ನಾಪತ್ತೆಯಾಗಿದ್ದ ಬಿಗ್ ಬಾಸ್ ಸ್ಪರ್ಧಿ ಫೋಟೋಶೂಟ್ ಮೂಲಕ ಪ್ರತ್ಯಕ್ಷ, ಈ ಬಾರಿ ಕೂಲ್ ಕೂಲ್
ಬಿಗ್ ಬಾಸ್ ಬಳಿಕ ಕೆಲ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಸ್ಪರ್ಧಿ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ವಿವಾದ ಇಲ್ಲ, ಗ್ಲಾಮರಸ್ ಫೋಟೋ ಶೂಟ್ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಬಳಿಕ ಕೆಲ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಸ್ಪರ್ಧಿ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ವಿವಾದ ಇಲ್ಲ, ಗ್ಲಾಮರಸ್ ಫೋಟೋ ಶೂಟ್ ಮೂಲಕ ಮತ್ತೆ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 4 ರಲ್ಲಿ ಕಾಣಿಸಿಕೊಂಡಿದ್ದ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಅವರು ಮಾಡಿಸಿರುವ ಗ್ಲಾಮರಸ್ ಫೋಟೋಶೂಟ್‌ನ ಚಿತ್ರಗಳು ವೈರಲ್ ಆಗುತ್ತಿವೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಎಲ್ಲೂ ಸುದ್ದಿಯಲ್ಲಿರದ ವೀಣಾ ಮಲಿಕ್ ಇದೀಗ ಫೋಟೋ ಶೂಟ್ ಮೂಲಕ ಪ್ರತ್ಯಕ್ಷರಾಗಿದ್ದಾರೆ.
ವೀಣಾ ಮಲ್ಲಿಕ್ ತಮ್ಮ ಹೊಸ ಫೋಟೋಶೂಟ್‌ನ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ವೀಣಾ ತಮ್ಮ ಆಕರ್ಷಕ ಲುಕ್‌ನಿಂದ ಆಕರ್ಷಿಸುತ್ತಿದ್ದಾರೆ. ಈ ಬಾರಿ ಯಾವುದೇ ವಿವಾದಗಳು ಸದ್ಯಕ್ಕಿಲ್ಲ. ಆದರೆ ಈ ಫೋಟೋಶೂಟ್ ಇನ್ಯಾವ ವಿವಾದ ಸೃಷ್ಟಿಸಲಿದೆ ಅನ್ನೋದು ಈಗಲೇ ಹೇಳವಂತಿಲ್ಲ.
ಹೊಸ ಫೋಟೋಶೂಟ್‌ನಲ್ಲಿ ವೀಣಾ ಮಲ್ಲಿಕ್ ಆಫ್ ಶೋಲ್ಡರ್ ಬಿಳಿ ಉಡುಪನ್ನು ಧರಿಸಿದ್ದಾರೆ. ಜೊತೆಗೆ ಗುಲಾಬಿ-ಬಿಳಿ ಲೆಹರಿಯಾ ದುಪಟ್ಟಾವನ್ನು ಸ್ಟೈಲ್ ಮಾಡಿದ್ದಾರೆ. ಮೇಕಪ್ ಮತ್ತು ರೌಂಡ್ ಕಿವಿಯೋಲೆಗಳಲ್ಲಿ ವೀಣಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ.
ವೀಣಾ ಮಲ್ಲಿಕ್ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಅವರನ್ನು ಬೇಬಿ ಡಾಲ್ ಎಂದು ಕರೆಯುತ್ತಿದ್ದಾರೆ. ಒಬ್ಬರು ಬರೆದಿದ್ದಾರೆ - ಸುಂದರ ಲುಕ್. ಇನ್ನೊಬ್ಬರು ಹೇಳಿದ್ದಾರೆ - ವೀಣಾ ನಿಮ್ಮ ವಯಸ್ಸು ಕೇವಲ ಒಂದು ಸಂಖ್ಯೆ. ಒಬ್ಬರು ಫ್ಯಾಷನ್ ದಿವಾ ಎಂದರೆ, ಇನ್ನೊಬ್ಬರು ಕ್ಲಾಸಿ ಬ್ಯೂಟಿ ಎಂದು ಬರೆದಿದ್ದಾರೆ. ಹೀಗೆ ಇನ್ನೂ ಅನೇಕರು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ವೀಣಾ ಮಲ್ಲಿಕ್ ಪಾಕಿಸ್ತಾನಿ ನಟಿ. 2010 ರಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಕಾರ್ಯಕ್ರಮ ಬಿಗ್ ಬಾಸ್ 4 ರಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವೀಣಾ ಸಖತ್ ಸದ್ದು ಮಾಡಿದ್ದರು. ಬಿಗ್ ಬಾಸ್ ಒಳಗೆ ಹಾಗೂ ಹೊರಗೆ ವೀಣಾ ಮಲಿಕ್ ವಿವಾದಗಳಿಂದಲೇ ಸದ್ದು ಮಾಡಿದ್ದರು. ಬಳಿಕ ಈಕೆಯ ನಡೆ,ಹೇಳಿಕೆಗಳು ಭಾರಿ ವಿವಾದ ಸೃಷ್ಟಿಸಿತ್ತು.
ವೀಣಾ ಮಲ್ಲಿಕ್ 2000 ದಲ್ಲಿ ಪಾಕಿಸ್ತಾನಿ ಚಿತ್ರ ತೇರೆ ಪ್ಯಾರ್ ಮೇಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಯೇ ದಿಲ್ ಆಪ್ಕಾ ಹುವಾ, ಕೋಯಿ ತುಝ್ ಸಾ ಕಹಾಂ, ನಾಗ್ ಔರ್ ನಾಗಿನ್, ಮೊಹಬ್ಬತ್ ಸಂಚಿಯಾ, ಕಭಿ ಪ್ಯಾರ್ ನ ಕರ್ನಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
48 ವರ್ಷದ ವೀಣಾ ಮಲ್ಲಿಕ್ 2013 ರಲ್ಲಿ ದುಬೈನಲ್ಲಿ ಉದ್ಯಮಿಯೊಬ್ಬರನ್ನು ವಿವಾಹವಾದರು. ಮದುವೆಯ ನಂತರ ಅವರಿಗೆ ಇಬ್ಬರು ಮಕ್ಕಳಾದರು. 2018 ರಲ್ಲಿ ಅವರ ಪತಿಯಿಂದ ವಿಚ್ಛೇದನ ಪಡೆದರು.