ಶೀಘ್ರದಲ್ಲೇ ಅರ್ಜುನ್ ಸರ್ಜಾ ಹನುಮಾನ್ ಮಂದಿರಕ್ಕೆ ಪ್ರಧಾನಿ ಮೋದಿ ಭೇಟಿ, ಮಾತುಕತೆ ರಹಸ್ಯ ಬಿಚ್ಚಿಟ್ಟ ನಟ!

First Published | Jan 20, 2024, 8:38 PM IST

ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಕಠಿಣ ವೃತದಲ್ಲಿರುವ ಪ್ರಧಾನಿ ಮೋದಿ ತಮಿಳುನಾಡಿನ ಹಲವು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿಯ ಭೇಟಿಯಾಗಿರುವ ನಟ ಅರ್ಜುನ್ ಸರ್ಜಾ ಹಾಗೂ ಪುತ್ರಿ ಐಶ್ವರ್ಯ ಸರ್ಜಾ, ವಿಶೇಷ ಮನವಿ ಮಾಡಿದ್ದಾರೆ. ಈ ಮನವಿಯನ್ನು ಮೋದಿ ಒಪ್ಪಿಕೊಂಡಿದ್ದಾರೆ.
 

ಪ್ರಧಾನಿ ನರೇಂದ್ರ ತಮಿಳುನಾಡಿನ ರಾಮೇಶ್ವರಂ ದೇವಸ್ಥಾನ ಸೇರಿದಂತೆ ಕೆಲ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಮೋದಿ, ರಾಮಾಯಣ ಸಂಬಂಧಿಸಿದ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ತಮಿಳುನಾಡಿನಲ್ಲಿ ಖೇಲೋ ಇಂಡಿಯಾ ಉದ್ಘಾಟನಾ ಕಾರ್ಯಕ್ರಮದ ಬಳಿಕ ಖ್ಯಾತ ನಟ ಅರ್ಜುನ್ ಸರ್ಜಾ ಹಾಗೂ ಪುತ್ರಿ ಐಶ್ವರ್ಯ ಸರ್ಜಾ, ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ.

Tap to resize

ಪ್ರಧಾನಿ ಮೋದಿ ಬೇಟಿಯಾದ ಅರ್ಜುನ್ ಸರ್ಜಾ ಕುಟುಂಬ, ಕೆಲ ಹೊತ್ತು ಮಾತುಕತೆ ನಡೆಸಿದೆ. ಇದೇ ವೇಳೆ ಅರ್ಜುನ್ ಸರ್ಜಾ ನಿರ್ಮಿಸಿರುವ ಹನುಮಾನ್ ಮಂದಿರದ ಫೋಟೋ ಫ್ರೇಮ್‌ನ್ನು ಮೋದಿಗೆ ಉಡುಗೊರೆಯಾಗಿ ನೀಡಿದ್ದಾರೆ.
 

ಹನುಮಾನ್ ಮಂದಿರ ಫೋಟೋ ಫ್ರೇಮ್‌ನ್ನು ಮೋದಿಗೆ ನೀಡಿದ ಅರ್ಜುನ್ ಸರ್ಜಾ, ಮಂದಿರಕ್ಕೆ ಬೇಟಿ ನೀಡುವಂತೆ ಮೋದಿಯನ್ನು ಮನವಿ ಮಾಡಿದ್ದಾರೆ. ಇದಕ್ಕೆ ಮೋದಿ ಕೂಡ ಸ್ಪಂದಿಸಿದ್ದಾರೆ.

ಅರ್ಜುನ್ ಸರ್ಜಾ ತಮಿಳುನಾಡಿನ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಈ ಹನುಮಾನ್ ದೇಗುಲಕ್ಕೆ ಶೀಘ್ರದಲ್ಲೇ ಭೇಟಿ ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಈ ಕುರಿತು ಖುದ್ದು ಅರ್ಜುನ್ ಸರ್ಜಾ ಮಾಧ್ಯಮದ ಮುಂದೆ ಹೇಳಿದ್ದಾರೆ.
 

ನಾನು ಹಾಗೂ ನನ್ನ ಕುಟುಂಬ ಅತೀ ಹೆಚ್ಚು ಇಷ್ಟಪಡುವ, ಗೌರವಿಸುವ ವ್ಯಕ್ತಿ ಪ್ರಧಾನಿ ಮೋದಿ. ವಿಶ್ವದ ಪವರ್‌ಫುಲ್ ನಾಯಕ ಮೋದಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದೆ ಸೌಭಾಗ್ಯ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

ಮೋದಿ ಭೇಟಿಯಾದ ಬೆನ್ನಲ್ಲೇ ಅರ್ಜುನ್ ಸರ್ಜಾ ಬಿಜೆಪಿ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸರ್ಜಾ, ರಾಜಕೀಯ ಪ್ರವೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

ಹನುಮಾನ್ ಮಂದಿರಕ್ಕೆ ಮೋದಿಯನ್ನು ಆಹ್ವಾನಿಸಲು ಭೇಟಿಯಾಗಿದೆ. ಕೆಲ ಹೊತ್ತು ಆತ್ಮೀಯವಾಗಿ ಮಾತನಾಡಿದ್ದಾರೆ. ಇದರಲ್ಲಿ ರಾಜಕೀಯ ಇರಲಿಲ್ಲ. ಅವರ ಮಾತು, ನಡೆ, ವ್ಯಕ್ತಿತ್ವವೇ ಪ್ರಕಾಶಮಾನವಾದದ್ದು ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

Latest Videos

click me!