ಈಕೆ ದಕ್ಷಿಣ ಭಾರತದ ಜನಪ್ರಿಯ ನಟಿ (star actress). ಏನೂ ಇಲ್ಲದೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಈಗ ಲೇಡಿ ಸೂಪರ್ ಸ್ಟಾರ್ ಆಗಿ ತಮಿಳು ಸಿನಿಮಾರಂಗವನ್ನ ರೂಲ್ ಮಾಡ್ತಿದ್ದಾರೆ. ಸಿನಿಮಾರಂಗದಲ್ಲೇ ಇಬ್ಬರನ್ನು ಲವ್ ಮಾಡಿ, ಡೇಟಿಂಗ್ ಮಾಡಿ ಸುದ್ದಿಯಾಗಿದ್ದ ಈ ನಟಿ ಈಗ ನಿರ್ದೇಶಕರೊಬ್ಬರನ್ನು ಮದ್ವೆಯಾಗಿ ಸಂಸಾರ ನಡೆಸುತ್ತಿದ್ದಾರೆ.
ಇಷ್ಟೆಲ್ಲಾ ಹೇಳಿದ ಮೇಲೆ ಯಾರ ಬಗ್ಗೆ ಹೇಳ್ತಿರೋದು ಅನ್ನೋದು ನಿಮಗೂ ಗೊತ್ತಾಗಿರಬೇಕು ಅಲ್ವಾ? ಇವರು ಬೇರಾರೂ ಅಲ್ಲ ಲೇಡಿ ಸೂಪರ್ ಸ್ಟಾರ್ (Lady superstar) ಎಂದೇ ಖ್ಯಾತಿ ಪಡೆದಿರೋ ನಯನತಾರಾ. ತಮ್ಮ ಕಾಂಟ್ರವರ್ಸಿಗಳಿಂದಲೇ ಸದಾ ಸುದ್ದಿಯಲ್ಲಿದ್ದು, ಸದ್ಯಕ್ಕೆ ಟಾಪ್ ಹೀರೋಯಿನ್ ಆಗಿ ಇಂಡಸ್ಟ್ರಿ ರೂಲ್ ಮಾಡ್ತಿದ್ದಾರೆ ನಯನಾ.
2003ರಲ್ಲಿ ಮಲಯಾಳಂ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಕರಿಯರ್ ಆರಂಭಿಸಿದ್ದ ಡಯಾನಾ ಮರಿಯಮ್ ಕುರಿಯನ್, ಬಳಿಕ ನಯನ್ ತಾರಾ (Nayanathara) ಆಗಿ ಎರಡು ದಶಕಗಳ ಹಿಂದೆ ಜಯರಾಮ್ ಅವರೊಂದಿಗೆ ಮಲಯಾಳಂ ಚಿತ್ರ ಮನಸಿನಕರೆ ಮೂಲಕ ಬಣ್ಣದ ಜಗತ್ತಿಗೆ ಪಾದಾರ್ಪಣೆ ಮಾಡಿದ ನಟಿ, ನಂತರ ತಮಿಳು, ತೆಲುಗು ಮತ್ತು ಹಿಂದಿ ಉದ್ಯಮಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಈ 20 ವರ್ಷಗಳಲ್ಲಿ, ನಟಿ ತನ್ನ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಏರಿಳಿತಗಳನ್ನು ಎದುರಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಹೆಚ್ಚು ಪ್ರಚಾರ ಪಡೆದಿವೆ. ನಯನಾ ಸಿನಿಮಾ ಜೀವನ ಉತ್ತುಂಗಕ್ಕೆ ಏರಿದ್ದು ನಿಜ, ಆದರೆ ಇವರ ವೈಯಕ್ತಿಕ ಜೀವನ ಮಾತ್ರ ಕಾಂಟ್ರೋವರ್ಸಿಗಳಿಂದಲೇ ತುಂಬಿ ಹೋಗಿತ್ತು.
ನಯನತಾರಾ ಈ ಹಿಂದೆ ಸ್ಟಾರ್ ಹೀರೋ ಆಗಿದ್ದ ಸಿಂಬು (Simbu) ಅವರನ್ನು ಲವ್ ಮಾಡುತ್ತಿದ್ದರು. ಅಂದು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಈ ಜೋಡಿ ಹಕ್ಕಿಗಳ ಹೆಸರು ಭಾರಿ ಸದ್ದು ಮಾಡುತ್ತಿತ್ತು. ಅಷ್ಟೇ ಅಲ್ಲ ಇವರಿಬ್ಬರ ಕಿಸ್ಸಿಂಗ್ ವಿಡಿಯೋ, ಇಂಟಿಮೇಟ್ ಫೋಟೋಗಳು ಸಹ ವೈರಲ್ ಆಗಿತ್ತು. ಹಲವು ವರ್ಷಗಳವರೆಗೆ ಲವ್ ಮಾಡುತ್ತಿದ್ದ ಈ ಜೋಡಿಯ ಸಂಬಂಧದಲ್ಲಿ ಬಿರುಕು ಬಿಟ್ಟಿತು.
ಸಿಂಬು ಜೊತೆಗಿನ ಬ್ರೇಕ್ ಅಪ್ ಬಳಿಕ ನಯನತಾರಾ ಹೆಸರು ಕೇಳಿ ಬಂದಿದ್ದು ಜನಪ್ರಿಯ ಕೊರಿಯೋಗ್ರಾಫರ್, ನಟ ಆಗಿರುವ ಪ್ರಭುದೇವ (Prabhu Deva) ಜೊತೆಗೆ. ಇವರಿಬ್ಬರು ಡೇಟಿಂಗ್ ಮಾಡುವ ವಿಷಯ ಕೇಳಿ ಚಿತ್ರರಂಗವೇ ಶಾಕ್ ಆಗಿತ್ತು. ಇಬ್ಬರೂ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಸದ್ದು ಮಾಡಿತ್ತು. ಆದರೆ ಆಗಲೇ ಪ್ರಭುದೇವ ಮದುವೆ ಕೂಡ ಆಗಿತ್ತು. ಪ್ರಭುದೇವ ಡಿವೋರ್ಸ್ ಕೇಳಿ, ಅವರ ಪತ್ನಿ ಲತಾ ಗಂಡನ ವಿರುದ್ದ ಕೋರ್ಟ್ ಮೆಟ್ಟಿಲು ಕೂಡ ಏರಿದ್ದರು. ನಂತರ ಇಬ್ಬರೂ ಡಿವೋರ್ಸ್ ಕೂಡ ಪದೆದಿದ್ದರು.
ನಯನತಾರಾ ಮತ್ತು ಪ್ರಭುದೇವ ಲವ್ ಸ್ಟೋರಿ ಎಷ್ಟು ಸ್ಟ್ರಾಂಗ್ ಆಗಿತ್ತಂದ್ರೆ ನಟಿ ಪ್ರಭುದೇವ ಹೆಸರಿನ ಟ್ಯಾಟೂ ಕೂಡ ತನ್ನ ಕೈಯಲ್ಲಿ ಹಾಕಿಸಿಕೊಂಡಿದ್ದರು. 2-3 ವರ್ಷ ರಿಲೇಶನ್ ಶಿಪ್‌ನಲ್ಲಿದ್ದ ಈ ಜೋಡಿ 2011 ರಲ್ಲಿ ಬ್ರೇಕ್ ಅಪ್ ಮಾಡಿಕೊಂಡಿತು. ನಯನತಾರ ಹಲವು ಬಾರಿ ಮದುವೆ ಪ್ರಪೋಸಲ್ ಮಾಡಿದಾಗಲೂ ಪ್ರಭುದೇವ ಮದುವೆಗೆ ತಯಾರಾಗಿರದೇ ಇದ್ದದ್ದು ಇದಕ್ಕೆ ಕಾರಣ ಎನ್ನಲಾಗಿದೆ.
ಕೊನೆಯದಾಗಿ 2015ರಲ್ಲಿ ನಾನ್ ರೌಡಿ ದಾನ್ ಸಿನಿಮಾದಲ್ಲಿ ನಟಿಸುವ ವೇಳೆ ನಯನತಾರಾಗೆ ನಿರ್ದೇಶಕ ವಿಘ್ನೇಶ ಶಿವನ್ (Vignesh Shivan) ಮೇಲೆ ಲವ್ ಆಗಿದೆ. ಇಬ್ಬರು 7 ವರ್ಷಗಳ ಕಾಲ ಡೇಟಿಂಗ್ ಮಾಡಿ, ಕೊನೆಗೆ 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಸ್ವಲ್ಪ ಸಮಯದಲ್ಲೇ ಜೋಡಿ ಸರೋಗಸಿ ಮೂಲಕ ಉಯಿರ್ ಮತ್ತು ಉಲಗ್ ಎನ್ನುವ ಮುದ್ದಾದ ಮಕ್ಕಳ ಪೋಷಕರಾಗಿಯೂ ಭಡ್ತಿ ಪಡೆದರು.
ಸದ್ಯ ಈ ಜೋಡಿ ಸಂತೋಷವಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ಲವ್ ಸ್ಟೋರಿ ಆರಂಭವಾಗೋಕೆ ಒಂದು ರೀತಿಯಲ್ಲಿ ನಟ ಧನುಷ್ ಕಾರಣ ಎಂದು ಸಹ ಹೇಳಲಾಗುತ್ತಿದೆ. ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ವಿಘ್ನೇಶ್ ಮತ್ತು ನಯನ್ ಜೋಡಿಯ ಸುಂದರ ಸಂಸಾರದ ಫೋಟೋಗಳೇ ತುಂಬಿರುತ್ತೆ. ಇದನ್ನ ನೋಡಿ ಫ್ಯಾನ್ಸ್ ಕೂಡ ಈ ಜೋಡಿ ಯಾವಾಗ್ಲೂ ಹೀಗೆ ಖುಷಿ ಖುಷಿಯಾಗಿರಲಿ ಎಂದು ಹಾರೈಸುತ್ತಾರೆ.