ಇತ್ತೀಚೆಗೆ ಲಾವಣ್ಯ ತಾಯಿ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದರ ಬಗ್ಗೆ ನಾಗಬಾಬು ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಹಾಗಾಗಿ ಲಾವಣ್ಯ ಗರ್ಭಿಣಿ ಎಂಬ ಸುದ್ದಿಯಲ್ಲಿ ಸತ್ಯಾಂಶ ಎಷ್ಟಿದೆ ಎಂಬುದು ತಿಳಿದಿಲ್ಲ. ಲಾವಣ್ಯ ಕೊನೆಯದಾಗಿ ಮಿಸ್ ಪರ್ಫೆಕ್ಟ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಖ್ಯಾತಿಯ ಅಭಿಜಿತ್ ನಾಯಕನಾಗಿ ನಟಿಸಿದ್ದರು. ಮದುವೆಯ ನಂತರ ಲಾವಣ್ಯ ಮಾಡಿದ ಏಕೈಕ ಪ್ರಾಜೆಕ್ಟ್ ಇದು.
ಇನ್ನೊಂದೆಡೆ ನಿಹಾರಿಕಾ ನಿರ್ಮಾಪಕಿಯಾಗಿ, ನಟಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪಿಂಕ್ ಎಲಿಫೆಂಟ್ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾದ ಕಮಿಟಿ ಕುರ್ರಳ್ ಉತ್ತಮ ಯಶಸ್ಸು ಗಳಿಸಿತು. ಕಡಿಮೆ ಬಜೆಟ್ ನಲ್ಲಿ ನಿರ್ಮಾಣವಾದ ಈ ಚಿತ್ರ, ಭಾರೀ ಲಾಭ ಗಳಿಸಿತು. ಹೈದರಾಬಾದ್ ನಲ್ಲಿ ಕಚೇರಿ ತೆರೆದಿರುವ ನಿಹಾರಿಕಾ.. ಯುವ ನಿರ್ದೇಶಕರು, ಬರಹಗಾರರು, ನಟರೊಂದಿಗೆ ಹೊಸ ಪ್ರಾಜೆಕ್ಟ್ ಗಳನ್ನು ಪ್ಲಾನ್ ಮಾಡುತ್ತಿದ್ದಾರೆ.