ಇದರಲ್ಲಿ ಸಮಂತಾ ಟಾಪ್ 1 ರಲ್ಲಿ ಇರೋದು ವಿಶೇಷ. ಆಕೆಗೆ ಎರಡು ವರ್ಷಗಳಿಂದ ಸಿನಿಮಾಗಳಿಲ್ಲ. ಕೊನೆಯದಾಗಿ 'ಖುಷಿ' ಸಿನಿಮಾದಲ್ಲಿ ಮಿಂಚಿದ್ದರು. ಆ ನಂತರ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಇತ್ತೀಚೆಗೆ ಆಕೆ 'ಸಿಟಾಡೆಲ್' ಮೂಲಕ ಓಟಿಟಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೂ, ತನ್ನ ವೈಯಕ್ತಿಕ ಜೀವನದ ವಿಷಯದಲ್ಲಿ ಸಾಕಷ್ಟು ವೈರಲ್ ಆಗಿದ್ದಾರೆ. ನಾಗಚೈತನ್ಯ 2ನೇ ಮದುವೆ ಆಗೋದು, ಈ ಸಂದರ್ಭದಲ್ಲಿ ಸಮಂತಾ ಬಗ್ಗೆ ಚರ್ಚೆ ನಡೆಯಿತು. ಅದಕ್ಕಾಗಿಯೇ ಈಕೆ ಭಾರತದ ಅತ್ಯಂತ ಜನಪ್ರಿಯ ನಟಿಯಾಗಿ ಮೊದಲ ಸ್ಥಾನಕ್ಕೆ ಬಂದಿದ್ದಾರೆ.