ದೇಶಾದ್ಯಂತ ಅಬ್ಬರಿಸಿದ ಈ ಭಾರತೀಯ ಸಿನಿಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ, ಸಂಭ್ರಮ ಡಬಲ್

Published : Jan 05, 2026, 06:32 PM IST

ದೇಶಾದ್ಯಂತ ಅಬ್ಬರಿಸಿದ ಈ ಭಾರತೀಯ ಸಿನಿಮಾ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ, ಸಂಭ್ರಮ ಡಬಲ್ ಆಗಿದೆ. 2000 ಸಿನಿಮಾ ಅರ್ಜಿಗಳ ಪೈಕಿ ಗರಿಷ್ಠ 250 ಸಿನಿಮಾ ಪ್ರಶಸ್ತಿ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಭಾರತದ ಸಿನಿಮಾ ಕೂಡ ಸೇರಿಕೊಂಡಿದೆ. 

PREV
15
ಆಸ್ಕರ್ ಸ್ಪರ್ಧಾ ಪಟ್ಟಿಯಲ್ಲಿ ಭಾರತದ ಸಿನಿಮಾ

2025ರ ಸಾಲಿನಲ್ಲಿ ಭಾರತದಲ್ಲಿ ಹಲವು ಸಿನಿಮಾಗಳು ಸೂಪರ್ ಹಿಟ್, ಬ್ಲಾಕ್‌ಬಸ್ಟರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಪೈಕಿ ಕಾಂತಾರಾ ಚಾಪ್ಟರ್ 1, ದುರಂಧರ್,ಛಾವಾ, ಸೈಯಾರಾ ಸೇರಿದಂತೆ ಹಲವು ಸಿನಿಮಾಗಳು ಜನರ ಮೆಚ್ಚುಗೆ ಮಾತ್ರವಲ್ಲ, ಕಲೆಕ್ಷನ್‌ನಲ್ಲೂ ದಾಖಲೆ ಬರೆದಿದೆ. ಇದೀಗ 2026ರ ಆಸ್ಕರ್ ಪ್ರಸಸ್ತಿಯ ಸ್ಪರ್ಧಾ ಪಟ್ಟಿಯಲ್ಲಿ ಭಾರತದ ಸಿನಿಮಾ ಕಾಣಿಸಿಕೊಂಡಿರುವುದು ಭಾರಿ ಸದ್ದುಮಾಡುತ್ತಿದೆ.

25
ದಶಾವತಾರ್ ಹೊಸ ಕಿರೀಟ

ಹಲವು ಸಿನಿಮಾಗಳು ಬಾಕ್ಸ್ ಅಫೀಸ್‌ನಲ್ಲಿ ಧೂಳೆಬ್ಬಿಸಿದೆ. ಇದೀಗ ಆಸ್ಕರ್ ಪ್ರಶಸ್ತಿಯ ಸ್ಪರ್ಧಾ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಮರಾಠಿಯ ದಶಾವತಾರ್. 2026ರ ಆಸ್ಕರ್ ಪಟ್ಟಿಯಲ್ಲಿ ದಶಾವತಾರ್ ಕಾಣಿಸಿಕೊಂಡಿದೆ ಅನ್ನೋ ಸಂತಸವನ್ನು ಚಿತ್ರ ತಂಡ ಹಂಚಿಕೊಂಡಿದೆ.

35
2000 ಸಿನಿಮಾಗಳ ಸಲ್ಲಿಸಿತ್ತು ಅರ್ಜಿ

ಆಸ್ಕರ್ ಪ್ರಶಸ್ತಿಗೆ ಬರೋಬ್ಬರಿ 2,000 ಸಿನಿಮಾಗಳು ಅರ್ಜಿ ಸಲ್ಲಿಸಿತ್ತು. ಇದರಲ್ಲಿ 150 ರಿಂದ 250 ಸಿನಿಮಾಗಳು ಮಾತ್ರ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಆಯ್ಕೆಯಾಗಲಿದೆ. ಹೀಗೆ ಆಯ್ಕೆಯಾದ ಪಟ್ಟಿಯಲ್ಲಿ ಮರಾಠಿ ಸಿನಿಮಾ ದಶವತಾರ್ ಕೂಡ ಒಂದು. ಈ ಸ್ಪರ್ಧಾ ಪಟ್ಟಿಯಲ್ಲಿ ವಿವಿದ ಮಾನದಡಂಗಳ ಅನುಸಾರ ಆಯ್ಕೆ ನಡೆಯಲಿದೆ.

45
ಆಸ್ಕರ್ ರೇಸ್‌ನಲ್ಲಿ ಮೊದಲ ಮರಾಠಿ ಸಿನಿಮಾ

ಮರಾಠಿ ಸಿನಿಮಾಗೆ ಸಿಕ್ಕ ವಿಸೇಷ ಗೌರವ ಇದಾಗಿದೆ. ಇದೇ ಮೊದಲ ಬಾರಿಗೆ ಮರಾಠಿ ಸಿನಿಮಾ ಒಂದು ಆಸ್ಕರ್ ಸ್ಪರ್ಧಾ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಮರಾಠಿ ಸಿನಿಮಾ ಲೋಕ, ಅಭಿಮಾನಿಗಳು ಈ ಸಾಧನೆಯನ್ನು ಕೊಂಡಾಡಿದ್ದಾರೆ. ಭಾರತೀಯ ನೆಲದ, ವಿಷ್ಣು ಅವತಾರ ಕತೆಗೆ ವಿಶ್ವ ಮನ್ನಣೆ ಸಿಕ್ಕಿದೆ.

ಆಸ್ಕರ್ ರೇಸ್‌ನಲ್ಲಿ ಮೊದಲ ಮರಾಠಿ ಸಿನಿಮಾ

55
ಸುಬೋಧ್ ಕಾನೋಲ್ಕರ್ ನಿರ್ದೇಶನದ ಸಿನಿಮಾ

ದಶವತಾರ್ ಮರಾಠಿ ಸಿನಿಮಾ. ಸುಬೋದ್ ಕಾನೋಲ್ಕರ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಒಶಿಯನ್ ಫಿಲ್ಮ್ ಕಂಪನಿ ಈ ಸಿನಿಮಾ ನಿರ್ಮಾಣ ಮಾಡಿದೆ. ಪರಿಶ್ರಮ, ಶ್ರದ್ಧೆ, ಎಲ್ಲಾ ಕಲಾವಿಧರು ಪ್ರಯತ್ನ, ಅಭಿಮಾನಿಗಳ ಪೋತ್ಸಾಹಕ್ಕೆ ಸಿಕ್ಕಿದ ಗೌರವ ಇದು ಎಂದು ಸಿನಿಮಾ ತಂಡ ಹೇಳಿದೆ.

ಸುಬೋಧ್ ಕಾನೋಲ್ಕರ್ ನಿರ್ದೇಶನದ ಸಿನಿಮಾ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories