1000 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ಯಾಕೆ ಸಮಂತಾ?

Published : Apr 28, 2025, 05:36 PM ISTUpdated : Apr 28, 2025, 05:43 PM IST

ದಕ್ಷಿಣದ ನಟಿ ಸಮಂತಾ ರುತ್ ಪ್ರಭುಗೆ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸುವ ಅವಕಾಶವಿತ್ತು. ಆದರೆ ಆ ಅವಕಾಶವನ್ನು ತಿರಸ್ಕರಿಸಿದ್ದರು. ಈ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

PREV
16
1000 ಕೋಟಿ ಸಿನಿಮಾ ಆಫರ್ ತಿರಸ್ಕರಿಸಿದ್ಯಾಕೆ ಸಮಂತಾ?

ಶಾರುಖ್ ಖಾನ್ 'ಜವಾನ್' ಸಿನಿಮಾದಲ್ಲಿ ನಟಿಸಲು ಸಮಂತಾಗೆ ಅವಕಾಶವಿತ್ತು, ಆದರೆ ಅವರು ತಿರಸ್ಕರಿಸಿದರು. ಈ ಸಿನಿಮಾದಲ್ಲಿ ನಯನತಾರಾ, ಪ್ರಿಯಾಮಣಿ, ಭಾಗ್ಯಶ್ರೀ, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಖ್ಯಾತ ನಟಿಯರು ನಟಿಸಿದ್ದರು.

26

'ಜವಾನ್' ಸಿನಿಮಾದಲ್ಲಿ ಆಜಾದ್ ರಾಥೋಡ್ ಪತ್ನಿ ನರ್ಮದಾ ರಾಯ್ ರಾಥೋಡ್ ಪಾತ್ರವನ್ನು ಸಮಂತಾಗೆ ನೀಡಲಾಗಿತ್ತು. ವೈಯಕ್ತಿಕ ಕಾರಣಗಳಿಂದ ಸಮಂತಾ 'ಜವಾನ್' ಸಿನಿಮಾ ತಿರಸ್ಕರಿಸಿದರು. ನಂತರ ಆ ಪಾತ್ರ ನಯನತಾರಾಗೆ ಹೋಯಿತು.

36

ನಯನತಾರಾ ಮತ್ತು ಶಾರೂಖ್ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು. ಆದರೆ ಚಿತ್ರದಲ್ಲಿ ತಮ್ಮ ಪಾತ್ರವನ್ನು ಕಡಿಮೆ ತೋರಿಸಲಾಗಿದೆ ಎಂದು ನಯನತಾರಾ ಅಸಮಾಧಾನ ಹೊರ ಹಾಕಿದ್ದರು.

46

ಶಾರುಖ್ ಖಾನ್, ನಯನತಾರಾ, ಸಾನ್ಯಾ ಮಲ್ಹೋತ್ರಾ, ವಿಜಯ್ ಸೇತುಪತಿ 'ಜವಾನ್' ಸಿನಿಮಾದಲ್ಲಿ ನಟಿಸಿದ್ದಾರೆ. ಮಲ್ಟಿ ಸ್ಟಾರ್‌ ಗಳನ್ನು ಹೊಂದಿದ್ದರಿಂದ ಹೆಚ್ಚು ನಿರೀಕ್ಷೆಯನ್ನು ಮೂಡಿಸಿತ್ತು.

56

ಸಮಂತಾ ತಿರಸ್ಕರಿಸಿದ 'ಜವಾನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 1,148 ಕೋಟಿ ಗಳಿಸಿತು. ಅಟ್ಲಿ ಮೊದಲ ಬಾಲಿವುಡ್ ಸಿನಿಮಾದಲ್ಲಿ ಬಾಕ್ಸ್ ಆಫಿಸ್‌ನಲ್ಲಿ ರೆಕಾರ್ಡ್ ಬರೆದಿದ್ರು.

66

ವೈಯಕ್ತಿಕ ಕಾರಣಗಳಿಂದಾಗಿ ಸಮಂತಾ ಈ ಚಿತ್ರದಿಂದ ಹಿಂದೆ ಸರಿಯಬೇಕಾಗಿತ್ತು. ಸಮಂತಾ 'ಮರ್ಸಲ್', 'ಥೇರಿ', 'ಜನತಾ ಗ್ಯಾರೇಜ್', 'ಕಾಠಿ', '24', 'ಐಗಾ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಮಂತಾ 'ದಿ ಫ್ಯಾಮಿಲಿ ಮ್ಯಾನ್' ಮತ್ತು 'ಸಿಟಾಡೆಲ್' ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ.

Read more Photos on
click me!

Recommended Stories