ಹೆರಿಗೆ ಆಯ್ತು, ಈಗ ಬಾಯ್‌ಫ್ರೆಂಡ್ ಜೊತೆ ಮದ್ವೆ ಸೂಚನೆ ಕೊಟ್ಟ ಸಂಸದೆ ನುಸ್ರತ್

Published : Oct 12, 2021, 10:25 AM ISTUpdated : Oct 12, 2021, 12:57 PM IST

ಬಂಗಾಳಿ ನಟ ಯಶ್‌ ಜೊತೆ ಸಂಸದೆ ನುಸ್ರತ್‌ ವಿವಾಹವಾದ ಸುಳಿವು ನಟಿ, ಸಂಸದೆಯ ಮಗುವಿಗೆ ತಂದೆ ಯಾರೆಂಬ ಪ್ರಶ್ನೆಗೆ ಉತ್ತರ ಬಾಯ್‌ಫ್ರೆಂಡ್ ಬರ್ತ್‌ಡೇ ಆಚರಿಸಿದ ನಟಿ

PREV
17
ಹೆರಿಗೆ ಆಯ್ತು, ಈಗ ಬಾಯ್‌ಫ್ರೆಂಡ್ ಜೊತೆ ಮದ್ವೆ ಸೂಚನೆ ಕೊಟ್ಟ ಸಂಸದೆ ನುಸ್ರತ್

ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನಟಿ, ಬಂಗಾಳದ ಟಿಎಂಸಿ ಸಂಸದೆ ನುಸ್ರತ್‌ ಜಹಾನ್‌(Nusrat Jahan), ತಾವು ನಟ ಯಶ್‌ದಾಸ್‌ ಗುಪ್ತಾ ಜೊತೆ ವಿವಾಹವಾಗಿರುವ ಸುಳಿವೊಂದನ್ನು ನೀಡಿದ್ದಾರೆ.

27
Nusrat Jahan

ಭಾನುವಾರ ಯಶ್‌ದಾಸ್‌ ಹುಟ್ಟುಹಬ್ಬದ ಪ್ರಯುಕ್ತ ನುಸ್ರತ್‌ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹುಟ್ಟುಹಬ್ಬ ಆಚರಿಸಿದ ಫೋಟೋ ಹಂಚಿಕೊಂಡಿದ್ದಾರೆ.

37

ಈ ವೇಳೆ ಸಿದ್ದಪಡಿಸಲಾಗಿದ್ದ ಕೇಕ್‌ ಮೇಲೆ ಹಸ್ಬೆಂಡ್‌ ಮತ್ತು ಡ್ಯಾಡಿ ಎಂದು ಬರೆಯಲಾಗಿತ್ತು. ಇದು ತಾವು ಈಗಾಗಲೇ ಯಶ್‌ ಅವರನ್ನು ವಿವಾಹವಾಗಿರುವ ಕುರಿತು ನುಸ್ರತ್‌ ನೀಡಿರುವ ಸುಳಿವು ಎಂದು ಹೇಳಲಾಗಿದೆ.

47

ಇನ್ನು ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆಯ ಹೆಸರಿನ ಕಾಲಂನಲ್ಲಿ ವೈ.ದಾಸ್‌ಗುಪ್ತಾ ಎಂದ ದಾಖಲಿಸಿದ್ದರು. ಆ.26ರಂದು ನುಸ್ರತ್‌ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.

57

ಇದಕ್ಕೂ ಕೆಲ ತಿಂಗಳುಗಳ ಮುಂಚಿತವಾಗಿ ಅವರು ತನ್ನ ಪತಿಯಾದ ನಿಖಿಲ್‌ ಜೈನ್‌ ಅವರಿಂದ ಪ್ರತ್ಯೇಕವಾಗಿದ್ದರು. ಹೀಗಾಗಿ ಅವರ ಮಗುವಿನ ತಂದೆ ಯಾರು ಎಂಬ ಪ್ರಶ್ನೆ ಉದ್ಭವವಾಗಿತ್ತು.

67

ಆಗಸ್ಟ್ 26 ರಂದು ನುಸ್ರತ್ ಜಹಾನ್ ಗಂಡು ಮಗುವನ್ನು ಸ್ವಾಗತಿಸಿದರು. ನುಸ್ರತ್ ಜಹಾನ್ ಮತ್ತು ಆಕೆಯ ಪತಿ ನಿಖಿಲ್ ಜೈನ್ ಕೆಲವು ತಿಂಗಳ ಹಿಂದೆ ಬೇರೆಯಾದರು. ಈ ವರ್ಷದ ಆರಂಭದಲ್ಲಿ, ನುಸ್ರತ್ ಜಹಾನ್ ತನ್ನ ಮದುವೆಯು ಭಾರತೀಯ ಕಾನೂನಿನ ಪ್ರಕಾರ ಮಾನ್ಯವಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

77

ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಅವರು 2019 ರಲ್ಲಿ ಟರ್ಕಿಯ ಬೋಡ್ರಮ್‌ನಲ್ಲಿ ಎರಡು ವಿವಾಹ ಸಮಾರಂಭಗಳಲ್ಲಿ ಮದುವೆಯಾದರು. ಬೇರ್ಪಟ್ಟ ನಂತರ, ನುಸ್ರತ್ ಜಹಾನ್ ಮತ್ತು ಯಶ್ ದಾಸ್‌ಗುಪ್ತಾ ತಮ್ಮ ಪ್ರಣಯದಿಂದ ಸುದ್ದಿಯಾದರು.

click me!

Recommended Stories