ಈ ಮಧ್ಯೆ ಮದುವೆ ಆದೋರು ಡಿವೋರ್ಸ್ ತಗೊಳೋದು ಒಂದೆಡೆಯಾದ್ರೆ, ಒಬ್ಬರನ್ನೊಬ್ಬರು ಕೊಲೆ ಮಾಡೋದು ಜಾಸ್ತಿಯಾಗಿದೆ. ರೀಸಂಟಾಗಿ ಗಂಡನ್ನ ಹೆಂಡ್ತಿ ಕೊಲ್ಲೋದು, ಹೆಂಡ್ತಿನ ಗಂಡ ಕೊಲ್ಲೋದು ಜಾಸ್ತಿಯಾಗಿದೆ. ಅದು ಕೂಡ ಸುಮ್ನೆ ಅಲ್ಲ, ತುಂಬಾ ಕ್ರೂರವಾಗಿ ಕೊಲೆ ಮಾಡ್ತಿದ್ದಾರೆ. ಅಸಲಿಗೆ ಗಂಡ ಹೆಂಡತಿ ಮಧ್ಯೆ ಇಷ್ಟೊಂದು ದ್ವೇಷ ಯಾಕೆ ಬರುತ್ತೆ? ಇದಕ್ಕೆ ಮುಖ್ಯ ಕಾರಣ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದೆ ಇರೋದು. ಕನಿಷ್ಠ ಇಬ್ಬರೂ ಕೂತು ಮನಸ್ಸು ಬಿಚ್ಚಿ ಮಾತಾಡದೆ ಇರೋದೇ ಕಾರಣ ಅಂತ ಹೇಳ್ತಿದ್ದಾರೆ.
ಗಂಡ ಹೆಂಡತಿ ಮಧ್ಯೆ ಮನಸ್ತಾಪ ಬರೋ ವಿಚಾರದ ಬಗ್ಗೆ ಉಪಾಸನ ಮಾತಾಡಿದ್ದಾರೆ. ಎಷ್ಟೇ ಕೆಲಸ ಇದ್ರೂ ಚರಣ್ ಜೊತೆ ವಾರಕ್ಕೆ ಒಂದು ದಿನ ಡಿನ್ನರ್ ಡೇಟ್‌ಗೆ ಉಪಾಸನ ಹೋಗ್ತಾರಂತೆ. ಅಲ್ಲಿ ಆ ವಾರದಲ್ಲಿ ಏನೇನಾಯ್ತು, ಪರ್ಸನಲ್ ವಿಷಯಗಳ ಬಗ್ಗೆ ಇಬ್ಬರೂ ಮಾತಾಡ್ತಾರಂತೆ. ಹೀಗೆ ಮಾಡೋದ್ರಿಂದ ಒಬ್ಬರಿಗೊಬ್ಬರಿಗೆ ಪ್ರೀತಿ ಜಾಸ್ತಿಯಾಗುತ್ತೆ ಅಂತ ಅವರು ಹೇಳ್ತಾರೆ.