ಭಾರತದ ಧುರಂಧರ್ ಸಿನಿಮಾ ಪಾಕಿಸ್ತಾನವನ್ನು ನೆಗಟೀವ್ ರೀತಿಯಲ್ಲಿ ತೋರಿಸಿದೆ. ಉಗ್ರರರೆಂದು ಬಿಂಬಿಸಿದೆ ಎಂದು ಪ್ರತಿಯಾಗಿ ಮೆರಾ ಲ್ಯಾರಿ ಎಂಬ ಸಿನಿಮಾ ರಿಲೀಸ್ ಮಾಡಿತ್ತು. ಇದರ ಪಯಣ ಈಗ ಬಾರಿ ಟ್ರೋಲ್ ಆಗಿದೆ.
ಭಾರತದ ಧುರಂಧರ್ 3000 ಕೋಟಿ ರೂ ಗಳಿಕೆ, ಪಾಕಿಸ್ತಾನದ ಕತೆ ಏನು?
ಆದಿತ್ಯ ಧಾರ್ ನಿರ್ದೇಶನದ ಧುರಂಧರ್ ಸಿನಿಮಾದ ಎರಡೂ ಭಾಗ ಸೂಪರ್ ಹಿಟ್ ಆಗಿ 3000 ಕೋಟಿ ರೂ ಗಳಿಸಿದೆ. ಭಾರತ ಸೇರಿದಂತೆ ಎಲ್ಲೆಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಪಾಕಿಸ್ತಾನದಲ್ಲಿ ಸಿನಿಮಾ ಬ್ಯಾನ್ ಆಗಿದ್ದರೂ ಪೈರಸಿ ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಜನ ನೋಡಿದ್ದರು. ಇಷ್ಟೇ ಅಲ್ಲ ಮೆಚ್ಚಿಕೊಂಡಿದ್ದರು. ಈ ಸಿನಿಮಾದಲ್ಲಿ ಪಾಕಿಸ್ತಾನದ ನರಿ ಬುದ್ದಿ, ಭಯೋತ್ಪಾದಕತೆ, ಭಾರತದ ಮೇಲಿನ ದಾಳಿ ಕುರಿತು ಸ್ಪಷ್ಟವಾಗಿ ತೋರಿಸಲಾಗಿದೆ. ಹೀಗಾಗಿ ಈ ಸಿನಿಮಾಗೆ ಪ್ರತಿಯಾಗಿ ಪಾಕಿಸ್ತಾನದಲ್ಲಿ ಮೆರಾ ಲ್ಯಾರಿ ಸಿನಿಮಾ ರೀಲಿಸ್ ಆಗಿತ್ತು. ಇದರ ಕತೆ ಇಲ್ಲಿದೆ.
25
ಮೆರಾ ಲ್ಯಾರಿ ಸಿನಿಮಾ ಕತೆ
ರಣವೀರ್ ಸಿಂಗ್ ಧುರಂಧರ್ ಸಿನಿಮಾದಲ್ಲಿ ಕರಾಚಿ ಭಯೋತ್ಪಾದಕ ಚಟುವಟಿಕೆ, ಭಾರತದ ಮೇಲಿನ ದಾಳಿಗೆ ತಯಾರಿ ಸೇರಿದಂತೆ ಎಲ್ಲವನ್ನು ಹೇಳಲಾಗಿತ್ತು. ಆದರೆ ಮೆರಾ ಲ್ಯಾರಿ ಸಿನಿಮಾ ಧುರಂಧರ್ ರೀತಿಯ ಕಥಾವಸ್ತು. ಆಧರೆ ಪಾಕಿಸ್ತಾನವನ್ನು ಉತ್ತಮ ದೇಶ, ಇಲ್ಲಿನ ಎಲ್ಲರು ಉತ್ತಮರು. ಯಾರೂ ಭಯೋತ್ಪಾದಕರಿಲ್ಲ ಅನ್ನೋ ಬಿಂಬಿಸುವ ಸಿನಿಮಾ ಇದಾಗಿತ್ತು. ಆದರೆ ಈ ಸಿನಿಮಾ ಅಟ್ಟರ್ ಪ್ಲಾಪ್ ಆಗಿದೆ.
35
ಕೇವಲ 22 ಟಿಕೆಟ್ ಮಾತ್ರ ಸೇಲ್
ಪಾಕಿಸ್ತಾನದ ಧುರಂಧರ್ ಸಿನಿಮಾ ಮೆರಾ ಲ್ಯಾರಿ ಒಂದೇ ವಾರದಲ್ಲಿ ಪಾಕಿಸ್ತಾನದ ಥಿಯೇಟರ್‌ಗಳಿಂದ ಮಾಯವಾಗಿತ್ತು. ಪಾಕಿಸ್ತಾನದ ಸಿನಿಮಾ ಆಸಕ್ತರು ಈ ಸಿನಿಮಾ ನೋಡಲು ಇಷ್ಟಪಡಲಿಲ್ಲ. ನೋಡಿದ ಕೆಲವೇ ಕೆಲವು ಮಂದಿ ಅತೀ ಕೆಟ್ಟ ಸಿನಿಮಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೇವಲ 22 ಟಿಕೆಟ್ ಮಾತ್ರ ಸೇಲ್ ಆಗಿದೆ.
ಈ ಸಿನಿಮಾ ಪಾಕಿಸ್ತಾನದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಇದರ ಬಜೆಟ್ ಎಷ್ಟು ಅನ್ನೋದು ಬಹಿರಂಗಪಡಿಸಿಲ್ಲ. ಇತ್ತ ಈ ಸಿನಿಮಾ ಗಳಿಸಿದ್ದು ಏನೂ ಇಲ್ಲ ಎಂದು ಹೇಳಲಾಗುತ್ತಿದೆ. ಕೇವಲ 22 ಟಿಕೆಟ್ ಸೋಲ್ಡ್ ಆಗಿದೆ. ಇತ್ತ ಥಿಯೇಟರ್ ಹೋಗಿ ನೋಡಿದವರಿಲ್ಲ. ಇನ್ನು ಉಚಿತವಾಗಿ ಪೈರಸಿ ಡೌನ್ಲೋಡ್ ಇದ್ದರೂ ಯಾರೂ ಡೌನ್ಲೋಡ್ ಮಾಡಿಲ್ಲ.
55
ಚಿತ್ರತಂಡ ಹೇಳುತ್ತಿರುವುದೇನು
ಪಾಕಿಸ್ತಾನದ ಹಲವು ಮಾಧ್ಯಮಗಳು ಮೇರಾ ಲ್ಯಾರಿ ಸಿನಿಮಾ ಫ್ಲಾಪ್ ಕುರಿತು ವರದಿ ನೀಡಿದೆ. ಆಧರೆ ಚಿತ್ರತಂಡ ಈ ವರದಿ ನಿರಾಕರಿಸದೆ. ಪಾಕಿಸ್ತಾನದ ಪ್ರಮುಖ ಥಿಯೇಟರ್‌ಗಳಲ್ಲಿ ಈಗಲೂ ಈ ಸಿನಿಮಾ ಇದೆ. ಸಿನಿಮಾ ಆಸಕ್ತರು ತೆರಳಿ ಸನಿಮಾ ವೀಕ್ಷಿಸಿ ಬೆಂಬಲ ನೀಡಿ ಎಂದು ಮನವಿ ಮಾಡಿದೆ.
ಚಿತ್ರತಂಡ ಹೇಳುತ್ತಿರುವುದೇನು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.