ಕಾರ್ತಿಕ್ ಆರ್ಯನ್ ಜೊತೆ ಬ್ರೇಕ್ ಅಪ್: ಮೌನ ಮುರಿದು, ಬಾಲಿವುಡ್‌ನಲ್ಲಿ ಯಾವುದೂ ಶಾಶ್ವತವಲ್ಲವೆಂದ ಸಾರಾ ಆಲಿ ಖಾನ್

ಬಾಲಿವುಡ್ ಬ್ಯೂಟಿ ಸಾರಾ ಅಲಿ ಖಾನ್ 'ಬಾಲಿವುಡ್‌ನಲ್ಲಿ ಯಾವುದೂ ಶಾಶ್ವತವಲ್ಲ' ಎಂದಿದ್ದಾರೆ. ನಟಿ ಸಾರಾ ಅಲಿ ಖಾನ್ ಹಾಗೂ ನಟ ಕಾರ್ತಿಕ್ ಆರ್ಯನ್ 2022ರಲ್ಲಿ ಬ್ರೇಕ್‌ಅಪ್ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ಹಲವು ವರ್ಷಗಳಷ್ಟು ಕಾಲ ಸಾರಾ-ಕಾರ್ತಿಕ್ ಪ್ರೇಮಿಗಳಾಗಿ, ಪ್ರಣಯ ಪಕ್ಷಿಗಳಾಗಿ ಗುರುತಿಸಿಕೊಂಡಿದ್ದರು. ಆದರೆ, ಈಗ ಅವರಿಬ್ಬರೂ ಬೇರೆಯಾಗಿರುವ ಸ್ವತಂತ್ರ ಹಕ್ಕಿಗಳು. 
 

ನಟಿ ಸಾರಾ ಅಲಿ ಖಾನ್ ಹಾಗೂ ನಟ ಕಾರ್ತಿಕ್ ಆರ್ಯನ್ ಅವರಿಬ್ಬರದು ಬಹಕಾಲದ ಲವ್. ಕೇದಾರನಾಥ್, ಲವ್ ಆಜ್‌ ಕಲ್, ಸಿಂಬಾ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಸಾರಾ ಅಲಿ ಖಾನ್. ಇತ್ತೀಚೆಗೆ ಸ್ವಲ್ಪ ಚೂಸಿ ಆಗಿದ್ದಾರೆ. 

ನಟಿ ಸಾರಾ ಅಲಿ ಖಾನ್ ಹಾಗೂ ನಟ ಕಾರ್ತಿಕ್ ಆರ್ಯನ್ ಅವರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು ಮಾತ್ರವಲ್ಲ, ಹಲವು ಜಾಹೀರಾತುಗಳಲ್ಲಿ ಕೂಡ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅವರಿಬ್ಬರದು ತೆರೆಯ ಮೇಲೆ ಕೂಡ ಸೂಪರ್ ಕೆಮೆಸ್ಟ್ರಿ ಎನ್ನಬಹುದು.


ನಟಿ ಸಾರಾ ಅಲಿ ಖಾನ್ ಅವರು ತಮ್ಮಿಬ್ಬರ ಬ್ರೇಕ್‌ಅಪ್ ಬಗ್ಗೆ ಮಾತನಾಡಿದ್ದಾರೆ. ಕಾಂಟ್ರೋವರ್ಸಿಯಲ್ ಶೋ 'ಕಾಫಿ ವಿತ್ ಕರಣ್' ದಲ್ಲಿ ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ನಟಿ ಸಾರಾ ಅಲಿ ಖಾನ್ ಯಾವುದೇ ಮುಚ್ಚುಮರೆ ಇಲ್ಲದೇ ಮಾತನಾಡಿದ್ದಾರೆ. 

ನಟ ಕರಣ್ ಜೋಹರ್ ಯಾವತ್ತೂ ವಿವಾದಾತ್ಮಕ ಪ್ರಶ್ನೆ ಕೇಳುವುದರಲ್ಲಿ ನಿಸ್ಸೀಮರು. ಕಾಫಿ ವಿತ್ ಕರಣ್ ಶೋದಲ್ಲಿ ಅದೂ ಇದೂ ಮಾತನಾಡಿದ ಕರಣ್, ನೇರವಾಗಿ ಸಾರಾ ಅಲಿ ಖಾನ್ ಬಳಿ ಕಾರ್ತಿಕ್ ಆರ್ಯನ್ ಬ್ರೇಕ್‌ಅಪ್ ವಿಷಯ ಎತ್ತಿದ್ದಾರೆ. 

ಕರಣ್ ಪ್ರಶ್ನೆಗೆ ಸ್ವಲ್ಪವೂ ತಬ್ಬಿಬ್ಬಾಗದ ನಟಿ ಸಾರಾ ಅಲಿ ಖಾನ್ 'ಹೌದು, ನಾನು ಮತ್ತು ಕಾರ್ತಿಕ್ ಆರ್ಯನ್ ಬ್ರೇಕ್‌ಅಪ್ ಮಾಡಿಕೊಂಡಿದ್ದೇವೆ. ನಾವಿಬ್ಬರೂ ಈಗ ಬೆಸ್ಟ್ ಫ್ರಂಡ್ಸ್, ಪ್ರೇಮಿಗಳಲ್ಲ' ಎಂದಿದ್ದಾರೆ. 

ನಟ ಕರಣ್ ಜೋಹರ್ 'ಬ್ರೇಕಪ್ ಬಳಿಕ ನಿಮಗೆ ಬೇಸರವೇನೂ ಆಗಿಲ್ಲವೇ' ಎಂದು ಕೇಳಿದ ಪ್ರಶ್ನೆಗೆ ನಟಿ ಸಾರಾ 'ಹೌದು, ಬೇಸರ ಅಗಿತ್ತು, ಆಗಲೇಬೇಕು. ನನಗೆ ತುಂಬಾನೇ ನೋವು ಆಗಿದೆ ಕೂಡ. ಆದರೆ. ಎಲ್ಲವನ್ನೂ ಮರೆಯುತ್ತಿದ್ದೇನೆ' ಎಂದಿದ್ದಾರೆ. 

ಅದು ಯಾವುದೇ ಸಂಬಂಧವಿರಲಿ, ಸ್ನೇಹಿತರಾಗಲಿ, ಮನೆಯವರಾಗಲಿ ಅಥವಾ ಪ್ರೇಮಿಯೇ ಆಗಿರಲಿ, ಅವರೊಂದಿಗೆ ನಾವು ನಮ್ಮ ಭಾವನೆಗಳನ್ನು, ಇಷ್ಟಕಷ್ಟಗಳನ್ನು ಹಂಚಿಕೊಂಡಿರುತ್ತೇವೆ. ಅಂಥವರೊಂದಿಗೆ ಸಂಬಂಧ ಮುರಿದುಕೊಂಡಾಗ ಸಹಜ ಎಂಬಂತೆ ನೋವು ಕಾಡುತ್ತದೆ. 

ಆದರೆ, ಬ್ರೇಕಪ್ ಬಳಿಕ ನನಗೆ ಒಂದು ವಿಷಯವಂತೂ ಸ್ಪಷ್ಟವಾಗಿದೆ. ಅದೇನೆಂದರೆ, ಬಾಲಿವುಡ್‌ನಲ್ಲಿ ಯಾವುದೂ ಶಾಶ್ವತವಲ್ಲ. ಅದು ಸ್ನೇಹವೇ ಇರಲಿ, ಶತ್ರುತ್ವವೇ ಇರಲಿ, ಬಾಲಿವುಡ್ ಅಂಗಳದಲ್ಲಿ ಯಾವುದು ಕೂಡ ಪರಮನೆಂಟ್ ಅಲ್ಲವೇ ಅಲ್ಲ' ಎಂದಿದ್ದಾರೆ. 

ನಟಿ ಸಾರಾ ಅಲಿ ಖಾನ್ ಹಾಗೂ ನಟ ಕಾರ್ತಿಕ್ ಆರ್ಯನ್ ಅವರಿಬ್ಬರೂ ಬ್ರೇಕಪ್‌ ಬಳಿಕ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಆದರೆ, ಈ ವೇಳೆ ಅವರಿಬ್ಬರ ನಡುವೆ ಅಂತರವಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುವಂತಿತ್ತು.

ಬಾಲಿವುಡ್ ಬ್ಯೂಟಿ ಸಾರಾ ಅಲಿ ಖಾನ್ 'ಬಾಲಿವುಡ್‌ನಲ್ಲಿ ಯಾವುದೂ ಶಾಶ್ವತವಲ್ಲ' ಎಂದಿದ್ದಾರೆ. ನಟಿ ಸಾರಾ ಅಲಿ ಖಾನ್ ಹಾಗೂ ನಟ ಕಾರ್ತಿಕ್ ಆರ್ಯನ್ 2022ರಲ್ಲಿ ಬ್ರೇಕ್‌ಅಪ್ ಮಾಡಿಕೊಂಡಿದ್ದಾರೆ. 

ನಟಿ ಸಾರಾ ಅಲಿ ಖಾನ್ ಹಲವು ಚಿತ್ರಗಳಿಗೆ ಸಹಿ ಹಾಕಿದ್ದು, ಬ್ರೇಕಪ್‌ ಬಳಿಕ ಅವರೇನೂ ಸುಮ್ಮನೇ ಕೂತಿಲ್ಲ. ನಟ ಕಾರ್ತಿಕ್ ಆರ್ಯನ್ ಕೂಡ ಅಷ್ಟೇ, ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. 

Latest Videos

click me!