ಮುಸಾಫಿರ್ ಕೆಫೆ (Musafir Cafe)
ರಿಲೀಸ್ ದಿನಾಂಕ: ಜುಲೈ 24
ಎಲ್ಲಿ ನೋಡಬಹುದು: Netflix
ವಿಕ್ರಾಂತ್ ಮಾಸ್ಸೆ, ಪಿಂಟೋ ಮತ್ತು ಮಹಿಮಾ ಮಕ್ವಾನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಹಿಂದಿ ವೆಬ್ ಸೀರಿಸ್, ದಿವ್ಯ ಪ್ರಕಾಶ್ ದುಬೆ ಅವರ ಬೆಸ್ಟ್ ಸೆಲ್ಲರ್ ಕಾದಂಬರಿ ಆಧಾರಿತವಾಗಿದೆ. ಸಾಫ್ಟ್‌ವೇರ್ ಇಂಜಿನಿಯರ್ ಚಂದರ್ ಜೀವನದಲ್ಲಿ ಸುಧಾ ಮತ್ತು ಪ್ರೀತಿ ಎಂಬ ಇಬ್ಬರು ಮಹಿಳೆಯರು ಬಂದಾಗ ಏನಾಗುತ್ತದೆ ಎನ್ನುವುದೇ ಕಥೆ.
ರಾನ್ಸಮ್ ಕ್ಯಾನಿಯನ್ ಸೀಸನ್ 2 (Ransom Canyon Season 2)
ರಿಲೀಸ್ ದಿನಾಂಕ: ಜುಲೈ 23
ಎಲ್ಲಿ ನೋಡಬಹುದು: Netflix
ಟೆಕ್ಸಾಸ್‌ನ ಮೂರು ರಾಂಚ್ ಕುಟುಂಬಗಳ ರಾಜಕೀಯ, ತಲೆಮಾರುಗಳ ನಡುವಿನ ಸಂಬಂಧ ಮತ್ತು ಸಂಕೀರ್ಣ ಕೌಟುಂಬಿಕ ಕಥೆಗಳೊಂದಿಗೆ ಈ ಡ್ರಾಮಾ ಸಾಗುತ್ತದೆ. ಎರಡನೇ ಸೀಸನ್‌ನಲ್ಲಿ ಇನ್ನಷ್ಟು ಕುತೂಹಲಕಾರಿ ತಿರುವುಗಳು ಇರಲಿವೆ.
72 ಅವರ್ಸ್ (72 Hours)
ರಿಲೀಸ್ ದಿನಾಂಕ: ಜುಲೈ 24
ಎಲ್ಲಿ ನೋಡಬಹುದು: Netflix
ಕೆವಿನ್ ಹಾರ್ಟ್ ನಟನೆಯ ಈ ಕಾಮಿಡಿ ಚಿತ್ರದಲ್ಲಿ, 40 ವರ್ಷದ ಅಧಿಕಾರಿಯೊಬ್ಬ ತನ್ನ ಕೆರಿಯರ್ ಉಳಿಸಿಕೊಳ್ಳಲು ಯುವಕರೊಂದಿಗೆ ಮೂರು ದಿನಗಳ ಬ್ಯಾಚುಲರ್ ಪಾರ್ಟಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ದಿ ಡೆಟ್ ಕಲೆಕ್ಟರ್ (The Debt Collector)
ರಿಲೀಸ್ ದಿನಾಂಕ: ಜುಲೈ 23
ಎಲ್ಲಿ ನೋಡಬಹುದು: Netflix
ಇದು ಥಾಯ್ ಆ್ಯಕ್ಷನ್ ಥ್ರಿಲ್ಲರ್. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಾಲ ವಸೂಲಿಗಾರ, ಹಿಂಸಾತ್ಮಕ ಸಾಲದ ಗ್ಯಾಂಗ್ ಮೇಲೆ ಸೇಡು ತೀರಿಸಿಕೊಳ್ಳಲು ಮತ್ತೆ ಕ್ರೈಂ ಜಗತ್ತಿಗೆ ಕಾಲಿಡುತ್ತಾನೆ.
ಎಲೈಟ್ ಫೋರ್ಸ್ (Elite Force)
ರಿಲೀಸ್ ದಿನಾಂಕ: ಜುಲೈ 22
ಎಲ್ಲಿ ನೋಡಬಹುದು: Netflix
ಇದು ಫ್ರೆಂಚ್ ಆ್ಯಕ್ಷನ್ ಸೀರಿಸ್. ತನ್ನ ಯೂನಿಟ್ ಮೇಲೆ ನಡೆದ ದೊಡ್ಡ ದಾಳಿಯ ನಂತರ, ಒಬ್ಬ ಉನ್ನತ ಅಧಿಕಾರಿಯು ಅಪಾಯಕಾರಿ ಮಿಷನ್‌ನ ನೇತೃತ್ವ ವಹಿಸಿ ತನ್ನ ಗತಕಾಲವನ್ನು ಎದುರಿಸಬೇಕಾಗುತ್ತದೆ.
ಎ ಟಾಕ್ಸಿಕ್ ಲವ್ ಸ್ಟೋರಿ (A Toxic Love Story)
ರಿಲೀಸ್ ದಿನಾಂಕ: ಜುಲೈ 22
ಎಲ್ಲಿ ನೋಡಬಹುದು: Netflix
ನಿಜ ಜೀವನದ 'ಅನಾಹೈಮ್ ಕ್ರೇಗ್‌ಲಿಸ್ಟ್' ಪ್ರಕರಣ ಆಧಾರಿತ ಈ ಟ್ರೂ-ಕ್ರೈಮ್ ಡಾಕ್ಯುಮೆಂಟರಿ ಸೀರಿಸ್, ಹೊಸದಾಗಿ ಮದುವೆಯಾದ ಯುಎಸ್ ಮಾರ್ಷಲ್ ದಂಪತಿ ಸ್ಟಾಕಿಂಗ್ ಕೇಸ್‌ನಲ್ಲಿ ಹೇಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ.