Trisha Krishnan Dating Rumours: ನಟಿ ತ್ರಿಷಾ ಕೃಷ್ಣನ್ ಒಬ್ಬ ಒಳ್ಳೆಯ ನಟಿ ಅನ್ನೋದಕ್ಕೆ ಎರಡು ಮಾತೇ ಇಲ್ಲ, ಆದರೆ ಸದ್ಯ ನಟ ವಿಜಯ್ ಜೊತೆ ಡೇಟಿಂಗ್ ರೂಮರ್ಸ್ ನಿಜವಾಗುತ್ತಿರುವ ಹೊತ್ತಲ್ಲೆ, ತ್ರಿಷಾ ಸಾಲು ಸಾಲು ನಟರೊಂದಿಗಿನ ಡೇಟಿಂಗ್, ಲವ್, ರೊಮ್ಯಾನ್ಸ್ ಸುದ್ದಿಗಳು ವೈರಲ್ ಆಗುತ್ತಿವೆ.
ಖಂಡಿತವಾಗಿಯೂ ನಟಿ ತ್ರಿಷಾ ಕೃಷ್ಣನ್ ಅತ್ಯದ್ಭುತ ನಟಿ. ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಆದರೆ ತ್ರಿಷಾ ನಟಿಸಿದ ಸಿನಿಮಾಗಳಿಗಿಂತ ಹೆಚ್ಚಾಗಿ, ಅವರಿಂದ ಒಡೆದು ಹೋದ ಹೃದಯಗಳೇ ಹೆಚ್ಚಾಗಿವೆ. ಅಂದ್ರೆ ಸದ್ಯ ವಿಜಯ್ ಜೊತೆ ಲವ್ ರೂಮರ್ಸ್ ನಿಜವಾಗುತ್ತಿರುವ ಹೊತ್ತಲ್ಲೇ ನಟಿ ಹಳೆಯ ಪ್ರೇಮಕಥೆಗಳು, ರೊಮಾನ್ಸ್, ಲವ್ ಎಲ್ಲವೂ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ.
27
ಸಿಂಬು ಮತ್ತು ತ್ರಿಷಾ
ಸಿಂಬು ಮತ್ತು ತ್ರಿಷಾ ‘ಅಲೈ’ ಮತ್ತು ‘ವಿನೈ ತಾಂಡಿ ವರುವಾಯ’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಮಯದಲ್ಲಿ ಈ ಜೋಡಿ ಲವ್ವಲ್ಲಿ ಬಿದ್ದಿದ್ದರು, 2004ರಲ್ಲಿ ಕೈ ಕೈ ಹಿಡಿದು ಸಿಂಬು ಜೊತೆ ಸುತ್ತುತ್ತಿದ್ದ ತ್ರಿಷಾ ಬಳಿಕ ಬ್ರೇಕಪ್ ಮಾಡಿಕೊಂಡಿದ್ದರು.
37
ವಿಜಯ್ ಜೊತೆ ಡೇಟಿಂಗ್
2004ರಿಂದ 2008ರವರೆಗೆ ವಿಜಯ್ ಮತ್ತು ತ್ರಿಷಾ ಹಲವಾರು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಸಿನಿಮಾಗಳು ಸೂಪರ್ ಹಿಟ್ ಕೂಡ ಆಗಿದ್ದವು. ಆ ಸಂದರ್ಭದಲ್ಲಿ ಇಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಬಂದಿತ್ತು. ಆದರೆ ಬಳಿಕ ಈ ಜೋಡಿ ಬೇರೆ ಬೇರೆಯಾಗಿತ್ತು.
ಬಳಿಕ ತ್ರಿಷಾ ಬಾಹುಬಲಿ ಸ್ಟಾರ್ ರಾಣಾ ದಗ್ಗುಬಾಟಿ ಜೊತೆ ರೊಮ್ಯಾಂಟಿಕ್ ರಿಲೇಶನ್ ಶಿಪ್ ನಲ್ಲಿದ್ದರು. ಇವರಿಬ್ಬರ ಕಿಸ್ಸಿಂಗ್, ಹಾಗೂ ಇಂಟೀಮೇಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇಬ್ಬರು ಮದುವೆಯಾಗುತ್ತಾರೆ ಎಂದೇ ಜನ ತಿಳಿದಿದ್ದರು. ಆದರೆ ಮತ್ತೆ ಇಬ್ಬರ ಸಂಬಂಧ ಮುರಿದು ಬಿತ್ತು.
57
ಧನುಷ್ ಜೊತೆಗೂ ಲಿಂಕ್
ಇನ್ನು ತ್ರಿಷಾ ಹೆಸರು ಧನುಷ್ ಜೊತೆ ಕೂಡ ಕೇಳಿ ಬಂದಿತ್ತು. ಇಬ್ಬರು ಬಹಳಷ್ಟು ಸಂದರ್ಭಗಳಲ್ಲಿ ತುಂಬಾನೆ ಕ್ಲೋಸ್ ಆಗಿರುವ ಫೋಟೊಗಳು ವೈರಲ್ ಆಗಿದ್ದವು. ತ್ರಿಷಾಳಿಂದಾಗಿಯೇ ಧನುಷ್ ಮತ್ತು ಐಶ್ವರ್ಯ ದಾಂಪತ್ಯ ಜೀವನದಲ್ಲಿ ವೈಮನಸ್ಸು ಮೂಡಿತ್ತು ಎಂದು ಕೂಡ ಹೇಳಲಾಗಿತ್ತು.
67
ದಿಢೀರ್ ನಿಶ್ಚಿತಾರ್ಥ
ಧನುಷ್ ಜೊತೆಗೆ ಹೆಸರು ಕೇಳಿ ಬರುತ್ತಿದ್ದ ಸಂದರ್ಭದಲ್ಲೇ ತ್ರಿಷಾ 2015ರಲ್ಲಿ ವರುಣ್ ಮಣಿಯನ್ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಧನುಷ್ ಜೊತೆಗೆ ಕ್ಲೋಸ್ ಆಗಿರುವುದು ಇಷ್ತವಾಗದೇ ವರುಣ್ ನಿಶ್ಚಿತಾರ್ಥದಿಂದ ಹಿಂದೆ ಸರಿದರು ಎನ್ನಲಾಗುತ್ತಿದೆ.
77
ಈಗ ಮತ್ತೆ ವಿಜಯ್ ಜೊತೆ ಲವ್
ಇದೀಗ ತ್ರಿಷಾ ಕೃಷ್ಣನ್ ಹೆಸರು ವಿಜಯ್ ಜೊತೆ ಮತ್ತೆ ತಳುಕು ಹಾಕಿಕೊಂಡಿದೆ. ತ್ರಿಷಾ -ವಿಜಯ್ ಜೊತೆಯಾಗಿ ಲಿಯೋ ಸಿನಿಮಾದಲ್ಲಿ ನಟಿಸಿದ್ದರು. ನಂತರ ಇಬ್ಬರು ಜೊತೆಯಾಗಿ ಸುತ್ತಾಡುತ್ತಿರುವ ಫೋಟೊಗಳು ವೈರಲ್ ಆಗಿದ್ದವು. ಆದರೆ ಅಭಿಮಾನಿಗಳು ಅದನ್ನು ಅಲ್ಲಗಳೆದಿದ್ದರು. ಇದೀಗ ಪತ್ನಿ ಸಂಗೀತ ಡಿವೋರ್ಸ್ ಕೇಳಿದ ಬೆನ್ನಲ್ಲೇ ವಿಜಯ್ ಮತ್ತು ತ್ರಿಷಾ ಜೊತೆಯಾಗಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.