ಇಬ್ಬರಿಗೂ 23 ವರ್ಷ: ನೀರಜ್‌ಗೆ ಹೋಲಿಸಿ ಆರ್ಯನ್ ಖಾನ್ ಟ್ರೋಲ್

Published : Oct 05, 2021, 09:31 AM ISTUpdated : Oct 05, 2021, 12:49 PM IST

ಬಾಲಿವುಡ್ ನಟ ಶಾರೂಖ್ ಪುತ್ರ ಸಿಕ್ಕಾಪಟ್ಟೆ ಟ್ರೋಲ್ ಇಬ್ರಿಗೂ ಒಂದೇ ವರ್ಷ, ನೀವು ನೀರಜ್‌ನಂತಾಗಿ, ಆರ್ಯನ್‌ನಂತಲ್ಲ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡ 23 ವರ್ಷದ ಸ್ಟಾರ್ ದಂಪತಿ ಪುತ್ರ

PREV
110
ಇಬ್ಬರಿಗೂ 23 ವರ್ಷ: ನೀರಜ್‌ಗೆ ಹೋಲಿಸಿ ಆರ್ಯನ್ ಖಾನ್ ಟ್ರೋಲ್

ಬಾಲಿವುಡ್ ನಟ ಶಾರೂಖ್ ಖಾನ್‌ನ ಪುತ್ರ ಆರ್ಯನ್ ಖಾನ್‌ನನ್ನು ಎನ್‌ಸಿಬಿ ಬಂಧಿಸಿದ ಬೆನ್ನಲ್ಲೇ ಇದೀಗ 23 ವರ್ಷದ ಸ್ಟಾರ್ ಕಿಡ್ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾನೆ. ಆರ್ಯನ್‌ನನ್ನು ಹೋಲಿಸಿ ಅವನಂತಾಗಬೇಡಿ ಎಂದು ಬಹಳಷ್ಟು ಟ್ರೋಲ್ ಪೇಜ್‌ಗಳು ಪೋಸ್ಟ್ ವೈರಲ್ ಮಾಡಿವೆ.

210

ಈಗಾಗಲೇ ಸಾಕಷ್ಟು ಟ್ರೋಲ್ ಆಗುತ್ತಿದ್ದು ಈಗ ಆರ್ಯನ್ ಖಾನ್‌ನನ್ನು(Aryan Khan) ಚಿನ್ನದ ಹುಡುಗ ನೀರಜ್ ಚೋಪ್ರಾ(Neeraj Chopra) ಜೊತೆ ಹೋಲಿಸಿ ಟ್ರೋಲ್ ಮಾಡಲಾಗುತ್ತಿದೆ. 23 ವರ್ಷದ ನೀರಜ್‌ನನ್ನು ನೋಡಿ 23 ವರ್ಷದ ಆರ್ಯನ್‌ನನ್ನು ನೋಡಿ ಎಂದು ಟ್ರೋಲ್ ಮಾಡಿದ್ದಾರೆ.

310

ತನ್ನ ಮಗನನ್ನು ಡ್ರಗ್ಸ್ ಸೇವಿಸಲು ಬಿಡುತ್ತೇನೆ ಎಂದು ಶಾರೂಖ್ ತಮಾಷೆಯಾಗಿ ಹೇಳಿದ್ದ ಹಳೆಯ ವಿಡಿಯೋ ತುಣುಕು ವೈರಲ್ ಆಗಿದ್ದು ನೆಟ್ಟಿಗರು ಲೆಜೆಂಡ್‌ಗಳು 23 ವರ್ಷದಲ್ಲಿ ಮಾಡಿದ ಸಾಧನೆಗಳ ಲಿಸ್ಟ್ ಮಾಡಿ ಹೋಲಿಕೆ ಮಾಡಿದ್ದಾರೆ.

410

ನೀರಜ್ ಚೋಪ್ರಾ 23 ವರ್ಷದ ವಯಸ್ಸಿನಲ್ಲಿ ಚಿನ್ನ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದು ಎಲ್ಲರಿಗೂ ಗೊತ್ತು. ಆರ್ಯನ್‌ ಖಾನ್‌ನನ್ನು ಇನ್ನೂ ಮಗು ಎಂದು ವಹಿಸಿಕೊಳ್ಳುವವರಿಗೆ ನೀರಜ್‌ನನ್ನು ತೋರಿಸಿ ಹೋಲಿಕೆ ಮಾಡಲಾಗುತ್ತಿದೆ.

510

23 ವರ್ಷದ ನೀರಜ್ ಚೊಪ್ರಾ ಚಿನ್ನ ಗೆದ್ದು ತನ್ನ ಪೋಷಕರನ್ನು ಅವರ ಕನಸಿನಂತೆ ವಿಮಾನದಲ್ಲಿ ಕರೆದುಕೊಂಡುಹೋಗಿದ್ದರು. ಆದರೆ ಇತ್ತ ಶಾರೂಖ್ (Shah rukh khan)ಮಗನಿಗೆ ಡ್ರಗ್ಸ್ ತೆಗೆದುಕೊಳ್ಳಲು ನನ್ನ ಅನುಮತಿ ಇದೆ ಎಂದಿದ್ದ ಹಳೆ ವಿಡಿಯೋ ಟ್ರೋಲ್ ಆಗಿದೆ.

610

23 ವರ್ಷದಲ್ಲಿಯೇ ಕ್ಯಾ. ವಿಕ್ರಮ್ ಬಾತ್ರಾ ಭಾರತದ ಸೇನೆಯನ್ನು ಲೆಫ್ಟಿನೆಂಟ್ ಆಗಿ ನಾಯಕತ್ವ ವಹಿಸಿ ಹೋರಾಡಿದ್ದರಿ. ಆದರೆ ಸುನಿಲ್ ಶೆಟ್ಟಿ ಪ್ರಕಾರ ಆರ್ಯನ್ ಇನ್ನೂ ಮಗು ಎಂದಿದ್ದಾರೆ ನೆಟ್ಟಿಗರು

710

ಬಾಲಿವುಡ್ ನಿರ್ದೇಶಕ ಸುನಿಲ್ ಶೆಟ್ಟಿ  ಆರ್ಯನ್‌ನ ಮೀಡಿಯಾ ಕವರೇಜ್ ನೋಡಿ, ಆತ ಮಗು ಎಂದು ಹೇಳಿ ಮೀಡಿಯಾ ಕವರೇಜ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನೆಟ್ಟಿಗರು ಆರ್ಯನ್‌ ವಯಸ್ಸು ಹೋಲಿಸಿ ಟ್ರೋಲ್ ಮಾಡಿದ್ದಾರೆ

810

ಕಾಲಿವುಡ್ ನಟ ಮಾಧವನ್(Madhavan) ಅವರ ಮಗನನ್ನು ಆರ್ಯನ್ ಖಾನ್ ಜೊತೆ ಹೋಲಿಕೆ ಮಾಡಲಾಗಿದೆ. ಎಲ್ಲವೂ ಮಕ್ಕಳನ್ನು ಬೆಳೆಸುವುದು ಮತ್ತು ಒಂದು ತಲೆಮಾರು ಇನ್ನೊಂದು ತಲೆಮಾರಿಗೆ ನೀಡುವ ಸಂಸ್ಕೃತಿ ಮತ್ತು ಮೌಲ್ಯಗಳಲ್ಲಿದೆ ಎಂದು ಆರ್ಯನ್‌ನನ್ನು ಟ್ರೋಲ್ ಮಾಡಲಾಗಿದೆ

910

23 ವರ್ಷದ ನೀರಜ್ ಚೋಪ್ರಾ ಭಾರತಕ್ಕಾಗಿ ಚಿನ್ನದ ಪದಕ ಗೆದ್ದಿದ್ದಾರೆ, ನಮಗೆಲ್ಲರಿಗೂ ಹೆಮ್ಮೆ ತಂದಿದೆ. 23 ವರ್ಷ ವಯಸ್ಸಿನ ಆರ್ಯನ್ ಖಾನ್ ಔಷಧಗಳ ಬಳಕೆ, ಮಾರಾಟ ಮತ್ತು ಖರೀದಿಗಾಗಿ ಎನ್‌ಸಿಬಿಯಿಂದ ಬಂಧಿಸಲಾಗಿದೆ ಎಂದಿದ್ದಾರೆ

1010

23 ವರ್ಷದವರನ್ನು ಮಗು ಎಂದು ಹೇಳಲು ಬಿಡಬೇಡಿ. ಮಕ್ಕಳು ದಯವಿಟ್ಟು ನಿಮ್ಮ ಆದರ್ಶ ಮಾದರಿಯನ್ನು ಬುದ್ಧಿವಂತಿಕೆಯಿಂದ ಆರಿಸಿ ಎಂದಿದ್ದಾರೆ ನೆಟ್ಟಿಗರು

ಐಷರಾಮಿ ಹಡಗಿನಲ್ಲಿ ಡ್ರಗ್ಸ್ ರೇವ್ ಪಾರ್ಟಿ: ಶಾರೂಖ್ ಮಗನ ವಿಚಾರಣೆ

click me!

Recommended Stories