂಡ ಸಿನಿಮಾ ಎಂದು ದೂರಿದ್ದಾರೆ. ಧುರಂಧರ್ 2 ಸಿನಿಮಾ ಕಟ್ಟು ಕತೆ, ಸುಳ್ಳುಗಳನ್ನೇ ಹೇಳಿದ್ದಾರೆ ಎಂದು ಕೆಲ ಅಲ್ಪಸಂಖ್ಯಾತ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
66
ಸಿನಿಮಾಗೆ ಕತ್ತರಿ ಹಾಕಿದ್ದ CBFC
CBFC ಸರ್ಟಿಫಿಕೇಟ್ ವೇಳೆ ಮಂಡಳಿ ಸಿನಿಮಾಗೆ ಹಲವು ಕತ್ತರಿ ಹಾಕಿದೆ. ಹಲವು ಸೀನ್‌ಗಳನ್ನು ಕತ್ತರಿಸುವಂತೆ ಸೂಚಿಸಿತ್ತು. ಈ ಸೀನ್ ಕತ್ತರಿ ಹಾಕಿದ ಬಳಿಕ ಎ ಸರ್ಟಿಫಿಕೇಟ್ ನೀಡಿದೆ. ಆದರೆ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಧುರಂಧರ್ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇದೀಗ ಧುರಂಧರ್ ಹಲವು ಬಾಲಿವುಡ್ ಸಿನಿಮಾ ದಾಖಲೆ ಮುರಿಯುವ ಸಾಧ್ಯತೆ ಇದೆ.
ಸಿನಿಮಾಗೆ ಕತ್ತರಿ ಹಾಕಿದ್ದ CBFC
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.