ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಜೋಶ್' ನಟಿ ಶಮ್ನಾ; ಹುಡುಗ ಯಾರು? ಇಲ್ಲಿದೆ ಸಂಪೂರ್ಣ ವಿವರ

Published : Oct 25, 2022, 09:53 AM IST

ಜೋಶ್ ಸಿನಿಮಾ ಖ್ಯಾತಿಯ ನಟಿ ಪೂರ್ಣಾ ಅಲಿಯಾಸ್​ ಶಮ್ನಾ ಕಾಸಿಮ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದುಬೈ ಮೂಲದ ಉದ್ಯಮಿ ಜೊತೆ ಶಮ್ನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಮ್ನಾ ಜೋಡಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಅಭಿನಂದನೆ ತಿಳಿಸುತ್ತಿದ್ದಾರೆ. 

PREV
18
ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಜೋಶ್' ನಟಿ ಶಮ್ನಾ; ಹುಡುಗ ಯಾರು? ಇಲ್ಲಿದೆ ಸಂಪೂರ್ಣ ವಿವರ

ಜೋಶ್ ಸಿನಿಮಾ ಖ್ಯಾತಿಯ ನಟಿ ಪೂರ್ಣಾ ಅಲಿಯಾಸ್​ ಶಮ್ನಾ ಕಾಸಿಮ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದುಬೈ ಮೂಲದ ಉದ್ಯಮಿ ಜೊತೆ ಶಮ್ನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಶಮ್ನಾ ಜೋಡಿಗೆ ಅಭಿಮಾನಿಗಳು ಮತ್ತು ಸ್ನೇಹಿತರು ಅಭಿನಂದನೆ ತಿಳಿಸುತ್ತಿದ್ದಾರೆ. 

28

ಅಂದಹಾಗೆ ಇತ್ತೀಚಿಗಷ್ಟೆ ಶಮ್ನಾ ಮದುವೆ ಆಗುತ್ತಿರುವ ಬಗ್ಗೆ ಬಹಿರಂಗ ಪಡಿಸಿದ್ದರು. ಉದ್ಯಮಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದರು. ಆದರೆ ದಿನಾಂಕ ಬಹಿರಂಗ ಪಡಿಸಿರಲಿಲ್ಲ. ಇದೀಗ ಶಾನಿದ್ ಆಸಿಫ್ ಅಲಿ ಜೊತೆ ಮದುವೆಯಾಗಿದ್ದಾರೆ. 

38

ಅಂದಹಾಗೆ ಶಮ್ನಾ ಮತ್ತು ಶಾನಿದ್ ಆಸಿಫ್ ಅಲಿ ಮದುವೆ ದುಬೈನಲ್ಲಿ ನೆರವೇರಿದೆ. ಸೋಮವಾರ (ಅಕ್ಟೋಬರ್ 24) ರಾತ್ರಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. 

48

ನಟಿ ಪೂರ್ಣ ಮದುವೆಯ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶಮ್ನಾ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮುಸ್ಲಿಂ ಸಂಪ್ರದಾಯದಂತೆ ಶಮ್ನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಂಪು ಬಣ್ಣದ ಜೆರಿಯ ಬಿಳಿ ಮತ್ತು ಗೋಲ್ಡನ್ ಬಣ್ಣದ ಸೀರೆಯಲ್ಲಿ ಶಮ್ನಾ ಕಂಗೊಳಿಸುತ್ತಿದ್ದರು. 

58

ಇನ್ನು ಸಿನಿಮಾ ಬಗ್ಗೆ ಹೇಳುವುದಾರೆ ಶಮ್ನಾ ಬಹುಭಾಷೆಯಲ್ಲಿ ಮಿಂಚಿದ್ದಾರೆ. 2004ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಶಮ್ನಾ ಮಲಯಾಳಂನ ಮಂಜು ಪೋಲೂರು ಪೆಂಕುಟ್ಟಿ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. ಈ ಸಿನಿಮಾದಲ್ಲಿ ಧನ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

68

ತೆಲುಗಿನ ಶ್ರೀಮಹಾಲಕ್ಷ್ಮಿ, ತಮಿಳಿನ ಕೊಡೈಕನಾಲ್ ಕನ್ನಡದ ಜೋಶ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಮಿಂಚಿದರು. ಕನ್ನಡದ ಜೋಶ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿತು. ಈ ಸಿನಿಮಾ ಬಳಿಕ ದೊಡ್ಡ ಸ್ಟಾರ್ ಆದರು.

78

ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲಿ ಪೂರ್ಣ ನಟಿಸಿದ್ದರು. ಈ ಸಿನಿಮಾ ಮೂಲಕ ಶಮ್ನಾ ಅನೇಕ ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ ಮಿಂಚಿದರು. ಈ ಸಿನಿಮಾ ಪೂರ್ಣಗೆ ಮತ್ತೆ ದೊಡ್ಡ ಮಟ್ಟದ ಖ್ಯಾತಿಗಳಿಸಿದರು.

88

ಸದ್ಯ ಪೂರ್ಣ ಬಳಿ ಸಾಲು ಸಾಲು ಸಿನಿಮಾಗಳಿವೆ. ಸಿನಿಮಾಗಳ ಬ್ಯುಸಿಯ ನಡುವೆಯೂ ಪೂರ್ಣ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆ ಬಳಿಕವೂ ಸಿನಿಮಾಗಳಲ್ಲಿ ಸಕ್ರೀಯರಾಗಿರಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. 

Read more Photos on
click me!

Recommended Stories