ಜಗಪತಿ ಬಾಬುಗೆ 5 ವರ್ಷ ತನ್ನ ಸಿನಿಮಾದಿಂದ ಬ್ಯಾನ್ ಮಾಡಿದ ಜೂನಿಯರ್ ಎನ್.ಟಿ.ಆರ್!

Published : Nov 16, 2024, 03:30 PM IST

ತೆಲುಗು ಚಿತ್ರರಂಗದ ಪ್ಯಾನ್ ಇಂಡಿಯಾ ಜೂನಿಯರ್ ಎನ್.ಟಿ.ಆರ್ ಅವರು ಇನ್ನೊಬ್ಬ ಸ್ಟಾರ್ ನಟ ಜಗಪತಿ ಬಾಬು ಅವರಿಗೆ ನಾಲ್ಕೈದು ವರ್ಷ ಕಾಣಿಸಬೇಡ ಅಂತ ಬೈದು ತಮ್ಮ ಸಿನಿಮಾಗಳಿಂದ ಬ್ಯಾನ್ ಮಾಡಿದ್ದರು ಎಂಬ ವಿಚಾರ ಮುನ್ನೆಲೆಗೆ ಬಂದಿದೆ.  ಒಂದು ಸಿನಿಮಾದಲ್ಲಿ ಜಗಪತಿ ಬಾಬು ಡಾಮಿನೇಟ್ ಮಾಡಿದ್ದೇ ಇದಕ್ಕೆ ಕಾರವೆಂದು ಅವರು ಹೇಳಿದ್ದಾರೆ. ಹೀಗಾಗಿ, 6 ವರ್ಷವಾದರೂ ಅವರೊಂದಿಗೆ ಸಿನಿಮಾ ಮಾಡಿಲ್ಲ..

PREV
16
ಜಗಪತಿ ಬಾಬುಗೆ 5 ವರ್ಷ ತನ್ನ ಸಿನಿಮಾದಿಂದ ಬ್ಯಾನ್ ಮಾಡಿದ ಜೂನಿಯರ್ ಎನ್.ಟಿ.ಆರ್!

ಈಗಿನ ಟಾಲಿವುಡ್‌ನ ದೊಡ್ಡ ನಟರಲ್ಲಿ ಎನ್.ಟಿ.ಆರ್ ಒಬ್ಬರು. ಒಳ್ಳೆ ನಟನೆ ಜೊತೆಗೆ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ. ಹಾಡು ಕೂಡ ಹೇಳ್ತಾರೆ. ಎನ್.ಟಿ.ಆರ್ ಅದ್ಭುತ ನಟ ಅಂತ ಹಿರಿಯ ನಟರು ಓಪನ್ ಆಗೇ ಹೇಳಿದ್ದಾರೆ. ಆದರೆ ಎನ್.ಟಿ.ಆರ್ ಅವರನ್ನು ಹಿರಿಯ ಸ್ಟಾರ್ ನಟ ಜಗಪತಿ ಬಾಬು ಅವರು ಡಾಮಿನೇಟ್ ಮಾಡಿದ್ದರಂತೆ. ಹೀಗಾಗಿ, ಜ್ಯೂ.ಎನ್‌ಟಿಆರ್ ಬೇಸರ ಪಟ್ಟುಕೊಂಡಿದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ.

26

ಅರವಿಂದ ಸಮೇತ ವೀರ ರಾಘವ ಚಿತ್ರದಲ್ಲಿ ಎನ್.ಟಿ.ಆರ್ ಹೀರೋ, ಜಗಪತಿ ಬಾಬು ವಿಲನ್ ಆಗಿದ್ದರು. ಕ್ರೂರಿ ಫ್ಯಾಕ್ಷನಿಸ್ಟ್ ಆಗಿ ಜಗಪತಿ ಬಾಬು ಪಾತ್ರ ಇರುತ್ತದೆ. ಎನ್.ಟಿ.ಆರ್ ಕೂಡ ಫ್ಯಾಕ್ಷನಿಸ್ಟ್ ಆದರೂ ನಂತರ ಒಳ್ಳೆಯವನಾಗಿ ಕಾಣಿಸಿಕೊಳ್ಳುತ್ತಾರೆ. ಅವರ ನಟನೆ ಸೆಟಲ್ಡ್‌ ಆಗಿರುತ್ತದೆ. ನಿರ್ದೇಶಕ ತ್ರಿವಿಕ್ರಮ್ ಫ್ಯಾಕ್ಷನಿಸಂನಲ್ಲಿ ಎನ್.ಟಿ.ಆರ್ ಹೀರೋಯಿಸಂ ಅನ್ನು ಹೊಸದಾಗಿ ತೋರಿಸೋ ಪ್ರಯತ್ನ ಮಾಡಿದ್ದರು.

36

ಆದರೆ, ತನ್ನ ಪಾತ್ರಕ್ಕಿಂತ ಜಗಪತಿ ಬಾಬು ಮಾಡಿದ ಬಸಿರೆಡ್ಡಿ ಪಾತ್ರ ಚೆನ್ನಾಗಿದೆ ಅಂತ ಎನ್.ಟಿ.ಆರ್ ಹೇಳಿದ್ದರಂತೆ. ಇದೇ ವಿಚಾರ ಮುಂದಿಟ್ಟುಕೊಂಡು ಜಗಪತಿ ಬಾಬು ಅವರನ್ನ ದಿನಾ ಕಾಲೆಳೆಯುತ್ತಿದ್ದರು. ಒಂದು ಸಂದರ್ಶನದಲ್ಲಿ ಜಗಪತಿ ಬಾಬು ಮಾತಾಡ್ತಾ, 'ಅರವಿಂದ ಸಮೇತ ಚಿತ್ರದಲ್ಲಿ ನನ್ನದು ತುಂಬಾ ಅದ್ಭುತವಾದ ಪಾತ್ರ. ಕಥೆಗೆ ಚೆನ್ನಾಗಿ ವರ್ಕ್ ಆಗಿದೆ. ದುರಾದೃಷ್ಟವಶಾತ್ ನನ್ನದು ಆಕ್ರಮಣಕಾರಿ ಪಾತ್ರ, ತಾರಕ್ ನಿಷ್ಕ್ರಿಯ ಪಾತ್ರ ಮಾಡಿದರು' ಎಂದು ಹೇಳಿದರು.

46
ಜಗಪತಿ ಬಾಬು

ಅರವಿಂದ ಸಮೇತ ಬಿಡುಗಡೆ ಸಮಾರಂಭದಲ್ಲಿ ಕೂಡ ಜ್ಯೂ.ಎನ್‌ಟಿಆರ್ ಅವರು, 'ಮೊದಲು ಬಸಿರೆಡ್ಡಿ ನೆನಪಿಗೆ ಬರ್ತಾನೆ. ಆಮೇಲೆ ನಾನು ನೆನಪಿಗೆ ಬರ್ತೀನಿ' ಅಂತ ಸ್ವತಃ ಹೇಳಿದ್ದರು. ಅಷ್ಟು ದೊಡ್ಡ ಹೀರೋ ಅಂಥ ಹೇಳಿಕೆ ಕೊಡೋದೇ ಸಾಹಸ. ಆಮೇಲೆ ನನ್ನ ಜೊತೆ, 'ಬಾಬು ಇನ್ನೂ ನಿಮಗೂ ನನಗೂ ಮುಗಿದೋಯ್ತು. ನೀವು ತಾರಕ್ ಜೊತೆ ಆಟ ಆಡ್ತಿದ್ದೀರ. ಅದು ಸರಿಯಲ್ಲ. ಒಂದು 4-5 ವರ್ಷ ನನಗೆ ಕಾಣಿಸಬೇಡಿ' ಎಂದು ಹೇಳಿದ್ದರು. ಅವರು ತೋರಿಸಿದ ಪ್ರೀತಿ, ಅವರು ಪ್ರೀತಿಯಿಂದಲೇ ಹೇಳಿರುವುದು ನನ್ನ ನಟನೆಗೆ ಕೊಟ್ಟ ಗೌರವವಾಗಿದೆ ಎಂದು ಜಗಪತಿ ಬಾಬು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

56
ಅರವಿಂದ ಸಮೇತ

ಈ ಮೂಲಕ ತನ್ನೊಂದಿಗೆ ಸ್ವಲ್ಪ ದಿನ ತನ್ನ ಸಿನಿಮಾಗಳಲ್ಲಿ ನೀವು ನಟಿಸಬೇಡಿ ಅಂತ ಎನ್.ಟಿ.ಆರ್ ಪರೋಕ್ಷವಾಗಿ ಹೇಳಿದ್ದರು ಎಂಬುದನ್ನು ಜಗಪತಿ ಬಾಬು ತಿಳಿಸಿದ್ದಾರೆ. ಅರವಿಂದ ಸಮೇತ ವೀರ ರಾಘವ 2018 ರಲ್ಲಿ ಬಿಡುಗಡೆಯಾಯಿತು. ಈವರೆಗೆ 6 ವರ್ಷಗಳಲ್ಲಿ ಎನ್.ಟಿ.ಆರ್ ನಟಿಸಿದ್ದು ಎರಡೇ ಚಿತ್ರಗಳಲ್ಲಿ. ಒಂದು ಆರ್.ಆರ್.ಆರ್, ಇನ್ನೊಂದು ದೇವರ. ಈ ಎರಡೂ ಚಿತ್ರಗಳಲ್ಲಿ ಜಗಪತಿ ಬಾಬು ಅವರೊಂದಿಗೆ ನಟಿಸಿಲ್ಲ. ಇನ್ನುಮುಂದೆ ನಟಿಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.

 

66

ಈಗ ಎನ್.ಟಿ.ಆರ್ ವಾರ್ 2 ಚಿತ್ರೀಕರಣದಲ್ಲಿ ಭಾಗವಹಿಸ್ತಿದ್ದಾರೆ. ಹೃತಿಕ್ ರೋಷನ್ ಜೊತೆ ಮಾಡ್ತಿರೋ ಮಲ್ಟಿಸ್ಟಾರರ್ ಈ ಚಿತ್ರ. ವಾರ್ 2 ಆದ್ಮೇಲೆ ಪ್ರಶಾಂತ್ ನೀಲ್ ಜೊತೆ ಸಿನಿಮಾ ಮಾಡ್ತಾರೆ. ಇದರ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ದೇವರ 2 ಸಿನಿಮಾನೂ ಎನ್.ಟಿ.ಆರ್ ಪೂರ್ಣಗೊಳಿಸಬೇಕಿದೆ. ದೇವರ 2 ಇರೋದಿಲ್ಲ ಅನ್ನೋ ಪ್ರಚಾರ ನಡೀತಿದೆ.

Read more Photos on
click me!

Recommended Stories