Chocolate ಡ್ರೆಸ್ ಲುಕ್‌ನಲ್ಲಿ​ Rashmika Mandanna: ಟೆಡ್ಡಿಬೇರ್‌ಗಿಂತ ನೀವೆ ಸುರಸುಂದರಿ ಎಂದ ಫ್ಯಾನ್ಸ್‌!

First Published | Dec 15, 2023, 5:09 PM IST

ನ್ಯಾಶನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ ಅಪಾರ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿ ರಶ್ಮಿಕಾ ಈಗ ಫುಲ್ ಬ್ಯುಸಿಯಾಗಿದ್ದಾರೆ. ತನ್ನ ಬ್ಯೂಟಿಯಿಂದಲೇ ಅಭಿಮಾನಿಗಳ ಮನಗೆದ್ದ ರಶ್ಮಿಕಾ ಇದೀಗ ಹೊಸ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

‘ಅನಿಮಲ್’ ಚಿತ್ರದ ಸಕ್ಸಸ್ ಅಲೆಯಲ್ಲಿ ರಶ್ಮಿಕಾ ಮಂದಣ್ಣ ತೇಲುತ್ತಿದ್ದಾರೆ. ಮತ್ತೆ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ರಶ್ಮಿಕಾ ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. 

ಕಾಫಿ ಕಲರ್ ಬಣ್ಣದ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ರಶ್ಮಿಕಾ ನಯಾ ಲುಕ್‌ಗೆ 16 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಸಾವಿರಾರು ಕಾಮೆಂಟ್ಸ್ ಬಂದಿದೆ. 

Latest Videos


ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಲುಕ್‌ ನೋಡಿ ನೆಟ್ಟಿಗರು, ಹಾಟ್, ಸೋ ಬ್ಯೂಟಿಫುಲ್, ನ್ಯಾಷ್‌ನಲ್ಲ ಕ್ರಶ್ಮಿಕಾ ಹಾಗೂ ಟೆಡ್ಡಿಬೇರ್‌ಗಿಂತ ನೀವೆ ಸುರಸುಂದರಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

ರಣ್‌ಬೀರ್ ಕಪೂರ್‌ ನಟನೆಯ ‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್- ರಶ್ಮಿಕಾ ಜೋಡಿ ಮೋಡಿ ಮಾಡಿದೆ. ಲಿಪ್‌ಲಾಕ್ ಸೇರಿದಂತೆ ಹಲವು ಹಸಿಬಿಸಿ ದೃಶ್ಯಗಳಲ್ಲಿ ಕೊಡಗಿನ ಬೆಡಗಿ ನಟಿಸಿದ್ದಾರೆ. ಅನಿಮಲ್ ಸಿನಿಮಾದ ಸಕ್ಸಸ್‌ನಿಂದ ರಶ್ಮಿಕಾ ಬಾಲಿವುಡ್‌ನಲ್ಲಿ ಮತ್ತಷ್ಟು ಮನ್ನಣೆ ಸಿಕ್ಕಿದೆ.

ಅದೆಷ್ಟೇ ಟ್ರೋಲ್ ಆದ್ರೂ ಅನಿಮಲ್ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅನಿಮಲ್ ಸಿನಿಮಾದಲ್ಲಿ ಆಂಧ್ರ ಹುಡುಗಿಯ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. 

ಸದ್ಯ ರಶ್ಮಿಕಾ ಮಂದಣ್ಣ ತೆಲುಗು, ಕನ್ನಡ, ತಮಿಳು, ಹಿಂದಿ ಹೀಗೆ ಎಲ್ಲಾ ಇಂಡಸ್ಟ್ರಿಗಳಲ್ಲೂ ತಮ್ಮ ಶಕ್ತಿ ತೋರಿಸುತ್ತಿದ್ದಾರೆ. ಹಿಂದಿಯಲ್ಲಿ ಟಾಪ್ ಟಕ್ಕರ್ ಎಂಬ ಆಲ್ಬಂ ಮೂಲಕ ಫೇಮಸ್ ಆದ ರಶ್ಮಿಕಾ ನಂತರ ‘ಗುಡ್ ಬೈ’ ಮತ್ತು ‘ಮಿಷನ್ ಮಜ್ನು’ ಚಿತ್ರಗಳ ಮೂಲಕ ಬಾಲಿವುಡ್​ ಜರ್ನಿ ಆರಂಭಿಸಿದ್ರು.

ಇದೀಗ ಬಾಲಿವುಡ್​ ನಟಿ ಅನಿಮಲ್ ಸಿನಿಮಾ ಮೂಲಕ ಬಿಗ್ ಹಿಟ್ ನೀಡಿದ್ದಾರೆ. ಅನಿಮಲ್ ಸಿನಿಮಾ ಬಳಿಕ ರಶ್ಮಿಕಾ ಮಂದಣ್ಣ, ಬಾಲಿವುಡ್​ ಟಾಪ್​ ನಟಿಯರ ಲಿಸ್ಟ್​ ಸೇರಿಕೊಂಡಿದ್ದಾರೆ.

click me!