ಸ್ತ್ರೀವಾದದಿಂದ ಸಮಾಜ ಹಾಳಾಗಿದೆ; ಮಹಿಳೆಯು ಮನೆ ಮಕ್ಕಳ ಕಾಳಜಿ ವಹಿಸಬೇಕು ಎಂದ ನೋರಾ ಫತೇಹಿ

First Published Jun 4, 2024, 11:49 AM IST

ಬಾಲಿವುಡ್‌ನ ಖ್ಯಾತ ನೃತ್ಯಗಾತಿ, ನಟಿ ನೋರಾ ಫತೇಹಿ ಸ್ತ್ರೀವಾದದ ಕಲ್ಪನೆಯನ್ನು ತಳ್ಳಿ ಹಾಕಿದ್ದಾರೆ.  ಇಂದಿನ ಹುಡುಗಿಯರ ಮನಸ್ಥಿತಿಯಂತೆ 'ಮದುವೆಯಾಗುವುದಿಲ್ಲ' ಅಥವಾ 'ಸ್ವತಂತ್ರವಾಗಿ' ಬದುಕುತ್ತೇನೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. 

ನೋರಾ ಫತೇಹಿ ಬಿಗ್ ಬಾಸ್ 9ರ ಚಿಕ್ಕ ಹುಡುಗಿಯಿಂದ ಪ್ರಸಿದ್ಧ ನೃತ್ಯಗಾರ್ತಿ ಮತ್ತು ನಟಿಯಾಗಿ ಬಹಳ ದೂರ ಸಾಗಿ ಬಂದಿದ್ದಾರೆ. ಆಕೆ ತನ್ನ ಜೀವನದ ಅತ್ಯುತ್ತಮ ಹಂತವನ್ನು ಆನಂದಿಸುತ್ತಿದ್ದಾರೆ.

ಆಕೆ ತನ್ನ ಹಾಗೂ ತನ್ನಿಡೀ ಕುಟುಂಬದ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ಯಶಸ್ವಿ ನಟಿಯರಲ್ಲಿ ಒಬ್ಬರಾಗಿದ್ದರೂ, ನೋರಾ ಸ್ತ್ರೀವಾದದ ಕಲ್ಪನೆಯನ್ನು ನಂಬುವುದಿಲ್ಲ ಎಂಬುದು ಆಶ್ಚರ್ಯವೆನಿಸಬಹುದು.

Latest Videos


ರಣವೀರ್ ಅಲಹಬಾದಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ ನೋರಾ ಫತೇಹಿ ಸ್ತ್ರೀವಾದದ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ತಾನು ಸ್ತ್ರೀವಾದದ ಕಲ್ಪನೆ ನಂಬುವುದಿಲ್ಲ. ಬದಲಿಗೆ ಪುರುಷರು ದುಡಿದು ತರಬೇಕು, ಮಹಿಳೆ ಮನೆಯ ಕಾಳಜಿ ವಹಿಸಬೇಕು ಎಂಬ ಚಿಂತನೆಗೆ ತನ್ನ ಸಹಮತವಿದೆ ಎಂದಿದ್ದಾರೆ.

'ಸ್ತ್ರೀವಾದವು ನಮ್ಮ ಸಮಾಜವನ್ನು ಸಂಪೂರ್ಣವಾಗಿ ಹಾಳು ಮಾಡಿದೆ ಎಂದು ನಾನು ಭಾವಿಸುತ್ತೇನೆ. ಸಂಪೂರ್ಣವಾಗಿ ಸ್ವತಂತ್ರವಾಗಿರುವ ಮತ್ತು ಮದುವೆಯಾಗಿ ಮಕ್ಕಳನ್ನು ಹೊಂದುವ ಅಗತ್ಯವಿಲ್ಲ ಎಂದು ವಾದಿಸುವ ಸ್ತ್ರೀವಾದದಲ್ಲಿ ನಂಬಿಕೆ ಇಲ್ಲ' ಎಂದಿದ್ದಾರೆ ನೋರಾ. 

ಮನೆಯಲ್ಲಿ ಪುರುಷನು ಒದಗಿಸುವವನು ಮತ್ತು ಮಹಿಳೆ ಪೋಷಿಸುವವಳು- ಅದು ನಿಜವಲ್ಲ ಎಂದು ನಾನು ಭಾವಿಸುವ ಜನರನ್ನು ನಂಬುವುದಿಲ್ಲ ಎಂದು ನೋರಾ ಹೇಳಿದ್ದಾರೆ.  

ಹೌದು, ಮಹಿಳೆ ಮನೆಯಿಂದ ಹೊರ ಬರಬೇಕು, ಸಾಧ್ಯವಾದರೆ ದುಡಿಯಬೇಕು ಎಲ್ಲವೂ ನಿಜವೇ. ಆದರೆ, ಅದು ಸ್ವಲ್ಪ ಮಟ್ಟಿಗೆ ಮಾತ್ರ. ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಹಣ, ವಸತಿ ತಂದು ಹಾಕುತ್ತಿದ್ದರೆ- ಉಳಿದ ಅಗತ್ಯಗಳನ್ನು ಗಮನಿಸುವವರು ಯಾರು ಎಂದು ನೋರಾ ಪ್ರಶ್ನಿಸಿದ್ದಾರೆ.

 ಗಂಡನಾದವನು ರಕ್ಷಣಾತ್ಮಕ ಪಾತ್ರವನ್ನು ತೆಗೆದುಕೊಳ್ಳಬೇಕು. ಹೆಚ್ಚು ಒದಗಿಸುವವನಾಗಿ ಕೆಲಸ ಮಾಡಬೇಕು, ಆಗ ಪತ್ನಿಯಾದವಳು ಪೋಷಣೆ ಮತ್ತು ಮನೆಯನ್ನು ನೋಡಿಕೊಳ್ಳುವುದು ಮತ್ತು ತಾಯಿಯಾಗುವುದು, ಅಡುಗೆ ಮಾಡುವುದು ಇತ್ಯಾದಿ ಮಾಡಬಹುದು. ಆಗ ಮನೆ ಚೆನ್ನಾಗಿ ನಡೆಯುತ್ತದೆ ಎಂದಿದ್ದಾರೆ. 
 

ಅದೇ ಪಾಡ್‌ಕ್ಯಾಸ್ಟ್‌ನಲ್ಲಿ, ಉದ್ಯಮದಲ್ಲಿ ತನ್ನನ್ನು ಬೆದರಿಸಲು ಪ್ರಯತ್ನಿಸುತ್ತಿರುವ ಜನರ ಬಗ್ಗೆ ನೋರಾ ಮಾತನಾಡಿದರು. ತಾನು ಅತ್ಯಂತ ಅಗೌರವ ತೋರುವ ಮತ್ತು ಬೆದರಿಸುವ ತಾರೆಯರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ. 

ಇಂಡಸ್ಟ್ರಿಯಲ್ಲಿ ಬಹಳಷ್ಟು ತಾರೆಯರು ಅಪಹಾಸ್ಯ ಮಾಡುತ್ತಾರೆ, ತಮಾಷೆ ಮಾಡುತ್ತಾರೆ ಮತ್ತು ಬೆನ್ನ ಹಿಂದೆ ಮಾತಾಡುತ್ತಾರೆ. ನನಗೆ ಅವಕಾಶ ಸಿಕ್ಕಿದ್ದಕ್ಕೆ ಕೋಪಗೊಳ್ಳುತ್ತಾರೆ ಎಂದು ನಟಿ ತಿಳಿಸಿದ್ದಾರೆ. 

click me!