ಈಗ ನೆಟ್ಟಿಗರು ಅದೇನು ಕಾಮೆಂಟ್ ಮಾಡ್ತಾರೆ ನೋಡ್ಬೇಕು ಅನ್ನೋ ಕತೂಹಲ ಸಹಜವಾಗಿ ಹಲವರಲ್ಲಿ ಮೂಡಿದೆ. ಕಾರಣ, ರಶ್ಮಿಕಾ ಅವರು ಪ್ರೀತಿಯ ಬಗ್ಗೆ ವಿಭಿನ್ನ ಹೇಳಿಕೆ ನೀಡಿದ್ದಾರೆ. ನಿಮಗೆ ರಶ್ಮಿಕಾ ಮಾತು ಇಷ್ಟವಾಯ್ತಾ ಇಲ್ವಾ?
ಕನ್ನಡತಿ, ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಮಾತನ್ನಾಡಿರುವ ಸಂದರ್ಶನದ ತುಣುಕೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅದನ್ನು ನೋಡಿದಾಗ 'ರಶ್ಮಿಕಾ ಬಹಳಷ್ಟು ಜನರು ಅಂದುಕೊಂಡಂತಿಲ್ಲ, ಅವರ ನಿಜವಾದ ವ್ಯಕ್ತಿತ್ವ ಬೇರೆಯೇ ಅಗಿದೆ ಎಂಬುದು ಅರಿವಿಗೆ ಬರುತ್ತದೆ. ಹಾಗಿದ್ರೆ ಅದರಲ್ಲಿ ಅವರೇನು ಹೇಳದ್ದಾರೆ? ನೋಡಿ..
210
ಲವ್ ಬಗ್ಗೆ ರಶ್ಮಿಕಾ ಮಾತು ವೈರಲ್!
ನಟಿ ರಶ್ಮಿಕಾ ಮಂದಣ್ಣ ಅವರನ್ನು ಸಂದರ್ಶನ ಮಾಡುತ್ತಿರುವ ಸಂದರ್ಶಕಿ 'ಇತ್ತೀಚೆಗೆ ಹುಡುಗ-ಹುಡುಗಿಯರು ಬೀಳಬಾರದ ಕೆಟ್ಟ ಸಂಬಂಧದಲ್ಲಿ ಬಿದ್ದಿದ್ದಾರೆ ಅಲ್ಲವೇ?' ಎಂದು ನ್ಯಾಷನಲ್ ಕ್ರಶ್ ನಟಿಗೆ ಕೇಳಿದ್ದಾರೆ. ಅದಕ್ಕೆ ರಶ್ಮಿಕಾ ಕೂಲಾಗಿ ನಗುತ್ತ ಉತ್ತರಿಸಿದ್ದಾರೆ.
310
ಲವ್ ಬಗ್ಗೆ ರಶ್ಮಿಕಾ ಮಾತು ವೈರಲ್!
'ನನ್ನ ಪ್ರಕಾರ, ಗಂಡು-ಹೆಣ್ಣಿನ ಲವ್ ಸಂಬಂಧ ಪ್ರಪಂಚದಲ್ಲಿ ತುಂಬಾ ಉತ್ತಮವಾದ ಸಂಬಂಧ' ಎಂದು ಹೇಳುವ ಮೂಲಕ ಶುರುವಿನಲ್ಲೇ ತಿರುಗೇಟು ಕೊಟ್ಟಿದ್ದಾರೆ. ಬಳಿಕ, ತಮ್ಮ ಮಾತಿಗೆ ವಿವರಣೆ ಎಂಬಂತೆ.. 'ನಾನು ಹೇಳುತ್ತಿರುವದು ಏನೆಂದರೆ, ಎರಡು ಹೃದಯಗಳ ಪ್ರೀತಿ ಎಂಬ ಭಾವನೆ ತುಂಬಾ ಮಧುರವಾದದ್ದು ಹಾಗೂ ತುಂಬಾ ಮೌಲ್ಯಯುತವಾಗಿದ್ದು.
ಎರಡು ಹೃದಯಗಳು ಲವ್ ಎಂಬ ಎಮೋಶನ್‌ಗೆ ಒಳಗಾಗಿ ಒಬ್ಬರ ಬಗೆಗೆ ಮತ್ತೊಬ್ಬರು ಕೇರ್ ತೆಗೆದುಕೊಳ್ಳುವುದು ಪ್ರಪಂಚದ ಅತ್ಯದ್ಭುತ ಸಂಬಂಧಗಳಲ್ಲಿ ಒಂದು.. ಪ್ರೀತಿ ಎನ್ನುವ ಭಾವ ತುಂಬಾ ಮಧುರ ಹಾಗೂ ಅತ್ಯಗತ್ಯವಾಗಿದ್ದು. ಆದರೆ ಜನರು ತುಂಬಾ ಕಾಂಪ್ಲಿಕೇಟೆಡ್' ಎಂದಿದ್ದಾರೆ.
510
ಲವ್ ಬಗ್ಗೆ ರಶ್ಮಿಕಾ ಮಾತು ವೈರಲ್!
ಹೆಣ್ಣು ಹಾಗೂ ಗಂಡು ಇಬ್ಬರೂ ಎರಡು ವಿಭಿನ್ನ ಶ್ರೇಷ್ಠ ಜೀವಿಗಳು. ಅವರಿಬ್ಬರೂ ಒಬ್ಬರಿಗೊಬ್ಬರು ಅನ್ಯೋನ್ಯವಾಗರಲಿ ಎಂದೇ ಸೃಷ್ಟಿಸಲಾಗಿರುವ ಎರಡು ಭಿನ್ನ ಪ್ರಾಣಿಗಳು. ಎರಡೂ ಜೀವಿಗಳು ಒಂದಾಗಲು ಬಂದಾಗ, ಇಬ್ಬರಿಗೂ ಯಾವುದು ಓಕೆ ಎಂದು ಮೊದಲು ನಿರ್ಧರಿಸಿಕೊಳ್ಳಬೇಕು.
610
ಲವ್ ಬಗ್ಗೆ ರಶ್ಮಿಕಾ ಮಾತು ವೈರಲ್!
ಅಂದರೆ, ಇಬ್ಬರೂ ಆ ಪ್ರೀತಿ ಎಂಬ ಕಮಿಟ್‌ಮೆಂಟ್‌ಗೆ ಬಂದಾಗ, ಇಬ್ಬರೂ ಬೇರೆ ಬೇರೆ ಜಾಗದಿಂದ ಬಂದು ಒಂದು ಕಡೆ ಸೇರಿ ಇಬ್ಬರಿಗೂ ಓಕೆ ಎನ್ನುವಂಥ ಕಾಂಟ್ರಾಕ್ಸ್ ಆಗಿರಲ್ಲ ಈ ಲವ್ ಅನ್ನೋದು. ಎರಡು ಜೀವಿಗಳ ಮಾನಸಿಕ ತುಮುಲ, ಬಡಿದಾಟ ಎಲ್ಲವೂ ಬೇರೆಬೇರೆಯೇ ಆಗಿರುತ್ತದೆ. ಅಲ್ಲಿ ಎಲ್ಲವೂ ಸರಿ ಇರಲಾಗದು.
710
ಲವ್ ಬಗ್ಗೆ ರಶ್ಮಿಕಾ ಮಾತು ವೈರಲ್!
ಆದರೆ, ಪ್ರೀತಿಗೆ ಅಂತ ಬಿದ್ದಿರುವ ಆ ಎರಡು ಜೀವಿಗಳು ಪ್ರೀತಿಗಾಗಿ ಒಂದಾಗಲು, ಒಬ್ಬರಿಗೋಸ್ಕರ ಮತ್ತೊಬ್ಬರು ಕಮಿಟ್ ಆಗಲು, ಪರಸ್ಪರ ಎಲ್ಲಾ ವಿರೋಧಗಳು, ಮನಸ್ತಾಪಗಳು, ಜಗಳ-ಬಡಿದಾಟಗಳನ್ನು ಒಪ್ಪಿಕೊಂಡು ಕೂಡ ಅವರೊಟ್ಟಿಗೆ ಇರಲು, ಮದುವೆಯಾಗಿ ಸಂಸಾರ ಮಾಡಲು ಒಪ್ಪಿಕೊಂಡರೆ ಅದು ಶಾಶ್ವತ ಪ್ರೀತಿಯಾಗಿ ಬದಲಾಗಬಹುದು ಅಷ್ಟೇ.
810
ಲವ್ ಬಗ್ಗೆ ರಶ್ಮಿಕಾ ಮಾತು ವೈರಲ್!
ಹೀಗಂತ ನಟಿ ರಶ್ಮಿಕಾ ಸಂದರ್ಶಕಿಗೆ ಹೇಳಿದ್ದಾರೆ. ನ್ಯಾಷನಲ್ ಕ್ರಶ್ ನಟಿ ಮಾತು ಕೇಳಿ ಇಂಟರ್‌ವ್ಯೂವರ್ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿ ತಲೆದೂಗಿದ್ದಾರೆ. ಜನಸಾಮಾನ್ಯರು 'ಮೊದಲು ಎಂಗೇಜ್‌ಮೆಂಟ್ ಮುರಿದುಹೋಗಿದ್ದಕ್ಕಾಗಿ ರಶ್ಮಿಕಾಗೆ ಚೀಟರ್, ಮೀಸಗಾತಿ ಎಂದೆಲ್ಲಾ ಪಟ್ಟ ಕಟ್ಟಿದ್ದಾರೆ.
910
ಲವ್ ಬಗ್ಗೆ ರಶ್ಮಿಕಾ ಮಾತು ವೈರಲ್!
ಆದರೆ, ರಶ್ಮಿಕಾ ಹೇಳಿರುವ ಮಾತಲ್ಲಿ ತುಂಬಾನೇ ಮೆಚ್ಯೂರಿಟಿ ಕಾಣಿಸುತ್ತಿದೆ ಅಲ್ವಾ? ಈಗ ನೆಟ್ಟಿಗರು ಅದೇನು ಕಾಮೆಂಟ್ ಮಾಡ್ತಾರೆ ನೋಡ್ಬೇಕು ಅನ್ನೋ ಕತೂಹಲ ಸಹಜವಾಗಿ ಹಲವರಲ್ಲಿ ಮೂಡಿದೆ.
1010
ಲವ್ ಬಗ್ಗೆ ರಶ್ಮಿಕಾ ಮಾತು ವೈರಲ್!
ಕಾರಣ, ರಶ್ಮಿಕಾ ಅವರು ಪ್ರೀತಿಯ ಬಗ್ಗೆ ಹೊಸದೊಂದು ವಿಭಿನ್ನ ಹೇಳಿಕೆ ನೀಡಿದ್ದಾರೆ. ನಿಮಗೆ ರಶ್ಮಿಕಾ ಮಾತು ಇಷ್ಟವಾಯ್ತಾ ಇಲ್ವಾ?