ಸಮಂತಾರಿಂದ ಬೇರೆಯಾಗಿ ಕೆಲವೇ ದಿನ: ಲಕ್ಷುರಿ ಮನೆ ಖರೀದಿಸಿದ ನಾಗ ಚೈತನ್ಯ

Published : Oct 12, 2021, 11:44 AM ISTUpdated : Oct 12, 2021, 01:10 PM IST

ಪತ್ನಿ ಸಮಂತಾರಿಂದ ಬೇರೆಯಾಗಿ ಹೊಸ ಮನೆ ಖರೀದಿಸಿದ ನಾಗ ಚೈತನ್ಯ ಹಳೆಯ ಮನೆಯಲ್ಲೇ ಇದ್ದಾರೆ ಸಮಂತಾ

PREV
16
ಸಮಂತಾರಿಂದ ಬೇರೆಯಾಗಿ ಕೆಲವೇ ದಿನ: ಲಕ್ಷುರಿ ಮನೆ ಖರೀದಿಸಿದ ನಾಗ ಚೈತನ್ಯ

ಸಮಂತ ಅಕ್ಕಿನೇನಿ(Samantha) ಮತ್ತು ನಾಗ ಚೈತನ್ಯ ಅಕ್ಟೋಬರ್ 2 ರಂದು ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದ್ದಾರೆ. ಆಗಿನಿಂದ ದೂರವಾದ ದಂಪತಿಗಳು ಪ್ರತಿ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಅವರ ಪ್ರತಿ ಅಪ್ಡೇಟ್‌ಗಳೂ ಸುದ್ದಿಯಾಗುತ್ತಲೇ ಇವೆ.

26

MIRCHI9 ಪ್ರಕಾರ ಸಮಂತಾ ತಮ್ಮ ಹಳೆಯ ಮನೆಯಲ್ಲೇ ಉಳಿದುಕೊಂಡಿದ್ದರೆ ನಾಗ ಚೈತನ್ಯ(Naga Chaitanya) ಅವರು ತಾವಾಗಿಯೇ ಹೊಸ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.

36

ನಾಗ ಚೈತನ್ಯ ಹೊಸ ಮನೆಯನ್ನು ಹೈದರಾಬಾದಿನ ಒಂದು ದುಬಾರಿ ಏರಿಯಾದಲ್ಲಿ ಖರೀದಿಸಿದ್ದಾರೆ. ಚೈತನ್ಯರ ಹೊಸ ಮನೆ ಜುಬಿಲಿ ಹಿಲ್ಸ್ ಪ್ರದೇಶದಲ್ಲಿದೆ. ಪ್ರಸ್ತುತ ನವೀಕರಿಸಲಾಗುತ್ತಿದೆ ಎಂದು ಹೇಳಲಾಗಿದೆ.

46

ಒಮ್ಮೆ ನವೀಕರಣ ಕಾರ್ಯ ಮುಗಿದ ನಂತರ ನಾಗ ಚೈತನ್ಯ ಮಾತ್ರ ಅಲ್ಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಸಮಂತಾ ಗಚಿಬೌಲಿ ಭವನ ತಾವೇ ಇಟ್ಟುಕೊಳ್ಳುತ್ತಾರೆ ಎನ್ನಲಾಗಿದೆ.

56

ಕೆಲವು ದಿನಗಳ ಹಿಂದೆ ಸಮಂತಾರಿಂದ ಬೇರ್ಪಟ್ಟ ನಂತರ ನಾಗ ಚೈತನ್ಯ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ನಟಿ ಪೂಜಾ ಹೆಗ್ಡೆ ಮತ್ತು ಅಖಿಲ್ ಅಕ್ಕಿನೇನಿ ಅವರ ಮುಂಬರುವ 'ಮೋಸ್ಟ್ ಎಲಿಜಿಬಲ್ ಬ್ಯಾಚುಲರ್' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

66

ಪತಿಯಿಂದ ದೂರವಾದ ನಂತರ ಮಾಧ್ಯಮಗಳಲ್ಲಿ ತನ್ನ ವಿರುದ್ಧ ಹರಡುತ್ತಿರುವ ಸುಳ್ಳು ವದಂತಿಗಳ ಕುರಿತು ಸಮಂತಾ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. ಆಧಾರ ರಹಿತ ಊಹಾಪೋಹಗಳನ್ನು ಹರಡುತ್ತಿರುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

click me!

Recommended Stories