ಅದೊಂದು ತಪ್ಪು ಮಾಡ್ಕೊಂಡು ಚಿನ್ನದಂಥ ಸಂಸಾರಕ್ಕೆ ಕೊಳ್ಳಿ ಇಟ್ಕೊಂಡ ಖ್ಯಾತ ಸೆಲೆಬ್ರಿಟಿಗಳಿವರು!

Published : Mar 06, 2026, 11:50 AM IST

Celebrities ExtraMarital Affair: ಅನೇಕ ನಟ, ನಟಿಯರು ಮದುವೆಯಾದ ಬಳಿಕ ಕೂಡ ಅಕ್ರಮ ಸಂಬಂಧ ಹೊಂದಿರುವ ಉದಾಹರಣೆಗಳು ಸಾಕಷ್ಟಿವೆ. ಇದೇ ಕಾರಣಕ್ಕೆ ಸ್ಟಾರ್‌ ನಟರು ಡಿವೋರ್ಸ್‌ ಕೂಡ ಪಡೆದಿದ್ದುಂಟು. ಹಾಗಾದರೆ ಯಾರು? ಯಾರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಲೇಖನ ಓದಿ.  

PREV
16
ನಟ ವಿಜಯ್‌ ದಳಪತಿ

ನಟ‌ ವಿಜಯ್‌ ದಳಪತಿ ಅವರು ಇನ್ನೋರ್ವ ನಟಿಯ ಜೊತೆ ಅಕ್ರಮ ಸಂಬಂಧದಲ್ಲಿ ಇದ್ದಾರೆ ಎಂದು ಇವರ ಪತ್ನಿ ಸಂಗೀತಾ ಅವರು ಡಿವೋರ್ಸ್‌ಗೋಸ್ಕರ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಂದಹಾಗೆ ವಿಜಯ್‌ ಅವರು ನಟಿ ತ್ರಿಶಾ ಜೊತೆ ಒಂದೇ ಕಾರ್‌ನಲ್ಲಿ ಮದುವೆಯಲ್ಲಿ ಭಾಗಿ ಆಗಿರೋದು ಈ ಸುದ್ದಿಗೆ ಪುಷ್ಠಿ ಕೊಟ್ಟಿದೆ.

26
ಓಂ ಪುರಿ

ಓಂ ಪುರಿ ಮೊದಲ ಪತ್ನಿ ಸೀಮಾ ಕಪೂರ್‌ ಅವರು ಗರ್ಭಿಣಿಯಾಗಿದ್ದಾಗ, ಅವರು ನಂದಿತಾ ಎನ್ನುವವರ ಜೊತೆ ಅಫೇರ್‌ ಹೊಂದಿದ್ದರಂತೆ. ಒಂದಿಷ್ಟು ಸಮಯ ಕಾದರೂ ಕೂಡ ಓಂ ಪುರಿ ಸರಿ ಹೋಗಲಿಲ್ಲ, ಆಮೇಲೆ ಸೀಮಾ ಅವರು ಡಿವೋರ್ಸ್‌ ಪಡೆದರು. ಓಂ ಪುರಿ ಅವರು 1993ರಲ್ಲಿ ನಂದಿತಾ ಜೊತೆ ಮದುವೆಯಾಗಿದ್ದು, ಇವರಿಗೆ ಮಗನಿದ್ದಾನೆ. 2017ರಲ್ಲಿ ಓಂ ಪುರಿ ನಿಧನರಾದರು.

36
ರವಿ ಮೋಹನ್

ರವಿ ಮೋಹನ್‌ ಅವರು ಗಾಯಕಿ ಕೆನಿಷಾ ಜೊತೆ ಸಂಬಂಧದಲ್ಲಿ ಇದ್ದಾರೆ ಎಂದು ಇವರ ಪತ್ನಿ ಆರತಿ ಮೋಹನ್‌ ಅವರು ಹೇಳಿದ್ದರು. ಇವರ ಡಿವೋರ್ಸ್‌ ಕೇಸ್‌ ಕೋರ್ಟ್‌ನಲ್ಲಿದೆ. ಇವರಿಬ್ಬರು ಸಂಬಂಧದಲ್ಲಿ ಇರೋದು ಸತ್ಯ ಎಂದು ಕೂಡ ಒಪ್ಪಿಕೊಂಡಿದ್ದಾರೆ.

46
ಧನುಷ್‌

ನಟ ಧನುಷ್‌ ಅವರ ಸುತ್ತ ಸಾಕಷ್ಟು ನಟಿಮಣಿಯರ ಹೆಸರು ಥಳುಕು ಹಾಕಿಕೊಂಡಿದೆ. ಸಮಂತಾರಿಂದ ಹಿಡಿದು, ಕಾಜಲ್‌, ತ್ರಿಶಾ, ಶ್ರುತಿ ಹಾಸನ್‌ ಕೂಡ ಪ್ರೀತಿಸಿದ್ದರು ಎನ್ನಲಾಗಿದೆ. ಆದರೆ ಧನುಷ್‌ ಹಾಗೂ ಐಶ್ವರ್ಯಾ ರಜನಿಕಾಂತ್‌ ಮದುವೆ ಬಾಳಿಕೆ ಬರಲಿಲ್ಲ, ಇವರಿಬ್ಬರು ಡಿವೋರ್ಸ್‌ ಪಡೆದಿದ್ದಾರೆ. ಧನುಷ್‌ ಅವರ ಅಕ್ರಮ ಸಂಭಂಧದಿಂದಲೇ ದೂರವಾದರು ಎನ್ನಲಾಗಿದೆ.

56
ಪ್ರಭುದೇವ-ನಯನತಾರಾ

ಪ್ರಭುದೇವ ಹಾಗೂ ನಯನತಾರಾ ಲವ್‌ಸ್ಟೋರಿ ಇಡೀ ಜಗತ್ತಿಗೆ ಗೊತ್ತಿದೆ. ಪ್ರಭುದೇವ ಅವರಿಗೆ ಮದುವೆಯಾಗಿ ಮೂರು ಮಕ್ಕಳಿದ್ದವು, ಆಗ ಅವರು ನಯನತಾರಾ ಅವರನ್ನು ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಇದರಿಂದಲೇ ಪ್ರಭುದೇವ ಹಾಗೂ ಅವರ ಪತ್ನಿ ದೂರ ಆದರು. ನಯನತಾರಾ ಕ್ರಿಶ್ಚಿಯನ್‌ ಆಗಿದ್ದು, ಪ್ರಭುದೇವ ಅವರನ್ನು ಮದುವೆಯಾದರೆ ಸುಮ್ಮನೆ ಬಿಡೋದಿಲ್ಲ ಎಂದು ಸಂಘಟನೆಗಳು ಹೇಳಿದವು, ಆ ಬಳಿಕ ನಯನತಾರಾ ಪ್ರಭುದೇವರಿಂದ ದೂರ ಆದರು ಎನ್ನಲಾಗಿದೆ.

66
ರಮ್ಯಾ ಕೃಷ್ಣನ್

ರಮ್ಯಾ ಕೃಷ್ಣನ್‌ ಅವರು ನಿರ್ದೇಶಕ ಕೆ ಎಸ್‌ ರವಿಕುಮಾರ್‌ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿತ್ತು. ರವಿಕುಮಾರ್‌ ಅವರಿಗೆ ಆಗಲೇ ಮದುವೆ ಆಗಿತ್ತು. ಆಮೇಲೆ ರಮ್ಯಾ ಗರ್ಭಿಣಿಯಾಗಿದ್ದು, ಮಗು ತೆಗೆಸಲು 75 ಲಕ್ಷ ರೂಪಾಯಿ ಡಿಮ್ಯಾಂಡ್‌ ಮಾಡಿದ್ದರು ಎನ್ನಲಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories