NCB ಆಫೀಸರ್ ಮೇಲೆಯೇ ಪತ್ತೆದಾರಿಕೆ: ಹಿಂಬಾಲಿಸ್ತಿರೋದ್ಯಾರು?

First Published | Oct 12, 2021, 12:50 PM IST
  • NCB ಅಧಿಕಾರಿಗಳ ಹಿಂದೆ ಬಿದ್ದಿರೋ ಕಂಗಳು ಯಾರದ್ದು ?
  • ಡ್ರಗ್ಸ್ ಕೇಸ್ ಹ್ಯಾಂಡಲ್ ಮಾಡ್ತಿರೋ ಆಫೀಸರ್ ಮೇಲೆ ಪತ್ತೆದಾರಿಕೆ

ಬಾಲಿವುಡ್ ಸ್ಟಾರ್ ಶಾರುಖ್ ಖಾನ್(Shah Rukh Khan) ಅವರ ಮಗನನ್ನು ಬಂಧಿಸಿರುವ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ(NCB) ಉನ್ನತ ಅಧಿಕಾರಿಯೊಬ್ಬರು ತಮ್ಮ ಮೇಲೆ ಬೇಹುಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

NCB ಡೈರೆಕ್ಟರ್ ಸಮೀರ್ ವಾಂಖೆಡೆ(Samir Wankhede) ಈ ತಿಂಗಳ ಆರಂಭದಲ್ಲಿ ಮುಂಬೈ(Mumbai) ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ದಾಳಿ ನಡೆಸಿದರು. ಇದರಲ್ಲಿ ಆರ್ಯನ್ ಖಾನ್ ಸೇರಿ 10ಕ್ಕೂ ಹೆಚ್ಚು ಜನರನ್ನು ಎನ್‌ಸಿಬಿ ಬಂಧಿಸಿದೆ.

Latest Videos


ಏಜೆನ್ಸಿಯ ಮೂಲಗಳು ಸಮೀರ್ ವಾಂಖೆಡೆ ಮತ್ತು ಹಿರಿಯ ಅಧಿಕಾರಿ ಮುತ್ತ ಜೈನ್ ಅವರ ಮೇಲೆ ಸ್ಪೈ ಮಾಡುವ ಬಗ್ಗೆ ದೂರು ನೀಡಲು ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ.

ಕೆಲವರು ಆತನ ಚಲನವಲನಗಳನ್ನು ಗಮನಿಸುತ್ತಿರುವುದನ್ನು ತಿಳಿದುಕೊಂಡಿದ್ದಾರೆ ಎಂದು ಅಧಿಕಾರಿ ದೂರಿದ್ದಾರೆ ಎನ್ನಲಾಗಿದೆ. ಇಬ್ಬರು ಪೋಲಿಸ್ ಅಧಿಕಾರಿಗಳು ಎಂದು ಹೇಳಿಕೊಂಡು, ಸಮೀರ್ ವಾಂಖೆಡೆ ಸತತ ಭೇಟಿ ನೀಡುವ ಸ್ಮಶಾನದಿಂದ ಸಿಸಿಟಿವಿ ಫೂಟೇಜ್ ಅನ್ನು ಪಡೆದಿದ್ದಾರೆ ಎನ್ನಲಾಗಿದೆ.

ವಾಂಖೆಡೆ ಅವರ ತಾಯಿ ಸಮಾಧಿ ಅದೇ ಸ್ಮಶಾನದಲ್ಲಿ ಮಾಡಿದ್ದರಿಂದ ನಿಯಮಿತವಾಗಿ ಅವರು ಅಲ್ಲಿಗೆ ಭೇಟಿ ನೀಡುತ್ತಾರೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ವಾಂಖೆಡೆ ನಿರಾಕರಿಸಿದ್ದು ಈ ವಿಷಯವು ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಆರೋಪಗಳ ಕುರಿತು ಮುತ ಜೈನ್ ನೀವು ಏನು ಕೇಳುತ್ತೀರೋ ಅದು ಈಗಾಗಲೇ ಪೇಪರ್‌ಗಳಲ್ಲಿದೆ. ನಾವು ಈಗಾಗಲೇ ಮಹಾರಾಷ್ಟ್ರ(Maharastra) ಪೊಲೀಸರೊಂದಿಗೆ ಮಾತನಾಡಿದ್ದೇವೆ. ನಾನು ಇನ್ನು ಮುಂದೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದಿದ್ದಾರೆ.

ಮೂರನೇ ಬಾರಿಗೆ ಆರ್ಯನ್ ಖಾನ್‌ಗೆ ಸೋಮವಾರ ಜಾಮೀನು ನಿರಾಕರಿಸಲಾಯಿತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಅಂತರಾಷ್ಟ್ರೀಯ ಡ್ರಗ್ ಕಾರ್ಟೆಲ್ ಅನ್ನು ಪತ್ತೆಹಚ್ಚಲು ಇತರ ಆರೋಪಿಗಳೊಂದಿಗೆ ಆತನನ್ನು ಪ್ರಶ್ನಿಸಬೇಕಾಗಿದೆ ಎಂದು ಸಂಸ್ಥೆ ಜಾಮೀನು ನೀಡದಂತೆ ವಾದಿಸಿತ್ತು.

ಆರ್ಯನ್ ಖಾನ್, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ಇತರ ಆರು ಮಂದಿಯನ್ನು ಕಳೆದ ವಾರ ಬಂಧಿಸಲಾಗಿತ್ತು. ಆರ್ಯನ್ ಖಾನ್ ಮೇಲೆ ಏಜೆನ್ಸಿಯು ಯಾವುದೇ ಔಷಧಗಳನ್ನು ಕಂಡುಕೊಂಡಿಲ್ಲ, ಆದರೆ ಆತನ ವಾಟ್ಸಾಪ್ ಚಾಟ್‌ಗಳು ಅಪರಾಧವೆಂದು ಹೇಳಿದೆ.

click me!