ಯಾಮಿ-ಜಾಕಿ ಯಾರು ಹೆಚ್ಚು ಚಂದ ? ಮಾಧುರಿ ಕೊಟ್ಟ ಉತ್ತರ ಇದು

Published : Sep 10, 2021, 12:53 PM ISTUpdated : Sep 10, 2021, 05:52 PM IST

ಡ್ಯಾನ್ಸ್ ದಿವಾನೆ ಸ್ಟೇಜ್‌ನಲ್ಲಿ ಬಾಲಿವುಡ್ ಸುಂದರಿಯರು ಮಾಧುರಿ, ಜಾಕಿ, ಯಾಮಿಯಿಂದ ಕಳೆಗಟ್ಟಿದ ರಿಯಾಲಿಟಿ ಶೋ

PREV
19
ಯಾಮಿ-ಜಾಕಿ ಯಾರು ಹೆಚ್ಚು ಚಂದ ? ಮಾಧುರಿ ಕೊಟ್ಟ ಉತ್ತರ ಇದು

ಬಾಲಿವುಡ್‌ನ ಖ್ಯಾತ ನಟಿಯರಾದ ಮಾಧುರಿ ದೀಕ್ಷಿತ್, ಜಾಕ್ವೆಲಿನ್ ಫರ್ನಾಂಡಿಸ್, ಯಾಮಿ ಗೌತಮ್ ಡ್ಯಾನ್ಸ್ ದಿವಾನೆ ಸ್ಟೇಜ್‌ನಲ್ಲಿ ಮಿಂಚಿದ್ದಾರೆ. ಒಬ್ಬರಿಗಿಂತ ಒಬ್ಬರು ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

29

ಮುಂಬರುವ ಡ್ಯಾನ್ಸ್ ದೀವಾನೆ 3 ರ ಎಪಿಸೋಡ್ ತಂಡವು ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಿದೆ. ಬಾಲಿವುಡ್ ತಾರೆಯರಾದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಯಾಮಿ ಗೌತಮ್ ಅವರು ತಮ್ಮ ಮುಂಬರುವ ಚಿತ್ರ ಭೂತ್ ಪೋಲಿಸ್ ಪ್ರಚಾರಕ್ಕೆ ಆಗಮಿಸಲಿದ್ದಾರೆ.

39

ಈ ಕಾರ್ಯಕ್ರಮದಲ್ಲಿ ಮಾಧುರಿ ದೀಕ್ಷಿತ್, ಧರ್ಮೇಶ್ ಯೆಲಾಂಡೆ ಮತ್ತು ತುಷಾರ್ ಕಾಲಿಯಾ ತೀರ್ಪುಗಾರರಾಗಿರುತ್ತಾರೆ. ಸಖತ್ ಎಕ್ಸೈಟಿಂಗ್ ಆಗಿದೆ ಈ ಎಪಿಸೋಡ್.

49

ವಿನೋದ ನೃತ್ಯಕ್ಕಾಗಿ ಹೋಸ್ಟ್ ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಅವರೂ ಈ ಸಂಭ್ರಮದಲ್ಲಿ ಸೇರುವುದಲ್ಲದೆ, ಯಾಮಿ ಮತ್ತು ಜಾಕ್ವೆಲಿನ್ ಕೂಡ ಡ್ಯಾನ್ಸ್ ದೀವಾನೆ ಸ್ಪರ್ಧಿಗಳೊಂದಿಗೆ ಮಾತನಾಡುತ್ತಾರೆ.

59

ಜನಪ್ರಿಯ ನರ್ತಕಿ ಪಿಯೂಷ್ ಗುರ್ಭೇಲೆ ಅವರ ಜೊತೆ ಹೆಜ್ಜೆ ಹಾಕುವ ಅವಕಾಶ ಕೂಡ ಸಿಗಲಿದೆ. ಇಬ್ಬರು ನಟರು ಕೂಡ ಅವರ ಗಮನ ಸೆಳೆಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

69

ಯಾಮಿ ಆತನಿಗೆ ತಮ್ಮಿಬ್ಬರಲ್ಲಿ ಇಬ್ಬರ ನಡುವೆ ಮುದ್ದಾಗಿ ಕಾಣುತ್ತಾರೆ ಎಂದು ಕೇಳಿದ್ದಾರೆ. ಇದು ಕಾರ್ಯಕ್ರಮದ ಫನ್ ಇನ್ನಷ್ಟು ಹೆಚ್ಚಿಸಿದೆ.

79

ಯಾಮಿಯ ಕಣ್ಣುಗಳು ಸುಂದರವಾಗಿದ್ದರೂ, ಜಾಕ್ವೆಲಿನ್ ನಗು ಅವನಿಗೆ ಇಷ್ಟವಾಗುತ್ತದೆ ಎಂದು ಪಿಯೂಷ್ ಉತ್ತರಿಸಿದ. ಎಲ್ಲಾ ಮಹಿಳೆಯರಲ್ಲಿ ಜಾಕ್ವೆಲಿನ್ ಇಂದು ಸುಂದರವಾಗಿ ಕಾಣುತ್ತಿದ್ದಾರೆ ಎಂದಿದ್ದಾರೆ.

89

ಮನೆಯ ಹುಡುಗಿಯಾದ ನನಗೆ ಯಾರು ಮೆಚ್ಚುಗೆ ವ್ಯಕ್ತಪಡಿಸುತ್ತಿಲ್ಲ ಎಂದು ಮಾಧುರಿ ಹೇಳಿದ್ದು ಎಲ್ಲರನ್ನು ನಗಿಸಿದೆ. ಮೂವರೂ ಸುಂದರವಾಗಿ ಕಾಣುತ್ತಿದ್ದರು

99

ಮಾಧುರಿ ರೆಡ್ ಸೀರೆಯುಟ್ಟಿದ್ದರೆ, ಮಾಧುರಿ ದೀಕ್ಷಿತ್ ಮಾಹಾರಾಷ್ಟ್ರದ ಸಂಪ್ರದಾಯಿಕ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಾಮಿ ಪಿಂಕ್ ಝರಿ ಸೀರೆಯಲ್ಲಿ ಮಿಂಚಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories