ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ಟಿ-ಟೌನ್ ಬ್ಯೂಟಿ ಸಮಂತಾ ಪುಷ್ಪ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರಚಾರದ ವೇಳೆ ಇಬ್ಬರೂ ತುಂಬಾನೇ ಕ್ಲೋಸ್ ಆಗಿಬಿಟ್ಟರು.
ಸೋಷಿಯಲ್ ಮೀಡಿಯಾದಲ್ಲಿ ತಮ್ಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಸಮಂತಾ ಬಹಿರಂಗವಾಗಿ ಬರೆದುಕೊಂಡಾಗ ಇನ್ನಿತ್ತರ ಸ್ಟಾರ್ ನಟ-ನಟಿಯರು ಸಪೋರ್ಟ್‌ಗೆ ಬರುತ್ತಾರೆ. ರಶ್ಮಿಕಾ ಕೂಡ ಸಪೋರ್ಟ್ ಮಾಡಿದ್ದಾರೆ.
ಸಮಂತಾಳನ್ನು ನಾನು ಸ್ಯಾಮಿ ಎಂದು ಕರೆಯುವೆ. ವಂಡರ್‌ಪುಲ್ ಗರ್ಲ್, ದಿ ಲೇಡಿ ಅಂದ್ರೆ ಸಮಂತಾ. ತುಂಬಾ ಆಕರ್ಶಕವಾಗಿದ್ದಾಳೆ ತುಂಬಾ ಖುಷಿಯಾಗಿರುತ್ತಾರೆ ಸದಾ ನಗುತ್ತಿರುತ್ತಾರೆ. ಈ ರೀತಿ ವ್ಯಕ್ತಿ ನನ್ನ ಜೀವನದಲ್ಲಿ ಇದ್ದರೆ ಸದಾ ಕಾಪಾಡಿಕೊಳ್ಳುವ ಪ್ರಯತ್ನ ಮಾಡುವೆ ಎಂದು ಖಾಸಗಿ ಸಂದರ್ಶನದಲ್ಲಿ ಸಮಂತಾ ಮಾತನಾಡಿದ್ದಾರೆ.
ಸಮಂತಾ ವಿಚಾರಕ್ಕೆ ಬಂದ್ರೆ ನಾನು ಪೊಸೆಸಿವ್ ಅಮ್ಮ ಆಗಿರ್ತೀನಿ. ಆರೋಗ್ಯದಲ್ಲಿ ಏರು ಪೇರು ಇರುವ ವಿಚಾರವನ್ನು ಸಮಂತಾ ಘೋಷಣೆ ಮಾಡುವವರೆಗೂ ನನಗೆ ಗೊತ್ತಿರಲಿಲ್ಲ. ಬಹುಷ ಪ್ರಪಂಚಕ್ಕೆ ತಿಳಿಸಿ ಅವರು ಅದನ್ನು ಅರ್ಥ ಮಾಡಿಕೊಳ್ಳುವವರೆಗೂ ಮಾತನಾಡುವುದು ಬೇಡ ಎಂದು ಸಮಂತಾ ಸುಮ್ಮನಿದ್ದರು ಅನಿಸುತ್ತದೆ ಎಂದು ಸಮಂತಾ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆದ್ಮೇಲೆ ನಾನು ಮಾಹಿತಿ ಹುಡುಕಿ ತಿಳಿದುಕೊಳ್ಳಲು ಪ್ರಯತ್ನ ಪಟ್ಟೆ. ಆಕೆಗೆ ಒಳ್ಳೆಯದಾಗಬೇಕು ಅನ್ನೋದಷ್ಟೆ ನನ್ನ ಉದ್ದೇಶ. ತುಂಬಾ ವಿಚಾರಗಳಿಗೆ ಸಮಂತಾಳನ್ನು ಉದಾಹರಣೆಯಾಗಿ ನೋಡುವೆ ಏನೇ ಇದ್ದರೂ ಸಮಂತಾ ಆಯ್ಕೆ ಮಾಡಿಕೊಂಡು ನಡೆದ ದಾರಿಯನ್ನು ನೋಡುವೆ ಎಂದಿದ್ದಾರೆ ಸಮಂತಾ.
7 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಕಾಲಿಡುವ ಸಮಯದಲ್ಲಿ ಎಷ್ಟು ಪ್ರೀತಿ ಕೊಟ್ಟೆ ಅಷ್ಟೇ ಪ್ರೀತಿ ಈಗಲೂ ಕೊಡುವೆ. ಸಮಂತಾಳ ವಿಚಾರದಲ್ಲಿ ನಾನು ಪೊಸೆಸಿವ್ ಅಮ್ಮ ಆಗಲು ಇಷ್ಟ ಪಡುವೆ. ಎಲ್ಲರನ್ನು ಪ್ರೀತಿಸುತ್ತಾಳೆ ಕೇರ್ ಮಾಡುತ್ತಾಳೆ ಹೀಗಾಗಿ ಪ್ರತಿಯೊಬ್ಬರು ಆಕೆಗೆ ಪ್ರೀತಿ ಮಾತ್ರ ಕೊಡಬೇಕು.