ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಪರ್ವೀನ್ ಆರಂಭಿಕ ಶಿಕ್ಷಣವನ್ನು ಅಹಮದಾಬಾದ್‌ನ ಮೌಂಟ್ ಕಾರ್ಮೆಲ್ ಪ್ರೌಢಶಾಲೆ ಹಾಗೂಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಡಿಗ್ರಿ ಪಡೆದರು.
ಈ ಸಮಯದಲ್ಲಿ, ಚಲನಚಿತ್ರ ನಿರ್ಮಾಪಕ ಬಿ.ಆರ್. ಇಶಾರಾ ಅವರ ಕಣ್ಣಿಗೆ ಬಿದ್ದರು ಪರ್ವೀನ್. ಮಿನಿ ಸ್ಕರ್ಟ್ ಧರಿಸಿ ಸಿಗರೇಟನ್ನು ಕೈಯಲ್ಲಿ ಹಿಡಿದುಕೊಂಡ ಪರ್ವೀನ್ ಸ್ಟೈಲ್ ತುಂಬಾ ಇಷ್ಟಪಟ್ಟ ಅವರು ಚರಿತ್ರಾ (1973) ಚಿತ್ರಕ್ಕೆ ಸಹಿ ಹಾಕಿಸಿಕೊಂಡರು. ಚಿತ್ರ ಮುಂದುವರಿಯಲಿಲ್ಲ. ಆದರೆ ಪರ್ವೀನ್ ಬಾಬಿ ಬೆಳಕಿಗೆ ಬಂದರು.
ನಂತರ, ಶೀಘ್ರದಲ್ಲೇ ಪರ್ವೀನ್ ಬಾಬಿ ಇಂಡಸ್ಟ್ರಿಯಲ್ಲಿ ನೆಲೆ ಕಂಡು ಕೊಂಡರು.ಇವರ ಹೆಸರು ಮೊದಲುಡ್ಯಾನಿಯೊಂದಿಗೆ ಲಿಂಕ್ ಮಾಡಲಾಯಿತು. ಅವರ ಸಂಬಂಧ 'ಧುನ್ ಕಿ ಲಕಿಯಾರ್' ಚಿತ್ರದಿಂದ ಪ್ರಾರಂಭವಾಯಿತು. ಆದರೆಹೆಚ್ಚು ಕಾಲ ಉಳಿಯಲಿಲ್ಲ.
ಡ್ಯಾನಿ ನಂತರ, ಪರ್ವೀನ್ ಕಬೀರ್ ಬೇಡಿಯೊಂದಿಗೆ ಸಂಪರ್ಕಕ್ಕೆ ಬಂದರು.ಬೋಲ್ಡ್ ಹಾಗೂ ಮಾರ್ಡನ್ ಮನೋಭಾವದ ಪರ್ವೀನ್ ಮತ್ತು ಕಬೀರ್ ಪರಸ್ಪರ ತುಂಬಾ ಇಷ್ಟಪಟ್ಟಿದ್ದು, ಇಬ್ಬರೂ ದೀರ್ಘಕಾಲ ಲೀವ್‌ಇನ್ ರಿಲೆಶನ್‌ನಲ್ಲಿದ್ದರು. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.
ಇದರ ನಂತರ ಪರ್ವೀನ್ ಜೀವನದಲ್ಲಿ ಮಹೇಶ್ ಭಟ್ ಬಂದರು. ಇಬ್ಬರೂ ಸುಮಾರು ಮೂರು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು.
ಹೆಚ್ಚುಪ್ರಚಾರ ಮತ್ತು ಯಶಸ್ಸು ಪರ್ವೀನ್‌ನ ಅತಿದೊಡ್ಡ ಶತ್ರುವಾಯಿತು. ಈ ಕಾರಣದಿಂದಾಗಿ ಬಾಲಿವುಡ್‌ನ ಎಲ್ಲರೂ ಅವರನ್ನು ತಮ್ಮ ಶತ್ರುಗಳಂತೆ ನೋಡಲಾರಂಭಿಸಿದರು.
ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ, ಪರ್ವೀನ್ ಬಾಬಿ ಜನವರಿ 20, 2005ರಂದು ಜಗತ್ತಿಗೆ ವಿದಾಯ ಹೇಳಿದರು.
ಇದು ಆನುವಂಶಿಕ ಕಾಯಿಲೆಯಾಗಿದ್ದು, ಚೇತರಿಸಿಕೊಳ್ಳಲುಸಾಧ್ಯವಾಗಲಿಲ್ಲ. ಜೊತೆಗೆ ಪರ್ವೀನ್ ಡಯಾಬಿಟೀಸ್ ಮತ್ತು ಗ್ಯಾಂಗ್ರೀನ್‌ನಿಂದ ಬಳಲುತ್ತಿದ್ದರು.
2014ರಲ್ಲಿ ಪ್ರಸಿದ್ಧ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಹೇಶ್ ಭಟ್ ಪರ್ವೀನ್ ಜೊತೆ ಅವರ ಸಂಬಂಧ, ಪ್ರೀತಿ ಮತ್ತು ಅವರನ್ನು ಬಿಟ್ಟು ಹೋಗುವ ಸಂಪೂರ್ಣ ಕಥೆಯ ಬಗ್ಗೆ ಮಾತನಾಡಿದರು.
ಅನಾರೋಗ್ಯದ ಕಾರಣ, ಪರ್ವೀನ್ ಅವರ ಮಾನಸಿಕ ಸ್ಥಿತಿ ತುಂಬಾ ಹದಗೆಟ್ಟಿದ್ದು, ಅಮಿತಾಬ್ ಬಚ್ಚನ್ ಅವರನ್ನುತನ್ನ ಶತ್ರು ಎಂದು ಪರಿಗಣಿಸಲು ಪ್ರಾರಂಭಿಸಿದ್ದಾಳೆ ಎಂದು ಅವರು ಹೇಳಿದರು.
1980ರಲ್ಲಿ ಶಾನ್ ಚಿತ್ರದ ಟೈಟಲ್ ಸಾಂಗ್ ಶೂಟ್ ಮಾಡುವಾಗ ಪರ್ವೀನ್ ಇದ್ದಕ್ಕಿದ್ದಂತೆ ಶೂಟಿಂಗ್ ನಿಲ್ಲಿಸಿದರು. ದೊಡ್ಡ ಲೈಟ್ಸ್ ಅಡಿಯಲ್ಲಿ ನಿಲ್ಲಲು ನಿರಾಕರಿಸಿದರು. ಲೈಟ್ ಅನ್ನು ಬಿಳಿಸಿ ಅಮಿತಾಭ್‌ನಟಿಯನ್ನು ಕೊಲ್ಲಲು ಬಯಸಿದ್ದಾರೆ ಹಾಗೂ ನಿರ್ದೇಶಕ ರಮೇಶ್ ಸಿಪ್ಪಿ ಕೂಡ ಇದರಲ್ಲಿ ಶಾಮೀಲು ಆಗಿದ್ದಾರೆ ಎಂದು ಆರೋಪಿಸಿದ್ದರುಪರ್ವೀನ್.
ಶೂಟಿಂಗ್ ನಿಲ್ಲಿಸಲಾಯಿತು ಮತ್ತು ಪರ್ವೀನ್ ಅವರನ್ನುತೆಗೆದು ಹಾಕಲಾಯಿತು ಎಂದು ಮಹೆಶ್ ಭಟ್ ಹೇಳಿದ್ದಾರೆ.
1979ರಲ್ಲಿ ಒಂದು ದಿನ ಮಹೇಶ್ ಮನೆಗೆ ಹಿಂದಿರುಗಿದಾಗ, ಚಿತ್ರದ ಕಾಸ್ಟ್ಯೂಮ್ ಧರಿಸಿ ಮನೆಯ ಒಂದು ಮೂಲೆಯಲ್ಲಿ ಕುಳಿತಿದ್ದ ಪರ್ವೀನ್ ಕೈಯಲ್ಲಿ ಚಾಕು ಇತ್ತು. ಕೋಣೆಯಲ್ಲಿ ಯಾರೋ ಇದ್ದಾರೆ,ಅವರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದಳು. ನಂತರ ಆಗಾಗ್ಗೆ ಪರ್ವೀನ್ ಈ ರೀತಿ ಮಾಡಲು ಪ್ರಾರಂಭಿಸಿದಳು ಎಂದು ಎಂದು ಮಹೇಶ್ ಬಹಿರಂಗ ಪಡಿಸಿದ್ದಾರೆ.
ಎಲ್ಲಾ ಚಿಕಿತ್ಸೆಯ ಹೊರತಾಗಿಯೂ, ಪರ್ವೀನ್ ರೋಗವನ್ನು ಗುಣಪಡಿಸಲಾಗಲಿಲ್ಲ. ಯಾರಾದರೂ ಅವರನ್ನು ಕೊಲ್ಲಲು ಬಯಸುತ್ತಾರೆ ಎಂಬ ಭಯ ಅವರಲ್ಲಿ ಇತ್ತು. ಸ್ವಲ್ಪ ಸಮಯದ ನಂತರ, ಪರ್ವೀನ್ ತನ್ನ ಕಾರಿನಲ್ಲಿ ಬಾಂಬ್ ಇದೆ ಎಂದು ಭಾವಿಸತೊಡಗಿದರು, ಎಸಿಯ ಶಬ್ದದಿಂದಲೂ ಹೆದರುತ್ತಿದ್ದರು. ಪರ್ವೀನ್ಸ್ಥಿತಿಯನ್ನು ನೋಡಿ, ಅವರನ್ನು ಕೋಣೆಯಲ್ಲಿ ಬೀಗ ಹಾಕಿ ಕೂಡಿ ಹಾಕಲಾಗುತ್ತಿತ್ತು.