ಎನ್‌ಟಿಆರ್-ನೀಲ್ ಬಿಗ್ ಬಜೆಟ್ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ!

Published : Apr 29, 2025, 05:17 PM ISTUpdated : Apr 29, 2025, 05:20 PM IST

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಎನ್‌ಟಿಆರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಚಿತ್ರ 2026ರ ಜೂನ್ 25ರಂದು ಬಿಡುಗಡೆಯಾಗಲಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ನಿರ್ಮಾಣದ ಈ ಚಿತ್ರವು ದೊಡ್ಡ ಬಜೆಟ್ ಆಕ್ಷನ್ ಚಿತ್ರವಾಗಿದ್ದು, ಡ್ರಾಮಾ ಮತ್ತು ಮಾಸ್ ಎಂಟರ್‌ಟೈನ್ಮೆಂಟ್ ಅಂಶಗಳನ್ನು ಒಳಗೊಂಡಿದೆ.

PREV
15
ಎನ್‌ಟಿಆರ್-ನೀಲ್  ಬಿಗ್ ಬಜೆಟ್ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ!

ಕೆಜಿಎಫ್ ಸಿನಿಮಾಗಳ ಮೂಲಕ ಪ್ರಸಿದ್ಧರಾದ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಪ್ರಸಿದ್ಧ ತೆಲುಗು ನಟ ಎನ್‌ಟಿಆರ್ ಅವರು ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾತ್ಕಾಲಿಕವಾಗಿ ಈ ಸಿನಿಮಾಗೆ "ಎನ್‌ಟಿಆರ್-ನೀಲ್" ಎಂಬ ಹೆಸರು ಇಡಲಾಗಿದೆ. ಈ ಬಹು ನಿರೀಕ್ಷಿತ ಸಿನಿಮಾ 2026ರ ಜೂನ್ 25ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಿದ್ದು, ಇನ್ನೂ ಸ್ಪಷ್ಟ ಹೆಸರಿಡದ ಈ ಚಿತ್ರದ ಬಗ್ಗೆ ಅಭಿಮಾಮನಿಗಳಲ್ಲಿ ಕುತೂಹಲ ದುಪಟ್ಟಾಗಿದೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಎಂಬ ಪ್ರಸಿದ್ಧ ನಿರ್ಮಾಣ ಸಂಸ್ಥೆಗಳು ನಿರ್ಮಿಸುತ್ತಿವೆ. ಇದು ಒಂದು ದೊಡ್ಡ ಬಜೆಟ್ ಆಕ್ಷನ್ ಚಿತ್ರವಾಗಿದ್ದು, ಡ್ರಾಮಾ ಮತ್ತು ಮಾಸ್ ಎಂಟರ್‌ಟೈನ್ಮೆಂಟ್‌ಗೂ ಸಾಕಷ್ಟು ಒತ್ತು ನೀಡಲಾಗಿದೆ.

25

ಎನ್‌ಟಿಆರ್ ಮತ್ತು ನೀಲ್: ಶಕ್ತಿಶಾಲಿ ಕಾಂಬಿನೇಷನ್
ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ, ಇದೊಂದು ದೊಡ್ಡ ಮಟ್ಟದ ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಇದೆ. ಎನ್‌ಟಿಆರ್ ಅವರು ಹಿಂದೆಯೇ RRR ಮತ್ತು ದೇವರ: ಭಾಗ 1 ಚಿತ್ರಗಳಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. RRR ಚಿತ್ರದ ನಾಟು ನಾಟು ಹಾಡು ಅಕಾಡೆಮಿ (ಆಸ್ಕರ್) ಪ್ರಶಸ್ತಿ ಗೆದ್ದಿದ್ದು, ಅದು ಭಾರತೀಯ ಸಿನಿಮಾ ರಂಗದಲ್ಲಿ ಇತಿಹಾಸ ನಿರ್ಮಿಸಿತು. ಹೀಗೆಯೇ, ಪ್ರಶಾಂತ್ ನೀಲ್ ಕೂಡಾ ತನ್ನ ಕೆಜಿಎಫ್ ಮತ್ತು ಸಲಾರ್ ಚಿತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಗಳಿಸಿದ್ದಾರೆ. ಅವರ ನಿರ್ದೇಶನ ಶೈಲಿ ದೃಶ್ಯ ರೂಪಕ ಮತ್ತು ಆಕ್ಷನ್ ದೃಶ್ಯಗಳಲ್ಲಿರುವ ವಿಭಿನ್ನತೆಗಾಗಿ ಖ್ಯಾತಿ ಪಡೆದಿದೆ.
 

35

ದೇಶ-ವಿದೇಶಗಳಲ್ಲಿ ಜನಪ್ರಿಯತೆ
ದೇವರ: ಭಾಗ 1 2024ರಲ್ಲಿ ತೆಲುಗು ಭಾಷೆಯಲ್ಲಿ ಅತ್ಯಧಿಕ ಗಳಿಕೆ ಮಾಡಿದ ಮೂರನೇ ಚಿತ್ರವಾಗಿದೆ. ಈ ಚಿತ್ರ ಜಪಾನ್‌ನಲ್ಲಿಯೂ ಯಶಸ್ವಿಯಾಗಿ ಬಿಡುಗಡೆಯಾಗಿ, ವಿದೇಶಗಳಲ್ಲಿಯೂ ಎನ್‌ಟಿಆರ್‌ರಿಗೆ ಅಭಿಮಾನಿಗಳನ್ನು ತಂದಿತ್ತು. ಈಗ ಅವರು ಮತ್ತೊಮ್ಮೆ ದೊಡ್ಡ ಕಮ್ ಬ್ಯಾಕ್ ನೀಡಲು ಸಜ್ಜಾಗಿದ್ದಾರೆ.

ಬೃಹದಾಕಾರದ ಗನ್, ಮನೆ, ಹೆಲಿಕಾಪ್ಟರ್, ಟ್ರೇನ್: ಕುಮಟಾ ಧಾರೇಶ್ವರ ಬೀಚ್‌ನಲ್ಲಿ ಜೂ.ಎನ್‌ಟಿಆರ್‌

45

 ನಿರ್ಮಾಪಕರು ಚಿತ್ರ ಬಿಡುಗಡೆಗೆ ಬೃಹತ್ ಸಿದ್ಧತೆ ನಡೆಸುತ್ತಿದ್ದಾರೆ. ಕಲ್ಯಾಣ್ ರಾಮ್ ನಂದಮೂರಿ, ನವೀನ್ ಯೆರ್ನೇನಿ, ರವಿಶಂಕರ್ ಯಲಮಂಚಿಲಿ, ಹರಿ ಕೃಷ್ಣ ಕೊಸರಾಜು ಹೀಗೆ ಈ ತಂಡ ಹಿಂದೆಯೂ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡಿದೆ. ಈಗ "ಎನ್‌ಟಿಆರ್-ನೀಲ್" ಚಿತ್ರವನ್ನು ತಮ್ಮ ಮಹತ್ವಾಕಾಂಕ್ಷೆಯ ಯೋಜನೆಯಾಗಿ ರೂಪಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಶೀಘ್ರದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಪ್ರಸಕ್ತವಾಗಿ ಚಿತ್ರತಂಡ ಕಥಾಹಂದರದ ಬಗ್ಗೆ ಬಾಯ್ಬಿಟ್ಟಿಲ್ಲ. ಆದರೆ, ಚಿತ್ರದಲ್ಲಿ ದೊಡ್ಡ ಮಟ್ಟದ ಹೋರಾಟದ ದೃಶ್ಯಗಳು, ಭಾರೀ ಸೆಟ್‌ಗಳು ಮತ್ತು ವಿಶಿಷ್ಟ ಶೈಲಿಯ ಸಂಕಲನಗಳು ಇರುವ ಸಾಧ್ಯತೆ ಇದೆ.

55

ಭವಿಷ್ಯದಲ್ಲಿ ದೊಡ್ಡ ನಿರೀಕ್ಷೆ
ಈ ಸಿನಿಮಾ KGF ಶ್ರೇಣಿಗೆ ಸಮಾನವಾಗಿ ಪ್ರೆಸೆಂಟೇಟೇಶನ್ ಹೊಂದಿದ ಮಹತ್ತರ ಚಿತ್ರವಾಗಿರಲಿದೆ ಎಂಬ ಅಭಿಪ್ರಾಯವಿದೆ. ಎನ್‌ಟಿಆರ್ ಅವರ ಮಾಸ್ ಆಕರ್ಷಣೆ ಮತ್ತು ಪ್ರಶಾಂತ್ ನೀಲ್ ಅವರ ಡಾರ್ಕ್ ಆಕ್ಷನ್ ಶೈಲಿ ಒಂದಾಗಿ ಬರುತ್ತಿರುವ ಈ ಚಿತ್ರ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಬಹುದು.

ಇದ್ದಕ್ಕಿದ್ದಂತೆ ಸಣ್ಣಗಾದ ಜೂ.ಎನ್‌ಟಿಆರ್.. ಫ್ಯಾನ್ಸ್‌ಗೆ ಆತಂಕ: ಓಜೆಂಪಿಕ್‌ ಇಂಜೆಕ್ಷನ್ ತಗೊಂಡ್ರಾ?

Read more Photos on
click me!

Recommended Stories