ಮದುವೆಯ ಮಧುರ ಕ್ಷಣದ ಡಾಕ್ಯುಮೆಂಟರಿ ಸಿದ್ಧಪಡಿಸಿದ ಖ್ಯಾತ ಬಾಲಿವುಡ್ ಜೋಡಿ

Published : Oct 07, 2023, 02:32 PM IST

ಬಾಲಿವುಡ್‌ನ ಈ ಖ್ಯಾತ ತಾರಾ ಜೋಡಿ ತಮ್ಮ ವಿವಾಹದ ಸುಂದರ ಕ್ಷಣವನ್ನು ಡಾಕ್ಯುಮೆಂಟರಿ ಮಾಡಲು ನಿರ್ಧರಿಸಿದ್ದಾರೆ. ಆದ್ರೆ ಇದು, ರಣಬೀರ್-ಆಲಿಯಾ, ಸಿದ್ಧಾರ್ಥ್-ಕಿಯಾರಾ ಅಥವಾ ವಿಕ್ಕಿ-ಕತ್ರಿನಾ ಇವರ್ಯಾರು ಅಲ್ಲ. ಮತ್ಯಾರು?

PREV
18
ಮದುವೆಯ ಮಧುರ ಕ್ಷಣದ ಡಾಕ್ಯುಮೆಂಟರಿ ಸಿದ್ಧಪಡಿಸಿದ ಖ್ಯಾತ ಬಾಲಿವುಡ್ ಜೋಡಿ

ಬಾಲಿವುಡ್‌ ಸೆಲೆಬ್ರಿಟಿಗಳ ಅದ್ಧೂರಿ ಮದುವೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಬಾಲಿವುಡ್‌ನಲ್ಲಿ ಅನೇಕ ತಾರೆಯರ ಮದುವೆಗಳು ನಡೆದಿವೆ. 

28

ಡಿಸೆಂಬರ್ 2021ರಲ್ಲಿ ಬರ್ವಾರಾದಲ್ಲಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅವರ ಅದ್ಧೂರಿ ವಿವಾಹದ ನಡೆಯಿತು. ಕಳೆದ ವರ್ಷ ಮುಂಬೈನಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹ, ಈ ವರ್ಷ ಫೆಬ್ರವರಿಯಲ್ಲಿ ಜೈಸಲ್ಮೇರ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಜರುಗಿತು. ಇತ್ತೀಚಿಗೆ ಉದಯ್‌ಪುರ್‌ನಲ್ಲಿ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆಯೂ ನೆರವೇರಿದೆ.

38

ಆದರೆ, ಇಲ್ಲೊಂದು ಸೆಲೆಬ್ರಿಟಿ ಜೋಡಿ ತಮ್ಮ ಮದುವೆಯ ಸುಂದರವಾದ ಸಾಕ್ಷ್ಯಚಿತ್ರವನ್ನುಸಿದ್ಧಪಡಿಸಲು ನಿರ್ಧರಿಸಿದ್ದಾರೆ. ಆದ್ರೆ ಇವರು ಮೇಲೆ ಹೇಳಿದ ಯಾವುದೇ ಸೆಲೆಬ್ರಿಟಿ ಜೋಡಿಯಲ್ಲ. ಬದಲಿಗೆ ರಿಚಾ ಚಡ್ಡಾ ಮತ್ತು ಅಲಿ ಫಜಲ್, ಇತ್ತೀಚೆಗೆ ತಮ್ಮ ವಿವಾಹವನ್ನು ರಿಯಾಲಿಟಿ ಎಂಬ ಸಾಕ್ಷ್ಯಚಿತ್ರವನ್ನಾಗಿ ಪರಿವರ್ತಿಸಿರುವುದಾಗಿ ಘೋಷಿಸಿದ್ದಾರೆ.

48

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ನಟಿ ರಿಚಾ ಚಡ್ಡಾ, 'ಮದುವೆಗಳನ್ನು ಸಾಮಾನ್ಯವಾಗಿ ಕಾಲ್ಪನಿಕ ಕಥೆಗಳಂತೆ ಚಿತ್ರಿಸಲಾಗುತ್ತದೆ. ಆದರೆ ವಾಸ್ತವವು ಹಲವು ಭಾವನೆಗಳ ಮಿಶ್ರಣವಾಗಿದೆ. ಸಂತೋಷ, ಆತಂಕ, ಉತ್ಸಾಹ ಎಲ್ಲವೂ ಇರುತ್ತದೆ. ಇವೆಲ್ಲವನ್ನೂ ನಮ್ಮ ಸಾಕ್ಷ್ಯಚಿತ್ರ, ರಿಯಾಲಿಟಿಯಲ್ಲಿ ತೋರಿಸಲಾಗಿದೆ' ಎಂದಿದ್ದಾರೆ.

58
Richa chadda

'ನಮ್ಮ ಮದುವೆಯ ಅನುಭವದ ನಿಜವಾದ ಸಾರವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದೇವೆ. ಅದುವೇ ಡಾಕ್ಯುಮೆಂಟರಿ 'ರಿಯಾಲಿಟಿ'' ಎಂದು ಮಾಹಿತಿ ನೀಡಿದ್ದಾರೆ.

68

ಅಲಿ ಫಜಲ್ ಈ ಬಗ್ಗೆ ಮಾತನಾಡಿ, 'ಪ್ರೀತಿ ಯಾವಾಗಲೂ ಪರಿಪೂರ್ಣವಲ್ಲ ಎಂಬುದಕ್ಕೆ 'ರಿಯಾಲಿಟಿ' ಹೆಸರಿನ ಈ ಡಾಕ್ಯುಮೆಂಟರಿ ಸಾಕ್ಷಿಯಾಗಿದೆ. ನಮ್ಮ ಪ್ರಯಾಣದ ಕೆಲವು ಸಾರವನ್ನು ರಿಯಾಲಿಟಿ ಸೆರೆಹಿಡಿಯುತ್ತದೆ' ಎಂದಿದ್ದಾರೆ.

78

'ಕೇವಲ ನಟರಾಗಿ ಮಾತ್ರವಲ್ಲದೆ ಪ್ರೀತಿಯಲ್ಲಿರುವ ಇಬ್ಬರು ಸಾಮಾನ್ಯ ವ್ಯಕ್ತಿಗಳ ಜೀವನವನ್ನು ಇಲ್ಲಿ ತೋರಿಲಸಾಗಿದೆ. ಇದರಲ್ಲಿ ನಾವು, ನಮ್ಮ ನ್ಯೂನತೆಗಳು, ಕನಸುಗಳು, ಹತಾಶೆ ಎಲ್ಲವೂ ಇದೆ' ಎಂದು ತಿಳಿಸಿದ್ದಾರೆ.

88

ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅವರು 2020ರಲ್ಲಿ ಕಾನೂನುಬದ್ಧವಾಗಿ ವಿವಾಹವಾದರು. ಕಳೆದ ವರ್ಷ ದೆಹಲಿ, ಲಕ್ನೋ ಮತ್ತು ಮುಂಬೈನಲ್ಲಿ ತಮ್ಮ ಪ್ರೀತಿಪಾತ್ರರಿಗೆ ಸಂಗೀತ, ಮೆಹೆಂದಿ ಮತ್ತು ವಿವಾಹದ ಆರತಕ್ಷತೆಯನ್ನು ಆಯೋಜಿಸಿದ್ದರು.

Read more Photos on
click me!

Recommended Stories