ಡೀಪ್​ಫೇಕ್ ವಿಡಿಯೋ ನೋವು ಮರೆತು ವರ್ಕೌಟ್​ನಲ್ಲಿ ಬ್ಯುಸಿಯಾದ ರಶ್ಮಿಕಾ: ವಿಡಿಯೋ ವೈರಲ್!

Published : Nov 10, 2023, 02:30 AM IST

ಸ್ಯಾಂಡಲ್​ವುಡ್​ನಿಂದ ಸಿನಿ ಕೆರಿಯರ್​ ಆರಂಭಿಸಿರುವ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಎಲ್ಲ ಭಾಷೆಗಳ ಬೆಳ್ಳಿ ತೆರೆ ಮೇಲೆ ನಟಿ ಅಭಿನಯಿಸುತ್ತಿದ್ದಾರೆ. ​ಇದೀಗ ರಶ್ಮಿಕಾ ವರ್ಕೌಟ್‌ ವಿಡಿಯೋ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಸೌಂದರ್ಯ ಮತ್ತು ಫಿಟ್ನೆಸ್‌ನ ಗುಟ್ಟು ತುಸು ರಟ್ಟು ಮಾಡಿದ್ದಾರೆ.

PREV
16
ಡೀಪ್​ಫೇಕ್ ವಿಡಿಯೋ ನೋವು ಮರೆತು ವರ್ಕೌಟ್​ನಲ್ಲಿ ಬ್ಯುಸಿಯಾದ ರಶ್ಮಿಕಾ: ವಿಡಿಯೋ ವೈರಲ್!

ಮೊನ್ನೆ ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಡೀಪ್​ಫೇಕ್​ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ದೇಶದ್ಯಾಂತ ಸಖತ್ ಸೌಂಡ್ ಮಾಡಿತ್ತು. ಸದ್ಯ ಈ ಎಲ್ಲದರ ಮಧ್ಯೆ ವರ್ಕೌಟ್ ಮಾಡುತ್ತಿರೋ ವಿಡಿಯೋವೊಂದನ್ನು ಹಂಚಿಕೊಂಡಿದ್ದು ರಶ್ಮಿಕಾ ಸಖತ್ ಹಾಟ್​.. ಹಾಟ್​ ಆಗಿ ಯುವ ಮನಸುಗಳ ಕಣ್ಣಿಗೆ ಕುಕ್ಕುತ್ತಿದ್ದಾರೆ. ​

26

ತಮ್ಮ ಇನ್​ಸ್ಟಾದಲ್ಲಿ ವಿಡಿಯೋ ಶೇರ್ ಮಾಡಿದ್ದು ಯಾವಾಗ ನಾವು ಉತ್ತಮವಾದ ವರ್ಕೌಟ್ ಮಾಡುತ್ತೇವೋ ಆವತ್ತು ನಮಗೆ ಒಳ್ಳೆಯ ದಿನವಾಗಿರುತ್ತದೆ ಎಂದಿದ್ದಾರೆ. ಇನ್ನು ವಿಡಿಯೋದಲ್ಲಿ ರಶ್ಮಿಕಾ ಫುಲ್ ಬೋಲ್ಡ್​ ಆಗಿ ಹಾಟ್​.. ಹಾಟ್​ ಆಗಿ ಕಾಣಿಸಿಕೊಂಡಿದ್ದರಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತೆ ಆಗಿದೆ. 

36

ಅತ್ಯುತ್ತಮ ವರ್ಕೌಟ್‌ ಮಾಡಿದರೆ ನಿಮ್ಮ ದಿನ ಅತ್ಯುತ್ತಮವಾಗಿರುತ್ತದೆ ಎನ್ನುವುದು ನಿಮಗೆ ಗೊತ್ತಿರಬಹುದು. ಜುನೈದ್‌ ಅವರೇ (ರಶ್ಮಿಕಾ ವರ್ಕೌಟ್‌ ಕೋಚ್‌) ನನಗೆ ನೀವು ಸೂಚಿಸುವಂತಹ ಸರಳ ವ್ಯಾಯಾಮ ಇದೇನಾ?

46

ನನ್ನನ್ನು ಯಾವಾಗಲೂ ಸಾಯಿಸುತ್ತಿರುವುದಕ್ಕೆ ಧನ್ಯವಾದ. ನಾನು ಇನ್ನಷ್ಟು ಸದೃಢವಾಗಿ ಹೊರಬರುವೆ. ಸದೃಢ ನಾಳೆಗೆ ಚೀಯರ್ಸ್'‌ ಎಂದು ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ರಶ್ಮಿಕಾ ಮಂದಣ್ಣ ಕ್ಯಾಪ್ಷನ್‌ ಬರೆದಿದ್ದಾರೆ.

56

ಜಂಪಿಂಗ್, ರನ್ನಿಂಗ್, ಬ್ಯಾಕ್ ಫ್ಲಿಪ್ ಸೇರಿದಂತೆ ರಶ್ಮಿಕಾ ಮಾಡಿರುವ ವರ್ಕೌಟ್ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಅವರ ಪೋಸ್ಟ್‌ಗೆ ಸಾಕಷ್ಟು 'ರೆಸ್ಪೆಕ್ಟ್‌' ಎಂದು ಕಾಮೆಂಟ್‌ ಮಾಡಿದ್ದಾರೆ. 

66

ಇವರ ಈ ಪೋಸ್ಟ್‌ಗೆ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮತ್ತು ಡೀಪ್‌ಫೇಕ್‌ ವಿಷಯವನ್ನೂ ಕೆಲವರು ಎಳೆದು ತಂದಿದ್ದಾರೆ. 'ಎಲಾನ್‌ ಮಸ್ಕ್‌ ಅವತ್ತೇ ಎಐ ಕುರಿತು ಎಚ್ಚರಿಸಿದ್ದರು' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. 'ಚೀಪ್‌ ವಿಷಯಗಳಿಗೆ ಜನರು ಎಐ ಅನ್ನು ತಪ್ಪಾಗಿ ಬಳಸಬಾರದು' ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories