ಔಷಧಿಯಲ್ಲೇ ನನ್ನ ಜೀವನ ಸಾಗಿದೆ; ವಿಚಿತ್ರ ಕಾಯಿಲೆ ಬಗ್ಗೆ ಸತ್ಯ ಬಿಚ್ಚಿಟ್ಟ ಮಹಿರಾ

Published : Apr 16, 2024, 12:21 PM IST

ಸೋಷಿಯಲ್ ಮೀಡಿಯಾ ಸ್ಟಾರ್ ಮಹಿರಾ ಖಾನ್ ಹಲವು ವರ್ಷಗಳಿಂದ ಎದರಿಸುತ್ತಿರುವ ವಿಚಿತ್ರ ಕಾಯಿಲೆ ಬಗ್ಗೆ ರಿವೀಲ್ ಮಾಡಿದ್ದಾರೆ. 

PREV
18
ಔಷಧಿಯಲ್ಲೇ ನನ್ನ ಜೀವನ ಸಾಗಿದೆ; ವಿಚಿತ್ರ ಕಾಯಿಲೆ ಬಗ್ಗೆ ಸತ್ಯ ಬಿಚ್ಚಿಟ್ಟ ಮಹಿರಾ

ಪಾಕಿಸ್ತಾನದ ಖ್ಯಾತ ನಟಿ ಮಹಿರಾ ಖಾನ್..  ತಮ್ಮ ನಟನೆಗೆ ಹೆಸರುವಾಸಿಯಾಗಿರುವ ಮಹಿರಾ ಖಾನ್ ರನ್ನು ಭಾರತೀಯರೂ ಇಷ್ಟಪಡ್ತಾರೆ.  ಪಾಕಿಸ್ತಾನ ಟಿವಿ ಶೋಗಳಲ್ಲಿ ತುಂಬಾ ಸಕ್ರಿಯರಾಗಿರುವ ನಟಿ ಮಹಿರಾ ಖಾನ್, ಸಾಮಾಜಿಕ ಜಾಲತಾಣಗಳಲ್ಲೂ ಆಕ್ಟಿವ್ ಆಗಿದ್ದಾರೆ.  

28

ಮಹಿರಾ ಖಾನ್ (Mahira Khan) ತಾವು ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದೇ ಮೊದಲ ಬಾರಿ ಅವರು ಅಭಿಮಾನಿಗಳ ಮುಂದೆ ತನ್ನ ಖಾಯಿಲೆ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

38

ಸುಮಾರು 6-7 ವರ್ಷಗಳಿಂದ ಬೈಪೋಲಾರ್ ಡಿಸಾರ್ಡರ್ ನಿಂದ ಬಳಲುತ್ತಿರುವ ಮಹಿರಾ ಇದಕ್ಕೆ ಔಷಧಿ (Medicine) ಗಳನ್ನು ತೆಗೆದುಕೊಳ್ಳುತ್ತಿದ್ದಾರೆ.   ಮಹಿರಾ ಉರಿ ದಾಳಿಯ ನಂತರ ಪಾಕಿಸ್ತಾನಿ ನಟರು ಭಾರತದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದಾಗ ನನಗೆ ಈ  ಅನಾರೋಗ್ಯ ಇರುವುದು ಗೊತ್ತಾಯ್ತು ಎಂದು ಮಹಿರಾ ಹೇಳಿದ್ದಾರೆ.

48

ಖಿನ್ನತೆ ಮತ್ತು ಆತಂಕದ ಔಷಧಿಯಲ್ಲೇ ನನ್ನ ಜೀವನ ಸಾಗಿದೆ. ಈವರೆಗೂ ನಾನು  ಈ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖಳಾಗಿಲ್ಲವೆಂದು ಎಂದು ಮಹಿರಾ ಹೇಳಿದ್ದರು.

58

ನಾನು ಚಿತ್ರದ ಶೂಟಿಂಗ್ ಮಾಡುತ್ತಿದ್ದೆ. ನಾವೆಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೆವು. ಉರಿ ದಾಳಿ ನಡೆದಾಗ ಎಲ್ಲವೂ ಚೆನ್ನಾಗಿಯೇ ಇತ್ತು. ದಾಳಿಯ ನಂತರ ರಾಜಕೀಯ ಮಟ್ಟದಲ್ಲಿ ಎಲ್ಲವೂ ಬದಲಾಯಿತು. ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ನಿಷೇಧಿಸಲಾಯಿತು. 

68

ನಾನು ಏನನ್ನಾದರೂ ಯೋಚಿಸುವ ಅಥವಾ ಅರ್ಥಮಾಡಿಕೊಳ್ಳುವ ಮೊದಲು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ದ್ವೇಷಿಸಲು ಶುರು ಮಾಡಿದ್ದರು. 

78

ಆ ಸಮಯದಲ್ಲಿ ತುಂಬಾ ಖಿನ್ನತೆ ನಾನು ಒಳಗಾಗಿದ್ದೆ.  ಜನರು ನನ್ನ ವಿರುದ್ಧ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದರು. ನನಗೆ ದೂರವಾಣಿ ಕರೆಗಳಲ್ಲಿ ಬೆದರಿಕೆಗಳು ಬರುತ್ತಿದ್ದವು. ನಾನು ಏನು ಮಾಡಬೇಕು ಮತ್ತು ನನ್ನ ವೃತ್ತಿಜೀವನಕ್ಕೆ ಏನಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. 

88

ಕಳೆದ ವರ್ಷ, ನನ್ನ ಸ್ಥಿತಿ ಕೆಟ್ಟದಾಗಿತ್ತು. ನಾನು ಹಾಸಿಗೆ ಹಿಡಿದಿದ್ದೆ. ಹಾಸಿಗೆಯಿಂದ ಏಳಲು ನನಗೆ ಸಾಧ್ಯವಾಗ್ತಿರಲಿಲ್ಲ. ಔಷಧಿ ತೆಗೆದುಕೊಂಡ ನಂತ್ರ ಸ್ವಲ್ಪ ಸುಧಾರಿಸಿಕೊಂಡಿದ್ದೇನೆ ಎಂದು ಮಹಿರಾ ಹೇಳಿದ್ದಾರೆ. 

Read more Photos on
click me!

Recommended Stories