ಹೊಟ್ಟೆಗೆ ಅನ್ನ ತಿನ್ನೋದು ಬಿಟ್ಟು, ಅಲೋವೆರಾ ಜೆಲ್ ತಿಂದ ನಟಿ ಪ್ರಣೀತಾ

First Published | Jun 3, 2024, 8:56 PM IST

ಹುಡುಗಿಯರು ತ್ವಚೆಗೆ ಒಳ್ಳೆಯದು ಎಂದು ಹೇಳಿದರೆ ಏನು ಬೇಕಾದರೂ ತಿನ್ನುತ್ತಾರೆ ಎಂಬುದಕ್ಕೆ ನಟಿ ಪ್ರಣೀತಾ ತಾಜಾ ಉದಾಹರಣೆ ಆಗಿದ್ದಾರೆ ನೋಡಿ.. ಹೊಟ್ಟೆಗೆ ಅನ್ನ ತಿನ್ನದೇ ಅಲೋವೆರಾ ಕ್ಯೂಬ್‌ಗಳನ್ನು ತಿಂದು ಡಯಟ್ ಮಾಡ್ತಿದ್ದಾರೆ.

ಹೌದು, ಹುಡುಗಿಯರು ಸೌಂದರ್ಯ ಪ್ರಿಯರು ಎಂಬುದು ವಾಸ್ತವ ಸತ್ಯ. ಅದರಲ್ಲಿಯೂ ಸೌಂದರ್ಯಕ್ಕೆ ಬಗ್ಗೆ ಹೆಚ್ಚು ಕಾಳಜಿವಹಿಸುವವ ಹುಡ್ಗೀರು ತೀವ್ರ ಸೂಕ್ಷ್ಮವಾಗಿ ಆಯ್ದ ಆಹಾರ ಸೇವನೆ ಮಾಡುತ್ತಾರೆ.

ಅದರಲ್ಲಿಯೂ ಈ ಆಹಾರಗಳು ಸೌಂದರ್ಯ ಹೆಚ್ಚಳಕ್ಕೆ ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರೆ ಏನು ಬೇಕಾದರೂ ತಿಂದುಬಿಡುತ್ತಾರೆ. ಅದಕ್ಕೆ ಈಗ ತಾಜಾ ಉದಾಹರಣೆ ಆಗಿರುವುದು ನಟಿ ಪ್ರಣೀತಾ.

Tap to resize

ನಟಿ ಪ್ರಣೀತಾ ಮದುವೆಯಾದ ನಂತರ ಒಂದು ಮಗು ಮಾಡಿಕೊಳ್ಳುವವರೆಗೂ ದೀರ್ಘ ಕಾಲ (7 ವರ್ಷ) ಸಿನಿಮಾ ಕ್ಷೇತ್ರದಿಂದಲೇ ದೂರ ಉಳಿದಿದ್ದರು. ಆದರೆ, ಪುನಃ ಕನ್ನಡದಲ್ಲಿ 'ರಾಮನ ಅವತಾರ' ಸಿನಿಮಾದ ಮೂಲಕ 2ನೇ ಇನ್ನಿಂಗ್ಸ್‌ ಆರಂಭಿಸಿದ್ದು, ಸೌಂದರ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ.

ಮನೆಯಲ್ಲಿ ಗಂಡನಿಗೆ ಮುದ್ದಿನ ಹೆಂಡತಿಯಾಗಿ, ಮಗುವಿಗೆ ಉತ್ತಮ ತಾಯಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಪ್ರಣೀತಾ ತನ್ನ ಸೌಂದರ್ಯ ಕಾಪಾಡಿಕೊಳ್ಳಲೂ ದಿನನಿತ್ಯ ಯೋಗಾಭ್ಯಾಸ, ಡಯಟ್ ಫುಡ್ ಸೇವನೆ ಹಾಗೂ ದೈಹಿಕ ಕಸರತ್ತುಗಳನ್ನು ಮಾಡಿದ್ದಾರೆ.

ಸತತ 7 ವರ್ಷಗಳ ಕೌಟುಂಬಿಕ ಜೀವನದ ಬಳಿಕ ಸಿನಿಮಾಗೆ ಕಮ್‌ಬ್ಯಾಕ್ ಮಾಡಿದ ಪ್ರಣೀತಾ ಗಂಡ-ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಮಾತ್ರ ಬಿಟ್ಟಿಲ್ಲ.

ಈಗ ಸಿನಿಮಾಕ್ಕೆ ಸ್ವಲ್ಪ ಬಿಡುವು ತೆಗೆದುಕೊಂಡ ಗಂಡನೊಂದಿಗೆ ಪ್ರವಾಸಕ್ಕೆಂದು ಥೈಲ್ಯಾಂಡ್‌ಗೆ ಹೋಗಿರುವ ಪ್ರಣೀತಾ ಸೌಂದರ್ಯ ವರ್ಧಕ ಆಹಾರವೆಂದು ಅಲೋವೆರಾ ಕ್ಯೂಬ್ ಅನ್ನು ಸೇವಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಪ್ರಣೀತಾ 'ತ್ವಚೆಗೆ ಒಳ್ಳೆಯದು ಎಂದು ಹೇಳಿದರೆ ಹುಡುಗಿಯರು ಏನು ಬೇಕಾದರೂ ತಿನ್ನುತ್ತಾರೆ ಎಂಬುದಕ್ಕೆ ಪುರಾವೆ ನಾನೇ. ಬ್ಲೂಬೆರ್ರಿ ಪಾನಕದಲ್ಲಿ ನಾನು ಸೇವಿಸುತ್ತಿರುವ ಅಲೋವೆರಾ ಕ್ಯೂಬ್‌ಗಳನ್ನು ನೋಡಲು ಸ್ವೈಪ್‌ ಮಾಡಿ' ಎಂದು ಸ್ಮೈಲಿ ಹಾಕಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಪ್ರಣೀತಾ ಅವರ ಈ ಡಯಟ್ ಅಂಡ್ ಬ್ಯೂಟಿ ಕಾನ್ಸಿಯಸ್ ಆಹಾರ ಸೇವನೆಯ ಫೋಟೋಗಳನ್ನು ಸ್ವತಃ ಅವರ ಪತಿಯೇ ತೆಗೆದಿದ್ದಾರೆ ಎಂದು ಗಂಡನಿಗೆ ಕ್ರೆಡಿಟ್ ಕೂಡ ಕೊಟ್ಟಿದ್ದಾರೆ.

ಇನ್ನು ಗಂಡನೊಂದಿಗೆ ಊಟಕ್ಕೆ ಹೋದಾಗ ವಿವಿಧ ಫ್ಲೇವರ್‌ನ ಸೂಪ್, ವೆಜ್ ಸಲಾಡ್ಸ್, ವೆಜ್ ರೋಲ್ಸ್ ಹಾಗೂ ಬೋಂಡಾ ಮುಂದಿಟ್ಟುಕೊಂಡಿರುವುದನ್ನು ಕೂಡ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಪತಿ ಒಳ್ಳೆಯ ಫುಡ್ ಬ್ಯಾಟ್ಸ್‌ಮನ್ ಎಂಬುದನ್ನೂ ತೋರಿಸಿದ್ದಾರೆ.

Latest Videos

click me!