ಎನ್ ಟಿ ರಾಮರಾವ್ ಎರಡನೇ ಮದುವೆ ಆಗಬೇಕೆಂದಿದ್ದ ಹೀರೋಯಿನ್ ಯಾರು ಗೊತ್ತಾ?
ಎನ್ ಟಿ ರಾಮರಾವ್ ಸಿನಿಮಾಗೆ ಬರೋಕು ಮುಂಚೆಯೇ ಮದುವೆ ಆಗಿದ್ರು. ತಮ್ಮ ಚಿಕ್ಕಮ್ಮನ ಮಗಳು ಬಸವತಾರಕಂ ಅವರನ್ನ 1943ರಲ್ಲಿ ಮದುವೆಯಾಗಿದ್ದರು.
ಎನ್ ಟಿ ರಾಮರಾವ್ ಸಿನಿಮಾಗೆ ಬರೋಕು ಮುಂಚೆಯೇ ಮದುವೆ ಆಗಿದ್ರು. ತಮ್ಮ ಚಿಕ್ಕಮ್ಮನ ಮಗಳು ಬಸವತಾರಕಂ ಅವರನ್ನ 1943ರಲ್ಲಿ ಮದುವೆಯಾಗಿದ್ದರು.
1949ರಲ್ಲಿ `ಮನದೇಶಂ` ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಅದಕ್ಕೂ ಮುಂಚೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಸಿನಿಮಾದಲ್ಲಿ ಸಕ್ಸಸ್ ಆದ ಮೇಲೆ ಹಿಂದಿರುಗಿ ನೋಡುವ ಅವಶ್ಯಕತೆ ಬರಲಿಲ್ಲ. ಆದರೆ ಆವಾಗ ಅವರ ಹೆಂಡತಿ ಬಸವತಾರಕಂ ಹೈದರಾಬಾದ್‌ನಲ್ಲಿ ಇದ್ರು, ಇವರು ಮದ್ರಾಸ್ (ಚೆನ್ನೈ)ನಲ್ಲಿ ಸಿನಿಮಾ ಮಾಡ್ತಿದ್ರು. ಭೇಟಿಯಾಗೋದು ತುಂಬಾನೇ ಕಷ್ಟ.
ಅಪರೂಪಕ್ಕೆ ಎನ್ ಟಿ ರಾಮರಾವ್ ಹೋಗಿ ಬರ್ತಿದ್ರು, ಕೆಲವು ದಿನಗಳ ನಂತರ ಅವರನ್ನ ಮದ್ರಾಸ್‌ಗೆ ಕರೆದುಕೊಂಡು ಹೋದ್ರು. ಆದರೆ ಆವಾಗ ಕುಟುಂಬ ನಿಯಂತ್ರಣದ ಬಗ್ಗೆ ಗೊತ್ತಿರಲಿಲ್ಲ, ಹಾಗಾಗಿ ಸಾಲು ಸಾಲಾಗಿ ಮಕ್ಕಳು ಹುಟ್ಟಿದ್ರು. ಎನ್ ಟಿ ಆರ್, ಬಸವತಾರಕಂಗೆ 12 ಜನ ಮಕ್ಕಳು. ಈ ಲೆಕ್ಕದಲ್ಲಿ ಅವರು ವರ್ಷಗಳ ಕಾಲ ಮಕ್ಕಳನ್ನ ಹೆರುತ್ತಲೇ ಇದ್ರು. ಯಾವಾಗಲೂ ಪ್ರೆಗ್ನೆಂಟ್, ಡೆಲಿವರಿ ಅನ್ನೋ ಹಾಗೆ ಇತ್ತು. ಎನ್ ಟಿ ಆರ್ ಸಿನಿಮಾಗಳಲ್ಲಿ ಬ್ಯುಸಿ ಇದ್ರು. ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡ್ತಿದ್ರು. ಮನೆಯಲ್ಲಿ ರಿಲೀಫ್ ಇರಲಿಲ್ಲ. ಹೆಂಡತಿ ಹೈದರಾಬಾದ್‌ನಲ್ಲಿ ಇದ್ರು. ಇದರಿಂದ ರಾಮರಾವ್ ಒಂಟಿತನ ಅನುಭವಿಸಿದ್ರಂತೆ.
ಆ ಸಮಯದಲ್ಲಿ ಹೀರೋಯಿನ್ ಕೃಷ್ಣಕುಮಾರಿಯವರ ಜೊತೆ ರಾಮರಾವ್ ಜಾಸ್ತಿ ಸಿನಿಮಾ ಮಾಡಿದ್ರು. ಇಬ್ಬರ ಮಧ್ಯೆ ಒಳ್ಳೆ ಕೆಮಿಸ್ಟ್ರಿ ಇತ್ತು. ಬೇರೆ ದೊಡ್ಡ ಹೀರೋಯಿನ್ ಗಳು ಕೈ ಕೊಟ್ಟಿದ್ದಕ್ಕೆ ಕೃಷ್ಣಕುಮಾರಿನೇ ರಿಪೀಟ್ ಮಾಡಿದ್ರು. ಅದು ಇಬ್ಬರ ಮಧ್ಯೆ ಪ್ರೀತಿಗೆ ಕಾರಣವಾಯಿತು. ಪ್ರೀತಿ ಮಾತ್ರ ಅಲ್ಲ, ಈ ವಿಷಯ ಮದುವೆವರೆಗೂ ಹೋಯಿತಂತೆ. ಯಾರಿಗೂ ಗೊತ್ತಿಲ್ಲದೆ ಮದುವೆ ಆಗಬೇಕು ಅಂತ ನಿರ್ಧಾರ ಮಾಡಿದ್ರಂತೆ. ಮದುವೆಗೆ ರೆಡಿಯಾದ್ರು. ಆದರೆ ಈ ವಿಷಯ ರಾಮರಾವ್ ತಮ್ಮ ತಮ್ಮ, ನಿರ್ಮಾಪಕ ತ್ರಿವಿಕ್ರಮರಾವ್ ಅವರಿಗೆ ಹೇಳಿದ್ರು. ಕೂಡಲೇ ಅವರು ಮದ್ರಾಸ್‌ಗೆ ಹೋದ್ರು. ಬಂದ ತಕ್ಷಣ ಡೈರೆಕ್ಟಾಗಿ ಕೃಷ್ಣಕುಮಾರಿ ಮನೆಗೆ ಹೋಗಿ ಬೆದರಿಸಿದ್ರಂತೆ.
ಎನ್ ಟಿ ಆರ್ ಅವರನ್ನು ಆಂಧ್ರ ಪ್ರದೇಶದ ತುಂಬಾ ರಾಮನ ತರಹ ನೋಡ್ತಾರೆ. ತುಂಬಾನೇ ಅಭಿಮಾನಿಸುತ್ತಾರೆ. ಅಂಥದ್ರಲ್ಲಿ ಅವರು ಎರಡನೇ ಮದುವೆ ಆಗ್ತಿದ್ದಾರೆ ಅಂತ ಗೊತ್ತಾದ್ರೆ ಶಾಕ್ ಆಗ್ತಾರೆ. ಎನ್ ಟಿ ಆರ್ ಗೌರವ ಎಲ್ಲಾ ಹಾಳಾಗುತ್ತೆ ಅಂತ ಹೇಳಿ ಬೆದರಿಸಿದ್ರಂತೆ. ತನ್ನ ಹತ್ತಿರ ಇದ್ದ ಗನ್‌ನಿಂದ ವಾರ್ನಿಂಗ್ ಕೊಟ್ಟರಂತೆ. ಇದರಿಂದ ಆ ಭಯಕ್ಕೆ ಚೆನ್ನೈ ಬಿಟ್ಟು ಬೆಂಗಳೂರಿಗೆ ಹೋಗ್ಬಿಟ್ರಂತೆ ಕೃಷ್ಣಕುಮಾರಿ.
ಆ ರೀತಿ ತಮ್ಮ ತ್ರಿವಿಕ್ರಮ ರಾವ್ ಇಂದ ಎನ್ ಟಿ ಆರ್ ಎರಡನೇ ಮದುವೆ ನಿಂತು ಹೋಯ್ತು. ಇದೆಲ್ಲಾ ಅವರ ಹೆಂಡತಿ ಬಸವತಾರಕಂಗೆ ಗೊತ್ತಿಲ್ಲದೇನೆ ನಡೆದು ಹೋಯ್ತಂತೆ. ಈ ವಿಷಯವನ್ನ ಸೀನಿಯರ್ ಜರ್ನಲಿಸ್ಟ್ ಇಮ್ಮಂದಿ ರಾಮರಾವ್ ಹೇಳಿದ್ದಾರೆ.
ಆ ಘಟನೆ ನಂತರ ಮತ್ತೆ ಮದುವೆ ಅನ್ನೋ ಮಾತೇ ಎತ್ತಲಿಲ್ಲ ರಾಮರಾವ್. ಕೆಲವು ದಿನಕ್ಕೆ ಬಸವತಾರಕಮ್ಮ ಕ್ಯಾನ್ಸರ್‌ನಿಂದ ಬಳಲಿದರು. 1985ರಲ್ಲಿ ಅವರು ತೀರಿಕೊಂಡರು. ಅವರ ಹೆಸರಿನಲ್ಲೇ ಇಂಡೋ ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಿದ್ದಾರೆ. ಹೆಂಡತಿ ಸಾಯುವ ಹೊತ್ತಿಗೆ ರಾಮರಾವ್ ರಾಜಕೀಯದಲ್ಲಿ ಬ್ಯುಸಿ ಆಗಿದ್ರು. ಸಿಎಂ ಆಗಿಯೂ ಇದ್ರು. ಸ್ವಲ್ಪ ಕಾಲ ಒಂಟಿಯಾಗಿದ್ದ ಅವರು ಆಮೇಲೆ ಪ್ರೊಫೆಸರ್ ಲಕ್ಷ್ಮಿ ಪಾರ್ವತಿ ಕಡೆ ಆಕರ್ಷಿತರಾದರು. ಅವರನ್ನ ಮದುವೆ ಆದ್ರು. ಅವರ ಎಂಟ್ರಿಯಿಂದ ರಾಜಕೀಯವಾಗಿ ಹಲವು ಸಂಚಲನಗಳು ಉಂಟಾದವು. ಅವರ ಮೇಲೆ ಪೊಲಿಟಿಕಲ್ ಕುತಂತ್ರ ನಡೀತು ಅಂತಾರೆ. ಕೊನೆಗೆ ಅಧಿಕಾರ ಕಳೆದುಕೊಂಡು ಡಿಪ್ರೆಶನ್ ಗೆ ಹೋಗಿ ಅನಾರೋಗ್ಯದಿಂದ ಬಳಲಿ 1996ರಲ್ಲಿ ತೀರಿಕೊಂಡರು ಎನ್ ಟಿ ಆರ್.
ಈ ಘಟನೆ ನಂತರ ಕೃಷ್ಣಕುಮಾರಿ ಬೆಂಗಳೂರಿಗೆ ಹೋಗ್ಬಿಟ್ರು. ಅಲ್ಲಿ ಅಜಯ್ ಮೋಹನ್ ಕೈತನ್ ಅವರನ್ನ ಮದುವೆ ಆದ್ರು. 1969ರಲ್ಲೇ ಅವರ ಮದುವೆ ಆಗಿದ್ದು. 2012ರಲ್ಲಿ ಅವರ ಗಂಡ ತೀರಿಕೊಂಡರು. 2018ರಲ್ಲಿ ಕೃಷ್ಣಕುಮಾರಿ ತೀರಿಕೊಂಡರು. 1951ರಿಂದ 76ರವರೆಗೆ ಎಷ್ಟೋ ಸಿನಿಮಾಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದರು ಕೃಷ್ಣಕುಮಾರಿ. ಮದುವೆ ಆದ ಮೇಲೆ ಸ್ವಲ್ಪ ಕಾಲಕ್ಕೆ ಮೂವೀಸ್‌ಗೆ ಗುಡ್ ಬೈ ಹೇಳಿದ್ರು.