ಬಾಸ್‌ ಲೇಡಿ ಲುಕ್‌ನಲ್ಲಿ ಕಾಣಿಸಿಕೊಂಡ ಪುಷ್ಪ ನಟಿ ಅನಸೂಯಾ: ಒಳಉಡುಪು ಸೂಪರ್ ಎಂದ ಫ್ಯಾನ್ಸ್‌!

First Published | Jun 30, 2024, 7:09 PM IST

'ಜಬರ್ದಸ್ತ್' ಕಾರ್ಯಕ್ರಮದ ಮೂಲಕ ಜನಪ್ರಿಯತೆ ಗಳಿಸಿ ಆ್ಯಂಕರ್ ಆಗಿ ಸ್ಟಾರ್ ಇಮೇಜ್ ಗಿಟ್ಟಿಸಿಕೊಂಡಿದ್ದ ಪುಷ್ಪ ಲೇಡಿ ವಿಲನ್ ಅನಸೂಯಾ ಭಾರದ್ವಾಜ್ ಮತ್ತೆ ಹಾಟ್‌ ಅವತಾರ ತಾಳಿದ್ದಾರೆ.
 

ಜಬರ್ದಸ್ತ್ ಕಾರ್ಯಕ್ರಮವನ್ನು ತೊರೆದ ನಂತರ ಆಂಕರ್ ಅನಸೂಯಾ ಅವರು ಜಬರ್ದಸ್ತ್ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವರು ತಮ್ಮ ಫಾಲೋವರ್ಸ್ ನಾಡಿಮಿಡಿತವನ್ನು ಹೆಚ್ಚಿಸಲು ತನ್ನ ಗ್ಲಾಮರಸ್ ಲುಕ್ ತೋರಿಸುವ ಹಾಟ್ ಲೇಡಿಯಾಗಿ ಬದಲಾಗಿದ್ದಾರೆ.

ಅನಸೂಯಾ ಭಾರದ್ವಾಜ್‌ ಕುರಿತು ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಕಿರುತೆರೆಯಲ್ಲಿ ಸದ್ದು ಮಾಡಿದ್ದ ಚೆಲುವೆ ಇದೀಗ ಬೆಳ್ಳಿತೆರೆ ಮೇಲೆ ಮಿಂಚುತ್ತಿದ್ದು, ಇತ್ತೀಚೆಗೆ ನಟಿ ಶೇರ್ ಮಾಡಿದ ಬೋಲ್ಡ್ ಮತ್ತು ಹಾಟ್ ಫೋಟೋಗಳು ಪಡ್ಡೆ ಹುಡುಗರನ್ನು ಹುಚ್ಚೆಬ್ಬಿಸುತ್ತಿವೆ. 

Tap to resize

ಅನಸೂಯಾ ಅವರ ಇತ್ತೀಚಿನ ಚಿತ್ರಗಳನ್ನು ನೋಡಿದ ಹುಡುಗರು ಮಳೆಗಾಲದಲ್ಲಿ ಬೇಸಿಗೆಯನ್ನು ನೋಡಿದಂತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಬ್ಬ ನೆಟ್ಟಿಗ ಅಸಭ್ಯವಾಗಿ ನಿಂದಿಸಿ ಪೋಸ್ಟ್ ಮಾಡಿದ್ದಾರೆ. 

ಇತ್ತೀಚೆಗೆ ನಟಿ ಯಾವ ಫೊಟೋ ಶೇರ್ ಮಾಡಿದರೂ ಕೂಡಾ ನೆಟ್ಟಿಗರು ಕಮೆಂಟ್ ಮಾಡುತ್ತಲೇ ಇದ್ದಾರೆ. ಯಾವುದೇ ಫೋಟೋ ಅಪ್ಲೋಟ್ ಮಾಡಿದರೂ ರಿಯಾಕ್ಟ್ ಮಾಡುತ್ತಿದ್ದಾರೆ. ಕೊನೆಗೆ ಅನಸೂಯಾ ತನ್ನ ಒಳಉಡುಪು ತೋರಿಸುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಜನರು ನಿಮ್ಮ ಒಳಉಡುಪು ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಿನಿಮಾ ನಟಿಯಾದ ನಂತರ ಆ್ಯಂಕರ್ ಅನಸೂಯಾ ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಗ್ಲಾಮರ್‌ನ ಡೋಸ್ ಹೆಚ್ಚಿಸಿಕೊಂಡು ತನ್ನ ಇತ್ತೀಚಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಗ್ಲಾಮರ್ ಇಂಡಸ್ಟ್ರಿಯಲ್ಲಿರುವ ಅನಸೂಯಾ ತಮ್ಮ ಬಾಡಿ ಶೇಪ್ ಕಾಪಾಡಿಕೊಳ್ಳಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ. ಇದರ ಭಾಗವಾಗಿ ವಯಸ್ಸಿಗೆ ಗೊತ್ತಿಲ್ಲದೆ ಮೈಕಟ್ಟು ಜೊತೆಗೆ ಗ್ಲಾಮರ್ ಮೆಂಟೇನ್ ಮಾಡುತ್ತಿದ್ದಾರೆ.

ಅನಸೂಯಾ ಕೈಯಲ್ಲಿ ಹಲವು ಪ್ರಾಜೆಕ್ಟ್‌ಗಳಿವೆ. ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸುತ್ತಿದ್ದಾರೆ. ಇತ್ತೀಚೆಗೆ, ಅನಸೂಯಾ ಅವರು ವಿಮಾನ ಚಿತ್ರದಲ್ಲಿ ವೇಶ್ಯೆಯ ಪಾತ್ರಕ್ಕಾಗಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ಅದೇ ರೀತಿ ಪೆಡಕಾಪು ಸಿನಿಮಾದಲ್ಲಿ ಅನಸೂಯಾ ಪಾತ್ರಕ್ಕೆ ಒಳ್ಳೆಯ ಅಂಕಗಳು ಬಂದಿವೆ.

ಸಿನಿಮಾಗಳ ಮೂಲಕ ಹೆಚ್ಚು ಹೈಲೈಟ್ ಆಗುತ್ತಿರುವ ಅನಸೂಯಾ ಭಾರದ್ವಾಜ್ ಈಗ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ. ಸದ್ಯ ಈ ಚೆಲುವೆ ‘ಹರಿಹರ ವೀರಮಲ್ಲು’, ‘ಪುಷ್ಪ 2’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ತಮಿಳಿನಲ್ಲಿ ‘ಫ್ಲ್ಯಾಶ್‌ಬ್ಯಾಕ್’ ಸೇರಿದಂತೆ ಕೆಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ.
 

Latest Videos

click me!