ನಯನತಾರಾ ತುಂಬಾ ಖಾಸಗಿ ವ್ಯಕ್ತಿ ಮತ್ತು ಎಂದಿಗೂ ಹೆಚ್ಚಿನ ಸಂದರ್ಶನಗಳನ್ನು ನೀಡುವುದಿಲ್ಲ ಅಥವಾ ಚಲನಚಿತ್ರ ಪ್ರಚಾರ ಅಥವಾ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ಆದಾಗ್ಯೂ, ಇತ್ತೀಚೆಗೆ ಅವರು ಚಾಟ್ ಶೋನಲ್ಲಿ ಕಾಣಿಸಿಕೊಂಡರು. ಅಲ್ಲಿನಯನತಾರಾ ಚಲನಚಿತ್ರ ನಿರ್ಮಾಪಕ ಗೆಳೆಯ ವಿಘ್ನೇಶ್ ಶಿವನ್ ಜೊತೆ ತಮ್ಮ ನಿಶ್ಚಿತಾರ್ಥವನ್ನು ದೃಢಪಡಿಸಿದರು.
ಪ್ರಸ್ತುತ ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರ ಜೋಳಿಗೆಯಲ್ಲಿ ದೊಡ್ಡ ಬಜೆಟ್ ಚಿತ್ರಗಳಿವೆ. ಆದ್ದರಿಂದ ಮದುವೆಯ ನಂತರ ಅವರು ನಟನೆಯನ್ನು ಬಿಡುತ್ತಾರಾ ಎಂದು ಅಭಿಮಾನಿಗಳು ತಿಳಿಯಲು ಬಯಸುತ್ತಾರೆ. ಇಲ್ಲಿದೆ ಉತ್ತರ.
ಈಗ ಅನೇಕ ವರದಿಗಳು ಬಂದಿವೆ. ಅವುಗಳು ನಟಿಯ ವೈಯಕ್ತಿಕ ಜೀವನ ಮತ್ತು ಮದುವೆಯ ಕೆಲವು ವಿವರಗಳನ್ನು ಹಂಚಿಕೊಂಡಿವೆ. ನಯನತಾರಾ ಮಡುವೆಯ ನಂತರ ಚಿತ್ರಗಳನ್ನು ತೊರೆಯುತ್ತಾರೆಯೇ ಎಂಬ ಊಹಾಪೋಹಗಳು ಹರಿದಾಡುತ್ತಿವೆ.
ಅನೇಕ ವರದಿಗಳು ಈ ಕಪಲ್ ತಮ್ಮ ಮದುವೆಯನ್ನು ಡಿಸೆಂಬರ್ ಅಥವಾ 2022 ರ ಆರಂಭದಲ್ಲಿ ಪ್ಲಾನ್ ಮಾಡಿರುವುದಾಗಿ ಹೇಳುತ್ತವೆ. ಆದಾರೆ, ನಯನತಾರಾ ಮತ್ತು ವಿಘ್ನೇಶ್ ಪ್ರಸ್ತುತ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್ ಪ್ರಸ್ತುತ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.ಶಾರುಖ್ ಖಾನ್ ಜೊತೆಗಿನ ಮುಂದಿನ ಚಿತ್ರದ ಶೂಟಿಂಗ್‌ಗಾಗಿ ನಯನತಾರಾ ಪ್ರಸ್ತುತ ಪುಣೆಯಲ್ಲಿ ಇದ್ದಾರೆ. ಇದು ಅಟ್ಲೀ ನಿರ್ದೇಶನದ ಪ್ಯಾನ್-ಇಂಡಿಯಾ ಚಿತ್ರವಾಗಿದೆ.
Nayanthara
ಈಗ, ನಯನತಾರಾ ನಟನೆಯ ನಂತರ ಚಿತ್ರಗಳನ್ನು ಬಿಡುತ್ತಾರೆ ಮತ್ತು ಆಕೆಯ ಮದುವೆಯ ನಂತರ ಅವಳು ಹೊಸ ಕೆಸಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆಎಂದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ತೆಲುಗು ಸಿನಿಮಾ.ಕಾಂನಲ್ಲಿನ ವರದಿಯು ಮದುವೆಯ ನಂತರ ನಟಿ ಚಿತ್ರಗಳನ್ನು ಮಾಡುವುದ್ದಿಲ್ಲ ಎಂಬುದನ್ನು ತಿರಸ್ಕರಿಸಿದೆ.
ವರದಿಯಲ್ಲಿ ನಯನತಾರಾ ಸ್ವತಃ ವರದಿಗಳನ್ನು ನಿರಾಕರಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ನಯನತಾರಾ ಒಮ್ಮೆ ವಿಘ್ನೇಶ್ ಶಿವನ್ ಬಗ್ಗೆ ಮಾತನಾಡುತ್ತಾ, ಫ್ಯಾಮಿಲಿ ಬಗ್ಗೆ ಶಿವನ್‌ಗೆ ಇರುವ ಕಾಳಜಿ ಮತ್ತು ನಟಿಯನ್ನು ಪ್ರೀತಿಸುವ ರೀತಿಯನ್ನು ತುಂಬಾ ಇಷ್ಟಪಟ್ಟರು ಎಂದು ಹೇಳಿದ್ದಾರೆ.
ಅವರ ಮತ್ತು ವಿಘ್ನೇಶ್ ಶಿವನ್ ಸಂಬಂಧಕ್ಕೆ ಆರು ವರ್ಷಗಳಿಗಿಂತಲೂ ಹೆಚ್ಚಿನ ಸಮಯವಾಗಿದೆ ಮತ್ತು ಅವರ ಪ್ರೀತಿ ಬದಲಾಗಿಲ್ಲ ಎಂದು ಎಂದು ನಯನತಾರಾ ಉಲ್ಲೇಖಿಸಿದ್ದಾರೆ. ನಟಿ ಇತ್ತೀಚಿಗೆ ವಿಜಯ್ ಸೇತುಪತಿ ಮತ್ತು ಸಮಂತಾ ಅಕ್ಕಿನೇನಿ ಜೊತೆ ಕಾತು ವಾಕುಲಾ ರೆಂಡು ಕಾದಲ್ ಚಿತ್ರೀಕರಣ ಮುಗಿಸಿದ್ದಾರೆ.
ನಯನತಾರಾ ಮುಂದಿನ ದಿನಗಳಲ್ಲಿ ರಜನಿಕಾಂತ್ ಜೊತೆ ಅಣ್ಣತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮೀನಾ, ಖುಷ್ಬು, ಕೀರ್ತಿ ಸುರೇಶ್, ಜಾಕಿ ಶ್ರಾಫ್ ಸಹ ಜೊತೆಗೆ ಇದ್ದಾರೆ. ಚಿರಂಜೀವಿ ಜೊತೆ ಗಾಡ್ ಫಾದರ್ ಎಂಬ ಚಿತ್ರಕ್ಕೆ ಮತ್ತು ಪೃಥ್ವಿರಾಜ್ ಸುಕುಮಾರನ್ ಜೊತೆ ಮಲಯಾಳಂ ಚಿತ್ರಕ್ಕೂ ಸಹ ನಯನತಾರಾ ಸಹಿ ಹಾಕಿದ್ದಾರೆ ಎಂದು ವರದಿಗಳು ಇವೆ.