ಪ್ರವಾಸವನ್ನು ಮಂಗಳವಾರ ಮಧ್ಯಾಹ್ನ ಮುಗಿಸಿದ ನಂತರ, ಪವನ್ ಅದೇ ರಾತ್ರಿ 9.30ಕ್ಕೆ ಸಿಂಗಾಪುರಕ್ಕೆ ತೆರಳಿದರು. ಪವನ್ ಜೊತೆಗೆ ಅವರ ಸಹೋದರ ಚಿರಂಜೀವಿ ಮತ್ತು ಅವರ ಪತ್ನಿ ಸುರೆಖಾ ಕೂಡ ಇದ್ದರು. ನಿನ್ನೆ ಮಾಧ್ಯಮದೊಂದಿಗೆ ಮಾತನಾಡಿದ ಪವನ್, ತಮ್ಮ ಹಿರಿಯ ಮಗ ಅಕೀರಾ ನಂದನ್ ಹುಟ್ಟುಹಬ್ಬದ ದಿನದಂದೇ ತಮ್ಮ ಚಿಕ್ಕ ಮಗನಿಗೆ ಗಾಯಗಳಾಗಿರುವುದು ದುಃಖ ತಂದಿದೆ ಎಂದರು. ಮಗು ಚೇತರಿಸಿಕೊಳ್ಳುತ್ತಿದ್ದಾನೆ, ಆದರೆ ಶ್ವಾಸಕೋಶಕ್ಕೆ ಹೊಗೆ ಹೋಗಿರುವುದರಿಂದ ಸ್ವಲ್ಪ ಸಮಯದವರೆಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಪವನ್ ಅವರ ಮಗನಿಗೆ ಗಾಯವಾದಾಗ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಚಂದ್ರಬಾಬು ಅವರು ದೂರವಾಣಿ ಕರೆ ಮಾಡಿ ಮಾತನಾಡಿದರು ಮತ್ತು ಅನೇಕ ರಾಜಕಾರಣಿಗಳು ಮಗು ಬೇಗ ಗುಣಮುಖವಾಗಲಿ ಎಂದು ಹಾರೈಸಿದರು, ಅದಕ್ಕಾಗಿ ಪವನ್ ಅವರೆಲ್ಲರಿಗೂ ಧನ್ಯವಾದ ಅರ್ಪಿಸಿದರು.