ಅಂಬಾನಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್‌‌ ಜೊತೆ ಪೈಜಾಮ ಪಾರ್ಟಿ ಮಾಡಿದ ಜಾನ್ವಿ ಕಪೂರ್, ಇಶಾ ಅಂಬಾನಿ ಮತ್ತು ಬೆಸ್ಟೀಸ್..

First Published | Apr 15, 2024, 3:18 PM IST

ರಾಧಿಕಾ ಮರ್ಚೆಂಟ್ ಮತ್ತು ಅನಂತ್ ಅಂಬಾನಿ ವಿವಾಹ ಜುಲೈನಲ್ಲಾಗಲಿದೆ. ಇದೀಗ ಬಾಲಿವುಡ್ ನಟಿ ಜಾನ್ವಿ ಕಪೂರ್, ರಾಧಿಕಾ ಮರ್ಚೆಂಟ್‌ನ ಬ್ರೈಡಲ್ ಶವರ್ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಇತ್ತೀಚೆಗಷ್ಟೇ ಅಂಬಾನಿ ಕುಡಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಮಾರಂಭವು ತನ್ನ ಅದ್ಧೂರಿತನದಿಂದ ಇಡೀ ವಿಶ್ವವನ್ನೇ ತನ್ನೆಡೆ ತಿರುಗುವಂತೆ ಮಾಡಿತ್ತು.

ಇನ್ನು ಈ ಜೋಡಿಯ ವಿವಾಹ ಅದೆಷ್ಟು ಭರ್ಜರಿಯಗಿರುತ್ತೋ ಎಂದು ಎಲ್ಲ ಕಾಯುತ್ತಿರುವುದರ ನಡುವೆ ಜಾಲಿವುಡ್ ನಟಿ ಜಾನ್ವಿ ಕಪೂರ್ ಮನೆಯಲ್ಲಿ ರಾಧಿಕಾ ಮರ್ಚೆಂಟ್ಗೆ ವಿಶೇಷ ಸರ್ಪ್ರೈಸ್ ಬ್ರೈಡಲ್ ಶವರ್ ಪಾರ್ಟಿ ನೀಡಲಾಗಿದೆ.

Tap to resize

ಈ ಪಿಂಕ್ ಪೈಜಾಮಾ ಪಾರ್ಟಿಯ ಫೋಟೋಗಳನ್ನು ನಟಿ ಜಾನ್ವಿ ಹಂಚಿಕೊಂಡಿದ್ದು, 'ಪ್ರಿನ್ಸೆಸ್ ಡೈರೀಸ್ ರಾಯಲ್ ಸ್ಲಂಬರ್ ಪಾರ್ಟಿ 💕 ಅತ್ಯಂತ ವಿಶೇಷ ವಧು 👰‍♀️' ಎಂದು ಬಣ್ಣಿಸಿದ್ದಾರೆ. 

ಮೊದಲ ಚಿತ್ರವು ಗುಲಾಬಿ ಬಣ್ಣದ ಪೈಜಾಮಾ ಧರಿಸಿದ ಎಂಟು ಹುಡುಗಿಯರು ವಧು ರಾಧಿಕಾ ಸುತ್ತಲೂ ಕುಳಿತಿರುವುದನ್ನು ತೋರಿಸುತ್ತದೆ. ರಾಧಿಕಾ ಬಿಳಿ ಸ್ಯಾಟಿನ್ ನೈಟ್‌ವೇರ್‌ನಲ್ಲಿ ಸುಂದರವಾಗಿ ಕಾಣುತ್ತಾರೆ.

ಎರಡನೇ ಚಿತ್ರದಲ್ಲಿ, ಕಿರೀಟವನ್ನು ಧರಿಸಿರುವ ರಾಧಿಕಾ, ತನ್ನ ಬ್ರೈಡಲ್ ಶವರ್‌ಗಾಗಿ ತನ್ನ ಸ್ನೇಹಿತರು ಮಾಡಿದ ವ್ಯವಸ್ಥೆಗಳ ಬಗ್ಗೆ ಆಶ್ಚರ್ಯಪಡುವುದನ್ನು ಕಾಣಬಹುದು. 
 

ಮತ್ತೊಂದು ಸ್ಟಿಲ್‌ನಲ್ಲಿ, ವರನಾಗಿರುವ ಅನಂತ್ ಅಂಬಾನಿ ನೀಲಿ ಬಣ್ಣದ ಸ್ಯಾಟಿನ್ ನೈಟ್‌ವೇರ್ ಧರಿಸಿ ತನ್ನ ಹುಡುಗರ ಗ್ಯಾಂಗ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.

ಪಾರ್ಟಿಯಲ್ಲಿ ಹಲವಾರು ಗೇಮ್‌ಗಳನ್ನು ಆಯೋಜಿಸಿರುವುದನ್ನು, ಎಲ್ಲರೂ ಸಂಭ್ರಮಿಸುತ್ತಿರುವುದನ್ನು ಫೋಟೋಗಳಲ್ಲಿ ಕಾಣಬಹುದಾಗಿದೆ. 

ಈ ಪಾರ್ಟಿಯು ಈ ಹಿಂದೆ ಅನಂತ್- ರಾಧಿಕಾಗಾಗಿ ನಡೆದ ಅದ್ದೂರಿ ಆಚರಣೆಗಳಿಗೆ ವ್ಯತಿರಿಕ್ತವಾಗಿ ಹೆಚ್ಚು ವೈಯಕ್ತಿಕ ಕೂಟವಾಗಿತ್ತು. ಅದ್ಧೂರಿ ಮಿಣಿಮಿಣಿಗಳ ಹೊರತಾಗಿ ಎಲ್ಲರೂ ಮನೆಯ ಉಡುಗೆಯಾದ ಪೈಜಾಮಾದಲ್ಲಿ ಪಾರ್ಟಿ ಮಾಡಿದ್ದು ವಿಶೇಷವಾಗಿದೆ.

ರಾಧಿಕಾ ಮರ್ಚೆಂಟ್ ಮತ್ತು ಅವರ ಸ್ನೇಹಿತರು, ಅನಂತ್ ಮತ್ತು ಗೆಳೆಯರು ಸಾಕಷ್ಟು ಮಜವಾಗಿ ಕ್ಷಣಗಳನ್ನು ಕಳೆದಿರುವುದನ್ನು ಫೋಟೋಗಳು ಸೆರೆ ಹಿಡಿದಿವೆ. 

ರಾಧಿಕಾ ತನ್ನ ಸಾಮಾಜಿಕ ಮಾಧ್ಯಮವನ್ನು ಖಾಸಗಿಯಾಗಿ ಇಟ್ಟುಕೊಂಡಿದ್ದರೂ, ಜಾನ್ವಿ ಹಂಚಿಕೊಂಡ ಫೋಟೋಗಳನ್ನು ನೋಡಿ ಅಭಿಮಾನಿಗಳು ಸಂತೋಷಪಟ್ಟಿದ್ದಾರೆ. ಈ ಪಾರ್ಟಿಯಲ್ಲಿ ಜಾನ್ವಿಯ ಹೊರತಾಗಿ ಇಶಾ ಅಂಬಾನಿ, ಶ್ಲೋಕಾ ಅಂಬಾನಿ, ರಾಧಿಕಾರ ಸಹೋದರಿಯನ್ನೂ ಕಾಣಬಹುದು. 

ಇನ್ನು ಹುಡುಗರ ಗುಂಪಿನಲ್ಲಿ ಪ್ರಮುಖವಾಗಿ ಅನಂತ್ ಅಂಬಾನಿ ಹೊರತಾಗಿ, ಜಾನ್ವಿಯ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಇದ್ದಾರೆ. ಅಂಬಾನಿ ಕುಟುಂಬವು ಇತ್ತೀಚೆಗೆ ವಿವಿಧ ಬಾಲಿವುಡ್ ಸೆಲೆಬ್ರಿಟಿಗಳೊಂದಿಗೆ ಹೆಚ್ಚು ಬೆರೆಯುತ್ತಿರುವುದನ್ನು ಗಮನಿಸಬಹುದು. 

Latest Videos

click me!