ಗಣಪತಿ ವಿಸರ್ಜನೆ ಬಳಿಕ ಮರೀನಾ ಡ್ರೈವ್ ಕ್ಲೀನ್ ಮಾಡಿದ ಬಾಲಿವುಡ್ ಸ್ಟಾರ್ಸ್; ಫೋಟೋ ವೈರಲ್

Published : Sep 10, 2022, 05:17 PM IST

ದೇಶದಾದ್ಯಂತ ಗಣೇಶ ಸಂಭ್ರಮ ಜೋರಾಗಿದೆ. ಮುಂಬೈನಲ್ಲಿ ಸೆಪ್ಟಂಬರ್ 9ರಂದು ರಾಜಗಣಪತಿಯನ್ನ ವಿಸರ್ಜನೆ ಮಾಡಲಾಗಿದೆ. ಅದ್ದೂರಿಯಾಗಿ ಗಣೇಶನನ್ನು ಬೀಳ್ಕೊಟ್ಟಿದೆ ಮುಂಬೈ ಮಂದಿ. ಗಣಪತಿ ವಿಸರ್ಜನೆ ಬಳಿಕ ಗಲೀಜಾಗಿದ್ದ ಮುಂಬೈನ ಜುಹು ಬೀಚ್ ಅನ್ನು ಬಾಲಿವುಡ್ ಮಂದಿ ಕ್ಲೀನ್ ಮಾಡಿದ್ದಾರೆ. 

PREV
16
ಗಣಪತಿ ವಿಸರ್ಜನೆ ಬಳಿಕ ಮರೀನಾ ಡ್ರೈವ್ ಕ್ಲೀನ್ ಮಾಡಿದ ಬಾಲಿವುಡ್ ಸ್ಟಾರ್ಸ್; ಫೋಟೋ ವೈರಲ್

ದೇಶದಾದ್ಯಂತ ಗಣೇಶ ಸಂಭ್ರಮ ಜೋರಾಗಿದೆ. ಮುಂಬೈನಲ್ಲಿ ಸೆಪ್ಟಂಬರ್ 9ರಂದು ರಾಜಗಣಪತಿಯನ್ನ ವಿಸರ್ಜನೆ ಮಾಡಲಾಗಿದೆ. ಅದ್ದೂರಿಯಾಗಿ ಗಣೇಶನನ್ನು ಬೀಳ್ಕೊಟ್ಟಿದೆ ಮುಂಬೈ ಮಂದಿ. ಗಣಪತಿ ವಿಸರ್ಜನೆ ಬಳಿಕ ಗಲೀಜಾಗಿದ್ದ ಮುಂಬೈನ ಜುಹು ಬೀಚ್ ಅನ್ನು ಬಾಲಿವುಡ್ ಮಂದಿ ಕ್ಲೀನ್ ಮಾಡಿದ್ದಾರೆ. 
 
26

ಹೌದು ಬಾಲಿವುಡ್ ಮಂದಿ ಮುಂಬೈ ಬೀಚ್ ಸ್ವಚ್ಛಗೊಳಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಣಪತಿ ವಿಸರ್ಜನೆ ಮಾಡಿದ ಮಾರನೆ ದಿನ ಇಂದು (ಸೆಪ್ಟಂಬರ್ 10) ಬೆಳಗ್ಗೆ ಸಾವಿರಾರು ಸ್ವಯಂಸೇವಕರು, ವಿದ್ಯಾರ್ಥಿಗಳು, ಯುವಕರು, ಬಿಎಂಸಿ ಕಾರ್ಯಕರ್ತರು ಸೇರಿದಂತೆ ಅನೇಕರು ಬೇಚ್ ಸ್ವಚ್ಛಮಾಡಿದ್ದಾರೆ. 

36

ಸೆಲೆಬ್ರಿಟಿಗಳು ಸೇರಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಮುಂಬೈ ನಗರದ ಮೇಲಿನ ಪ್ರೀತಿಯನ್ನು ತೋರುತ್ತಿದೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ ಬಾಲಿವುಡ್  ನಿಂದ ನಟಿ ಪರಿಣೀತಿ ಚೋಪ್ರಾ, ಅನುಪಮ್ ಖೇರ್ ಸೇರಿದಂತೆ ಅನೇಕ ಬಾಲಿವುಡ್ ಸ್ಟಾರ್ ಬೀಚ್ ಕ್ಲೀನ್ ನಲ್ಲಿ ಕಾಣಿಸಿಕಂಡಿದ್ದಾರೆ. 

46

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ಪರಿಣೀತಿ ಚೋಪ್ರಾ ಈ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು. ಪ್ರತಿವರ್ಷ ನಾವು ಇದನ್ನು ಮಾಡಬೇಕಿದೆ ಎಂದು ಹೇಳಿದರು. ನಿಜವಾಗಿಯೂ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು. 

56

ಹಿರಿಯ ನಟ ಅನುಪಮ್ ಖೇರ್ ಅವರು ಮಾತನಾಡಿ ಭಾರಿ ಜನಸ್ತೋಮವನ್ನು ನೋಡಲು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದು ಹೇಳಿದರು. ತುಂಬಾ ಸಂತೋಷವಾಗುತ್ತಿದೆ. ಅನೇಕ ಯುವಕರನ್ನು ನೋಡಿದಾಗ ತುಂಬಾ ಖುಷಿಯಾಯಿತು ಎಂದು ಹೇಳಿದ್ದಾರೆ.  

66

ಮಕ್ಕಳು ಸಹ ಕಡಲತೀರದ ಸುತ್ತಲೂ ತ್ಯಾಜ್ಯ ವಸ್ತುಗಳನ್ನು ಎತ್ತಿ ಕ್ಲೀನ್ ಮಾಡಿದರು. ಬಿಎಂಸಿ ಕಾರ್ಯಕರ್ತರು ಕಸದ ತೊಟ್ಟಿಗಳನ್ನು ಎತ್ತಿಕೊಂಡು ವ್ಯವಸ್ಥಿತವಾಗಿ ಕಸ ಸಂಗ್ರಹಿಸಿದರು. ಕ್ಲೀನ್ ಬಳಿಕ ಬೀಚ್ ಸುಂದರವಾಗಿ ಕಂಗೊಳಿಸುತ್ತಿದೆ. 

Read more Photos on
click me!

Recommended Stories